ಮೂರನೇ ಅಲೆ ತಡೆಗೆ ಲಸಿಕೆ ಹಾಕಿಸಿಕೊಳ್ಳಿ
Team Udayavani, Oct 20, 2021, 2:47 PM IST
ಕಲಬುರಗಿ: ಕೊರೊನಾ ಸೋಂಕಿನ ಸಂಭವನೀಯಮೂರನೇ ಅಲೆ ತಪ್ಪಿಸಲು ಪ್ರತಿಯೊಬ್ಬರು ಲಸಿಕೆಯನ್ನುಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ರಾಜ್ಯ ವಿಪತ್ತುನಿರ್ವಹಣಾ ಪ್ರಾ ಧಿಕಾರದ ಉಪಾಧ್ಯಕ್ಷರಾದ ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ನಗರದ ಸರ್ಕಾರಿ ಐಟಿಐ ಕಾಲೇಜಿನ ಆವರಣದಲ್ಲಿಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಲಸಿಕೆ ಜಾಗೃತಿಅಭಿಯಾನಕ್ಕೆ ಚಾಲನೆ ಮತ್ತು ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದ ಪರಿಹಾರಧನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೆ ಶೇ.68ರಷ್ಟು ಮೊದಲಡೋಸ್ ಲಸಿಕಾಕರಣವಾಗಿದೆ. ಬೇರೆ ಜಿಲ್ಲೆಗೆಹೋಲಿಸಿದರೆ ಕಲಬುರಗಿಯಲ್ಲಿ ಲಸಿಕಾಕರಣಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಮುಂಬರುವದಿನಗಳಲ್ಲಿ ಶೇ.100ರಷ್ಟು ಪ್ರಗತಿ ಸಾ ಧಿಸಬೇಕು. ಲಸಿಕೆಗೆಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದುಸಲಹೆ ನೀಡಿದರು.
ಕೊರೊನಾ ಲಸಿಕೆ ಹಾಕಿಕೊಳ್ಳದಿರುವವರುಬೇಗನೆ ಲಸಿಕೆ ಹಾಕಿಸಿಕೊಳ್ಳಬೇಕು. ಮುಖ್ಯವಾಗಿಸಂಭವನೀಯ ಮೂರನೇ ಅಲೆ ತಪ್ಪಿಸಲು ಜಾತಿಮತ್ತು ಧರ್ಮಗಳ ತಾರತಮ್ಯವಿಲ್ಲದೇ ಎಲ್ಲರೂ ಉಚಿಕೆಲಸಿಕೆ ಪಡೆಯಬೇಕು. ಲಸಿಕೆ ಕುರಿತು ಜನರಲ್ಲಿ ಜಾಗೃತಿಮೂಡಿಸಲು ಸರ್ಕಾರ ಪ್ರತಿ ಹಳ್ಳಿ-ಗ್ರಾಮ ಮಟ್ಟದಲ್ಲೂಇಂತಹ ಜಾಥಾ ಕಾರ್ಯಕ್ರಮ ನಡೆಸಲಿದೆ ಎಂದರು.
ಕೊರೊನಾ ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಬಹುತೇಕ ಜನರು ಮನೆಯಲ್ಲೇಸುರಕ್ಷಿತವಾಗಿದ್ದ ಸಂದರ್ಭದಲ್ಲಿ ಆರೋಗ್ಯಸಿಬ್ಬಂದಿ ಮತ್ತು ಕಾರ್ಯಕರ್ತರು ತಮ್ಮ ಜೀವದಹಂಗನ್ನು ತೊರೆದು ಸೋಂಕು ನಿಯಂತ್ರಣಕ್ಕೆತರಲು ಶ್ರಮಿಸಿದ್ದಾರೆ. ತಮ್ಮ ಬದುಕನ್ನೇ ಪಣಕ್ಕಿಟ್ಟುಸೇವೆ ಮಾಡಿರುವ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಅಂಬ್ಯುಲೆನ್ಸ್ ಚಾಲಕರ ಸೇವೆಯೂಶ್ಲಾಘನೀಯವಾಗಿದೆ ಎಂದರು.
ಲಸಿಕೆ ಜಾಗೃತಿ ಅಭಿಯಾನದಲ್ಲಿ ಸುಲಫಲ ಮಠದಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ,ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ, ಮುಸ್ಲಿಂಧರ್ಮಗುರು ಅಲಿಬಾಬಾ, ಬುದ್ಧ ವಿಹಾರದ ಪೂಜ್ಯಸಂಘಾನಂದ ಭಂತೇಜಿ, ಸೆಂಟ್ ಮೇರಿ ಚರ್ಚಿನಫಾದರ್ ಸ್ಟಾÂನಿ ಲೋಬೊ ಪಾಲ್ಗೊಂಡಿದ್ದರು.
ಸಂಸದ ಡಾ| ಉಮೇಶ ಜಾಧವ, ಕೆಕೆಆರ್‌ಡಿಬಿಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ಟಿಸಿಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಗ್ರಾಮೀಣಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ಸದಸ್ಯ ಬಿ.ಜಿ. ಪಾಟೀಲ, ರಾಜ್ಯ ವಿಪತ್ತು ನಿರ್ವಹಣಾಪ್ರಾಧಿ ಕಾರದ ಆಯುಕ್ತ ಮನೋಜ್ ರಾಜನ್,ಜಿಲ್ಲಾ ಧಿಕಾರಿ ವಿ.ವಿ.ಜ್ಯೋತ್ಸಾ ° , ಜಿಲ್ಲಾ ಪಂಚಾಯಿತಿಸಿಇಒ ಡಾ| ದಿಲೀಷ್ ಸಸಿ, ಮಹಾನಗರ ಪಾಲಿಕೆಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಆರೋಗ್ಯಇಲಾಖೆ ಜಂಟಿ ನಿರ್ದೇಶಕ ಡಾ| ಅಬೀಬ್ ಹುಸ್ಮಾನ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಡಾ| ಶರಣಬಸಪ್ಪ ಗಣಜಲಖೇಡ್, ಆರ್‌ಸಿಎಚ್‌ಅಧಿ ಕಾರಿ ಪ್ರಭುಲಿಂಗ ಮಾನಕರ, ಪಾಲಿಕೆ ಆರೋಗ್ಯಾಧಿಕಾರಿ ಡಾ| ವಿನೋದ ಕುಮಾರ ಸೇರಿದಂತೆ ವಿವಿಧಇಲಾಖೆ ಅಧಿ ಕಾರಿಗಳು ಇದ್ದರು.ಇದಕ್ಕೂ ಮುನ್ನ ನಗರದ ಕೇಂದ್ರ ಬಸ್ ನಿಲ್ದಾಣದಿಂದಆರಂಭವಾದ ಜಾಗೃತಿ ಜಾಥಾದಲ್ಲಿ ಶಾಲೆ-ಕಾಲೇಜು,ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳು, ಆಶಾಕಾರ್ಯಕರ್ತೆಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.