ಸಿದ್ದು, ಡಿಕೆಶಿ ಪ್ರಯಾಣಿಸುತ್ತಿದ್ದ ವಿಮಾನ ತಡವಾಗಿ ಲ್ಯಾಂಡ್
Team Udayavani, Nov 22, 2021, 4:04 PM IST
ಕಲಬುರಗಿ: ಹವಾಮಾನ ವೈಪರೀತ್ಯಹಿನ್ನೆಲೆಯಲ್ಲಿ ಕಲಬುರಗಿ ವಿಮಾನನಿಲ್ದಾಣದಲ್ಲಿ ರವಿವಾರ ಎರಡುವಿಮಾನಗಳ ಲ್ಯಾಂಡಿಂಗ್ ಸಾಧ್ಯವಾಗದೇಮಾರ್ಗ ಬದಲಾವಣೆ ಮಾಡಿಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿಇಳಿದಿವೆ. ಅಲ್ಲದೇ, ವಿಪಕ್ಷ ನಾಯಕಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ ಅವರಿದ್ದ ಮತ್ತೂಂದುವಿಶೇಷ ವಿಮಾನ ಕೂಡ ತಡವಾಗಿಲ್ಯಾಂಡ್ ಆಗಿದೆ.
ನಗರದಲ್ಲಿ ರವಿವಾರ ಬೆಳಗಿನ ಜಾವಮಳೆ ಸುರಿದಿತ್ತು. ನಂತರ ದಿನವಿಡೀಮೋಡ ಕವಿದ ವಾತಾವರಣ ಇತ್ತು.ಪರಿಣಾಮ ಬೆಳಗ್ಗೆ ಬೆಂಗಳೂರಿನಿಂದಬಂದ ವಿಮಾನ ಮತ್ತು ಮಧ್ಯಾಹ್ನತಿರುಪತಿಯಿಂದ ಬರಬೇಕಿದ್ದ ಮತ್ತೂಂದುವಿಮಾನ ಇಲ್ಲಿನ ವಿಮಾನ ನಿಲ್ದಾಣದಲ್ಲಿಇಳಿಯಲು ಸಾಧ್ಯವಾಗಲಿಲ್ಲ.ಬೆಂಗಳೂರಿನಿಂದ ಬೆಳಗ್ಗೆ 8:40ಕ್ಕೆಹೊರಟ್ಟಿದ್ದ ಸ್ಟಾರ್ ಏರ್ ವಿಮಾನ ಇಲ್ಲಿ9:45ಕ್ಕೆ ಬಂದಿಳಿಯಬೇಕಿತ್ತು. ಆದರೆ,ಪ್ರತಿಕೂಲ ವಾತಾವರಣ ಹಿನ್ನೆಲೆಯಲ್ಲಿವಿಮಾನ ಇಳಿಯಲು ಸಾಧ್ಯವಾಗದೇಹೈದ್ರಾಬಾದ್ ವಿಮಾನ ನಿಲ್ದಾಣದತ್ತಮಾರ್ಗ ಬದಲಾವಣೆ ಮಾಡಿತು.
ಈ ವಿಮಾನದಲ್ಲಿ ಶಾಸಕರಾದ ಡಾ|ಅಜಯಸಿಂಗ್, ಪ್ರಿಯಾಂಕ್ ಖರ್ಗೆ,ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣಕೂಡ ಇದ್ದರು. ಹೈದ್ರಾಬಾದ್‌ನಲ್ಲಿಲ್ಯಾಂಡ್ ಆದ ಕಾರಣದ ಅಲ್ಲಿಂದ ರಸ್ತೆಮೂಲಕ ಕಲಬುರಗಿಗೆ ಬಂದರು.ಮಧ್ಯಾಹ್ನ ಕೂಡ ಸುಮಾರು ಹೊತ್ತುತುಂತುರು ಮಳೆ ಸುರಿಯಿತು. ಆದ್ದರಿಂದತಿರುಪತಿಯಿಂದ ಮಧ್ಯಾಹ್ನ 2:55ಕ್ಕೆಕಲಬುರಗಿಗೆ ಹೊರಟಿದ್ದ ಮತ್ತೂಂದುಸ್ಟಾರ್ ಏರ್ ವಿಮಾನ ಕೂಡ ಇಲ್ಲಿನವಿಮಾನ ನಿಲ್ದಾಣದಲ್ಲಿ ಇಳಿಯಲುಸಾಧ್ಯವಾಗಲಿಲ್ಲ. ವಿಮಾನ ನಿಲ್ದಾಣದಲ್ಲಿಪ್ರತಿಕೂಲ ವಾತಾವರಣ ನಿರ್ಮಾಣದಮಾಹಿತಿ ಅರಿತು ಮಾರ್ಗ ಮಧ್ಯದಲ್ಲೇಹೈದ್ರಾಬಾದ್‌ನತ್ತ ತೆರಳಿತು. ಈ ವಿಮಾನಕಲಬುರಗಿಯಲ್ಲಿ ಮಧ್ಯಾಹ್ನ 3:55ಕ್ಕೆಲ್ಯಾಂಡ್ ಆಗಬೇಕಿತ್ತು.
ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ ವಿಶೇಷ ವಿಮಾನದಮೂಲಕ ಕಲಬುರಗಿಗೆ ಬಂದರು.ಆದರೆ, ಹವಾಮಾನ ವೈಪರೀತ್ಯಕಾರಣ ನಿಗದಿತ ಸಮಯಕ್ಕಿಂತಅರ್ಧ ಗಂಟೆ ತಡವಾಗಿ ವಿಮಾನಕ್ಕೆಬಂದಿಳಿಯಿತು. ಬೆಂಗಳೂರಿನಿಂದ ಸಂಜೆ4 ಗಂಟೆ ಸುಮಾರಿಗೆ ಈ ವಿಶೇಷ ವಿಮಾನಹೊರಟಿತ್ತು.
ಪ್ರತಿಕೂಲ ವಾತಾವರಣಹಿನ್ನೆಯಲ್ಲಿ ಸಿಗ್ನಲ್ ಸಮಸ್ಯೆ ಕಾರಣಕಲಬುರಗಿ ಬದಲಾಗಿ ಹೈದ್ರಾಬಾದ್‌ನಲ್ಲಿಲ್ಯಾಂಡ್ ಮಾಡಲು ನಿರ್ಧರಿಸಲಾಗಿತ್ತುಎಂಬ ಮಾಹಿತಿ ಲಭ್ಯವಾಗಿದೆ.ಇನ್ನು, ವಿಮಾನ ನಿಲ್ದಾಣದಿಂದ ನಿತ್ಯವೂಬೆಂಗಳೂರು, ತಿರುಪತಿ ಮತ್ತು ದೆಹಲಿಗೆವಿಮಾನಗಳ ಹಾರಾಟ ನಡೆಸುತ್ತಿದ್ದು,ಅಂದಾಜು 300 ಪ್ರಯಾಣಿಕರುಸಂಚರಿಸುತ್ತಾರೆ. ಆದರೆ, ರವಿವಾರಬೆಂಗಳೂರು-ಕಲಬುರಗಿ ನಡುವಿನ 72ಸೀಟು ಸಾಮರ್ಥಯದ ಒಂದೇ ವಿಮಾನಹಾರಾಟ ನಡೆಸಿದೆ. ಬೆಂಗಳೂರಿಂದ 63ಜನ ಬಂದಿಳಿದ್ದು, ಇಲ್ಲಿಂದ 67 ಮಂದಿಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಬೆಳೆಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.