ಪರ್ಸೆಂಟೆಜ್ ಪಡೆದ ಬಳಿಕವೇ ಭೂಮಿ ಪೂಜೆ :ಪರ್ಸೆಂಟೆಜ್ ದಂಧೆ ವಿರುದ್ಧ ಜಗನ್ನಾಥ ಶೇಗಜಿ ಆರೋಪ
Team Udayavani, Apr 13, 2022, 5:50 PM IST
ಕಲಬುರಗಿ: ಕಾಮಗಾರಿಗೆ 10% ಪರ್ಸೆಂಟೆಜ್ ತೆಗೆದುಕೊಂಡ ನಂತರವೇ ಶಾಸಕರು ಭೂಮಿಪೂಜೆ ನೆರವೇರಿಸುತ್ತಾರೆ ಎಂದು ಕಲಬುರಗಿ ಜಿಲ್ಲಾ ಕಾಂಟ್ರಾಕ್ಟ್ ರ್ಸ್ ಅಸೋಸಿಯೇಷನ್ ಆರೋಪಿಸಿದೆ.
ಕಾಮಗಾರಿ ಟೆಂಡರ್ ವಾಗಿ ಜತೆಗೆ ಒಪ್ಪಂದ ನಡೆದು ಆರೇಳು ತಿಂಗಳಾದರೂ ಕಾಮಗಾರಿ ಆರಂಭಿಸುತ್ತಿಲ್ಲ. ಪರ್ಸೆಂಟೆಜ್ ( ನೈವೇದ್ಯ) ನೀಡಿದ ನಂತರವೇ ಪೂಜೆ ನೆರವೇರಿಸಲಾಗುತ್ತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಶೇಗಜಿ ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ಆರೋಪಿಸಿದರು.
ಕಾಮಗಾರಿಗಳಿಗೆ ಸಂಬಂಧಿಸಿದಂತೆ 40 ಪರ್ಸೆಂಟೆಜ್ ಕುರಿತಾಗಿ ಈಗಾಗಲೇ ದೂರು ಸಲ್ಲಿಸಲಾಗಿದ್ದರೂ ಯಾವುದೇ ತನಿಖೆ ಹಾಗೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂತೋಷ ಪಾಟೀಲ್ ಆತ್ಮಹತ್ಯೆ ನಡೆದಿದೆ. ಸರ್ಕಾರಿ ಇದೇ ಧೋರಣೆ ಮುಂದುವರೆಸಿದರೆ ಮತ್ತಷ್ಟು ಗುತ್ತಿಗೆದಾರರು ತೊಂದರೆಗೆ ಒಳಗಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ತಾವು 20% ಲೆಸ್ ಹಾಕಿದ್ದರೂ ತಮಗೆ ಕೆಲಸ ನೀಡದೇ 20% ಹೆಚ್ಚುವರಿಗೆ ಟೆಂಡರ್ ನಿಗದಿಗೊಳಿಸಿ ತಮಗೆ ಬೇಕಾದವರಿಗೆ ಕಾಮಗಾರಿ ನೀಡಲಾಗುತ್ತಿದೆ. ಕಾಮಾಗಾರಿ ಮಂಜೂರಾತಿಯಿಂದ ಹಿಡಿದು ಬಿಲ್ ಆಗುವರೆಗೂ ಫಿಕ್ಸ್ ಪರ್ಸೆಂಟೆಜ್ ಇದೆ. ಬಹು ಮುಖ್ಯವಾಗಿ ಲೆಸ್ ನಲ್ಲಿ ಟೆಂಡರ್ ಪಡೆದು ಕಾಮಗಾರಿ ಮುಕ್ತಾಯಗೊಳಿಸಿದ್ದರೂ ತಮ್ಮದ್ಯಾವುದು ಬಿಲ್ ಮಾಡ್ತಾ ಇಲ್ಲ.
ಇದನ್ನೂ ಓದಿ : ಬೈಕ್‌ಗೆ ಢಿಕ್ಕಿ ಹೊಡೆದ ಕಾರು: ಪೇದೆ ಸಾವು, ಎಎಸ್ಸೈಗೆ ಗಾಯ
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಲ್ಕು ಸಾವಿರ ಕೋ. ರೂ. ಬಿಲ್ ಬಾಕಿ ಇದೆ. ಈಗ ಹೊಸದಾಗಿ ಕೆಲಸ ಮಾಡಿದವರಿಗೆ ಪರ್ಸೆಂಟೆಜ್ ಪಡೆದು ಬಿಲ್ ಮಾಡಲಾಗುತ್ತಿದೆ. ಆದರೆ ಎಲ್ಲ ನಿಯಮಾವಳಿ ಪ್ರಕಾರ ಕಾಮಗಾರಿ ಮಾಡಿದ ತಮಗೆ ಬಿಲ್ ಮಾಡದೇ ಸತಾಯಿಸಲಾಗುತ್ತಿದೆ ಎಂದು ಶೇಗಜಿ ದೂರಿದರು.
ಮೃತ ಸಂತೋಷ ಪಾಟೀಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಈ ಕೂಡಲೇ 25 ಲಕ್ಷ ರೂ ಪರಿಹಾರ ನೀಡಬೇಕು. ಸೂಕ್ತ ತನಿಖೆಯಾಗಿ ಈ ತಿಂಗಳ ಒಳಗಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ವಿಧಾನಸೌಧದ ಮುತ್ತಿಗೆ ಹಾಕಲಾಗುವುದು. ಎಷ್ಟೇ ಜೀವ ಹೋದರೂ ಗುತ್ತಿಗೆದಾರರ ಸಂಘ ಹಿಂದೆ ಸರಿಯದು ಎಂದು ಜಗನ್ನಾಥ ಶೇಗಜಿ ಗುಡುಗಿದರು.
ದನಗಳ ಸಂತೆಯಲ್ಲಿ ಎಮ್ಮೆ ಕರುಗಳು ಖರೀದಿ ಮಾಡಿರುವಂತೆ ಶಾಸಕರನ್ನು ಖರೀದಿ ಮಾಡಿರುವಾಗ ಭ್ರಷ್ಟಾಚಾರ ನಡೆಯದೆ ಇನ್ನೇನು ಸಾಧ್ಯ. ಇನ್ಮುಂದೆಯಾದರೂ ಪರ್ಸೆಂಟೆಜ್ ದಂಧೆ ನಿಲ್ಲಲಿ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.