ಕಲಬುರಗಿ: ಅತಿವೃಷ್ಟಿ ಸಂತ್ರಸ್ತರಿಗೆ 1.13 ಕೋಟಿ ರೂ. ಮೊತ್ತದ ದಿನಬಳಕೆ ಸಾಮಾಗ್ರಿ ವಿತರಣೆ
Team Udayavani, Dec 25, 2020, 6:59 PM IST
ಕಲಬುರಗಿ: ಕಳೆದ ಅಕ್ಟೋಬರ್ ತಿಂಗಳಲ್ಲಿ ಶತಮಾನದ ಮೇಘಸ್ಪೋಟಕ್ಕೆ ತುತ್ತಾದ ಜಿಲ್ಲೆಯ ಭೀಮಾ ನದಿ ತೀರದ ಸಂತ್ರಸ್ತರಿಗೆ 1.13 ಕೋ ಮೊತ್ತದ ದಿನಬಳಕೆಯ ದವಸ ಧಾನ್ಯ ಹಾಗೂ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಗುಲ್ಬರ್ಗ ಮಿಡ್ ಟೌನ್ ಅಧ್ಯಕ್ಷ ರೊ. ಡಾ. ಸುಧಾ ಹಾಲಕಾಯಿ ತಿಳಿಸಿದರು.
ಸಾರ್ವಜನಿಕ ಉದ್ಯಾನವನದಲ್ಲಿರುವ ರೋಟರಿ ಕ್ಲಬ್ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ಫೋಸಿಸ್ ಹಾಗೂ ರಾಮಕೃಷ್ಣ ಸೇವಾಶ್ರಮ ಮತ್ತು ಇತರ ಸಹಾಯದೊಂದಿಗೆ ರೋಟರಿ ಕ್ಲಬ್ ಮುಂದೆ ನಿಂತು ಸಂತ್ರಸ್ತರಿಗೆ ನೇರವಾಗಿ ಅವರ ಬಳಿ ತೆರಳಿ ಸಹಾಯ ಕಲ್ಪಿಸಲಾಗಿದೆ ಎಂದು ವಿವರಣೆ ನೀಡಿದರು.
ಅತಿವೃಷ್ಟಿ ಸಂದರ್ಭದಲ್ಲೇ ಗ್ರಾಮಗಳಿಗೆ ತೆರಳಲು ಕಷ್ಟಸಾಧ್ಯವಿದ್ದರೂ ಹರಸಾಹಸದೊಂದಿಗೆ ತೀವ್ರ ಸಂಕಷ್ಟದಲ್ಲಿದ್ದ 15 ಗ್ರಾಮಗಳ ಸುಮಾರು 2900 ಕುಟುಂಬಗಳಿಗೆ ತಲಾ ನಾಲ್ಕು ಸಾವಿರ ಮೌಲ್ಯದ ಅಕ್ಕಿ, ತೊಗರಿ ಬೇಳೆ, ಸಕ್ಕರೆ, ಎಣ್ಣೆ, ರವಾ, ಬಟರ್ ಸೇರಿ ಇತರ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸಲಾಗಿದೆ. ಇನ್ಫೋಸಿಸ್ ನ ಸುಧಾ ನಾರಾಯಣಮೂರ್ತಿ ಸಾಮಾಗ್ರಿಗಳನ್ನು ಅವರ ತಂಡದೊಂದಿಗೆ ಕಳುಹಿಸಿದ್ದರಿಂದ ಜತೆಗೆ ರಾಮಕೃಷ್ಣ ಸೇವಾಶ್ರಮ ಸ್ವಾಮಿ ಜಪಾನಂದ ಅವರ ಸಹಾಯ, ಸಹಕಾರದೊಂದಿಗೆ, ರೆಡ್ ಕ್ರಾಸ್ ಸಂಸ್ಥೆ ಮತ್ತು ರೊಟರಿ ಕ್ಲಬ್ ಮಿಡ್ ಟೌನ್ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಿಸಿದ್ದಲ್ಲದೇ ಇತರ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಭಾರತದ ರೈತ ಪ್ರತಿಭಟನೆ: ಸಮಸ್ಯೆ ಬಗೆಹರಿಸಲು ಮೈಕ್ ಪೊಂಪಿಯೊಗೆ ಪತ್ರ ಬರೆದ ಅಮೆರಿಕನ್ ಸಂಸದರು
ಅತಿವೃಷ್ಟಿ ಸಂತ್ರಸ್ತರಿಗೆ ವಿತರಿಸಲಾದ 1.13 ಕೋ. ರೂ ಮೊತ್ತದಲ್ಲಿ ರೊಟರಿ ಕ್ಲಬ್ ಮಿಡ್ ಟೌನ್ ಕ್ಲಬ್ ದಿಂದ 19.50 ಲಕ್ಷ ರೂ ದೇಣಿಗೆ ಸಂಗ್ರಹವಾಗಿದೆ. ಕ್ಲಬ್ ಸಾಮಾಜಿಕ ಸೇವಾ ಕಾರ್ಯಗಳು ಪ್ರಮಾಣಿಕ ನಿಟ್ಟಿನಲ್ಲಿ ಇರುತ್ತದೆ ಎಂಬ ಮನೋಬಲ ಹಿನ್ನೆಲೆಯಲ್ಲಿ ಕ್ಲಬ್ ಬೆಳೆಯಲು ಜತೆಗೆ ವಿಶ್ವಾಸದೊಂದಿಗೆ ಹೆಜ್ಜೆ ಇಡಲು ಸಾಧ್ಯವಾಗಿದೆ ಎಂದರು.
ಯಾದಗಿರಿ ಜಿಲ್ಲೆಯ ಹತ್ತಿಕುಣಿಯ 80 ಬಡ ವಿದ್ಯಾರ್ಥಿಗಳಿಗೆ ಸಹಾಯ ಕಲ್ಪಿಸಿರುವುದು, ಸಸಿಗಳ ನೆಡುವಿಕೆ, ಕುಷ್ಟ ರೋಗಿಗಳ ಕಾಲೋನಿಯಲ್ಲಿ ಚಾಪೆ, ಹೊದಿಕೆ, ಕೊಡ, ಬಕೆಟ್ ಸೇರಿದಂತೆ ಇತರ ಸಾಮಾಗ್ರಿಗಳನ್ನು ವಿತರಿಸಿರುವುದು ಸೇರಿ ಹತ್ತಾರು ನಿಟ್ಟಿನ ಸಾಮಾಜಿಕ ಸೇವೆಗಳನ್ನು ರೋಟರಿ ಕ್ಲಬ್ ಮಾಡಿದೆ ಎಂದು ಡಾ. ಸುಧಾ ಹಾಲಕಾಯಿ ತಿಳಿಸಿದರು.
ಇದನ್ನೂ ಓದಿ: ಜನವರಿಯಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮನ; ಅಷ್ಟರಲ್ಲಿ ಸಾಕಷ್ಟು ಬದಲಾವಣೆ ಖಂಡಿತಾ: ಯತ್ನಾಳ್
ಕಷ್ಟದಲ್ಲಿ ಇರುವವರು ಇಂತಹ ಸಂಕಷ್ಟ ಕ್ಕೆ ಒಳಗಾಗಿದ್ದೇವೆ ಎಂದು ತಮ್ಮ ಕ್ಲಬ್ ಗೆ ತಿಳಿಸಿದರೆ ಸಾಕು ಅವರಿಗೆ ನೆರವು ಬದ್ದತೆ ಹೊಂದಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಕ್ಲಬ್ ನ ಕಾರ್ಯದರ್ಶಿ ಶಿವಚಂದ್ರ ರತ್ನಾಕರ್, ಮೇಘಾ ಶಿವಕುಮಾರ್, ಮುರಳೀಧರ ಸೇರಿದಂತೆ ಮುಂತಾದವರಿದ್ದರು
ಇದನ್ನೂ ಓದಿ: ಮೋದಿ ಪ್ರಧಾನಿಯಾಗಿರುವವರೆಗೂ ರೈತರ ಜಮೀನು ಸುರಕ್ಷಿತ: ಅಮಿತ್ ಶಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.