ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರೈಲ್ವೆ ಸೌಲಭ್ಯಕ್ಕೆ ಆಗ್ರಹ
Team Udayavani, Jun 14, 2020, 4:39 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕಲಬುರಗಿ: ಏಳೆಂಟು ವರ್ಷಗಳಾದರೂ ಮುಗಿಯದೇ ಸ್ಮಾರಕಗಳಾಗಿ ಉಳಿದಿರುವ ನಗರದ ರೈಲ್ವೆ ಮೇಲ್ಸೇತುವೆ ಮಾರ್ಗ ಮತ್ತು ಪಿಟ್‌ಲೈನ್ ಕಾಮಗಾರಿಗಳನ್ನು ಈಗಲಾದರೂ ಆದ್ಯತೆ ನೀಡಿ ಪೂರ್ಣಗೊಳಿಸುವಂತೆ ಇಲ್ಲಿನ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಆಗ್ರಹಿಸಿದೆ.
ಸೊಲಾಪುರ ಮಧ್ಯೆ ರೈಲ್ವೆಯ ವಿಭಾಗಿಯ ರೈಲ್ವೆ ವ್ಯವಸ್ಥಾಪಕ ಶೈಲೇಷ ಗುಪ್ತಾ ಅವರು ರೈಲ್ವೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಡೆಸಲಾದ ಸಂವಾದದಲ್ಲಿ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಉಪಾಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಇತರರು ಪಾಲ್ಗೊಂಡು ಕಲ್ಯಾಣ ಕರ್ನಾಟಕ ಪ್ರದೇಶದ ರೈಲ್ವೆ ಬೇಡಿಕೆಗಳ ಕುರಿತಾಗಿ ಪಟ್ಟಿಯೊಂದನ್ನು ಸಲ್ಲಿಸಿದರು. ಸೊಲ್ಲಾಪುರ-ಬೆಂಗಳೂರು-ಹಾಸನ ರೈಲನ್ನು ಕಲಬುರಗಿ -ಬೆಂಗಳೂರು ನಡುವೆ ಮಾತ್ರ ಓಡಿಸುವುದು, ಕಲಬುರಗಿ- ಹೆ„ದರಾಬಾದ ಮತ್ತು ಕಲಬುರಗಿ-ಮುಂಬೈ ನಡುವೆ ಸರಕು ಸಾಗಾಣಿಕೆ ರೈಲುಗಳ ಸಂಚಾರ ಒದಗಿಸುವುದು ಅಗತ್ಯವಾಗಿದೆ. ವೃದ್ಧರ, ಸಣ್ಣ ಮಕ್ಕಳ ಮತ್ತು ವಿಕಲಚೇತನರ ಅನುಕೂಲಕ್ಕಾಗಿ ಕಲಬುರಗಿ ರೈಲು ನಿಲ್ದಾಣ ಪ್ಲಾಟ್ ಫಾರ್ಮದಲ್ಲಿ ವ್ಯವಸ್ಥೆ ಕಲ್ಪಿಸುವುದು, ಮುಖ್ಯವಾಗಿ ಮೇಲ್ಸೇತುವೆ ಮಾರ್ಗ ಮತ್ತು ಪಿಟ್ ಲೈನ್ ಕಾಮಗಾರಿಗಳನ್ನು ಪೂರ್ತಿಗೊಳಿಸುವಂತೆ ಒತ್ತಾಯಿಸಲಾಯಿತು.
ಕಲಬುರಗಿ ರೈಲು ನಿಲ್ದಾಣಕ್ಕೆ ಎ ದರ್ಜೆಯ ಎಲ್ಲ ಸೌಲಭ್ಯ ಒದಗಿಸುವುದು ಅಗತ್ಯವಿದೆ. ಚೆನ್ನೈ-ಮುಂಬೈ ಬ್ರಾಡ್‌ಗೇಜ್ ಮಾರ್ಗದಲ್ಲಿ ಕಲಬುರಗಿ ರೈಲು ನಿಲ್ದಾಣವು ದೇಶದ ಅತ್ಯಂತ ಪುರಾತನ ರೈಲು ನಿಲ್ದಾಣವಾಗಿದೆ. ಸೊಲ್ಲಾಪುರ ರೈಲ್ವೆ ವಿಭಾಗಕ್ಕೆ ಈ ರೈಲು ನಿಲ್ದಾಣದಿಂದ ಶೇ. 40ರಿಂದ ಶೇ. 50ರಷ್ಟು ಆದಾಯ ಸಲ್ಲಿಸುತ್ತದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಈ ರೈಲು ನಿಲ್ದಾಣದಿಂದ ಪ್ರಯಾಣಿಸುತ್ತಾರೆ. ಆದರೆ ಈ ರೈಲು ನಿಲ್ದಾಣವು ಆಧುನಿಕ ಸೌಲಭ್ಯ ಹೊಂದಿಲ್ಲ. ಆದ್ದರಿಂದ ಈ ರೈಲು ನಿಲ್ದಾಣದಲ್ಲಿ ಎ ದರ್ಜೆಯ ಆಧುನಿಕ ಸೌಲಭ್ಯಗಳಾಗಿರುವ ವೈ-ಫೈ, ಏಸ್ಕಲೇಟರ್ಸ್, ಲಿಫ್ಟ್ ಹಾಗೂ ಮಿನರಲ್ ವಾಟರ್ಸ್‌ಗಳ ಅಂಗಡಿಗಳನ್ನು ವ್ಯವಸ್ಥೆ ಮಾಡಬೇಕೆಂದು ಕೋರಿದರು. ಈ ಎಲ್ಲ ಬೇಡಿಕೆಗಳಿಗೆ ಅಧಿಕಾರಿ ಶೈಲೇಶ ಗುಪ್ತಾ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.