ಕಸಾಪ ವರ್ಷಾಚರಣೆ; ನ.21 ರಂದು ಭಾವ ಸಮ್ಮಿಲನ; ಪತ್ರಕರ್ತರಿಗೆ ಸನ್ಮಾನ
Team Udayavani, Nov 18, 2022, 2:02 PM IST
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಹಿತ್ಯ ಪ್ರಿಯ ಮನಗಳ ಸಮ್ಮಿಲನಗೊಳ್ಳುವ “ಭಾವ ಸಮ್ಮಿಲನ” ಎಂಬ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಅರ್ಥಪೂರ್ಣ ವರ್ಷಾಚರಣೆಯನ್ನು ನ.21 ರ ಬೆಳಗ್ಗೆ 11:15 ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮಗಳನ್ನು ಸಂಘಟಿಸುವುದು ಹೊಸ ಹೊಸ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವುದು, ವಿನೂತನ ವಿಶಿಷ್ಟ ಕಾರ್ಯಕ್ರಮಗಳಿಗೆ ಹೆಸರಾಗಿದ್ದು, ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಾಗಿದ್ದು, ಅಧ್ಯಕ್ಷರಾಗಿ ಒಂದು ವರ್ಷದಲ್ಲಿ ನೂರಾರು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಒಂದು ವರ್ಷವನ್ನು ಪೂರೈಸುತ್ತಿರುವ ಈ ಶುಭ ಸಂದರ್ಭದಲ್ಲಿ ಕಾರ್ಯಕ್ರಮಗಳ ಪ್ರವಾಹದಲ್ಲಿನ ಕೆಲವು ಪ್ರಮುಖ ಹನಿಗಳನ್ನು ಪರಿಚಯಿಸುವ ಪ್ರಯತ್ನವನ್ನು ಪತ್ರಿಕಾ ಛಾಯಾಗ್ರಾಹಕ ರಾಜು ಕೊಷ್ಠಿ ಸಾರಥ್ಯದ ನವ ಕಲ್ಯಾಣ ವಿಡಿಯೋ ಮತ್ತು ಫೋಟೋಗ್ರಾಫರ ಅಸೋಸಿಯೇಷನ್ ವತಿಯಿಂದ ಭಾವಚಿತ್ರಗಳ ಪ್ರದರ್ಶನವೂ ಅಂದು ಜರುಗಲಿದೆ ಎಂದರು.
ಈ ವೇಳೆ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ಸ.ಡಾ.ಜೋಶಿ, ರಾಮಕೃಷ್ಣ ಬಡಶೇಷಿ, ದೇವಯ್ಯಾ ಗುತ್ತೇದಾರ, ಶೇಷಮೂರ್ತಿ ಅವಧಾನಿ, ರಾಹುಲ್ ಬೆಳಗಲಿ, ಹಣಮಂತರಾವ ಭೈರಾಮಡಗಿ, ಕುಮಾರ ಬುರಡಿಕಟ್ಟಿ, ಟಿ.ಗಣೇಶಕುಮಾರ, ಸಂತೋಷ ನಾಡಗೇರಿ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಗುವುದೆಂದು ತೇಗಲತಿಪ್ಪಿ ವಿವರಿಸಿದರು.
ಕಾರ್ಯಕ್ರಮದ ಯಶಸ್ವಿಗೆ ಪೂರಕವಾಗಿ ರಚಿಸಲಾಗಿರುವ ವರ್ಷಾಚರಣೆ ಸಮಿತಿಗೆ ಅಧ್ಯಕ್ಷರನ್ನಾಗಿ ಮುಡುಬಿ ಗುಂಡೇರಾವ, ಗೌರವಾಧ್ಯಕ್ಷರಾಗಿ ಕಲ್ಯಾಣಕುಮಾರ ಶೀಲವಂತೆ, ಜಗದೀಶ ಮರಪಳ್ಳಿ, ಶರಣರಾಜ ಭಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ವಿದ್ಯಾಸಾಗರ ದೇಶಮುಖ, ಸಿದ್ಧಲಿಂಗ ರೆಡ್ಡಿ ಪಾಟೀಲ, ಆಶೋಕ ಮಾಲಿ ಅವರನ್ನು ನೇಮಕ ಮಾಡಲಿದ್ದು, ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಲೇಖಕ ಡಾ. ಕೆ.ಗಿರಿಮಲ್ಲ ಅವರು ಬರೆದ ವರ್ಷದ ಕಾರ್ಯಕ್ರಮದ ಪಕ್ಷಿನೋಟಗಳನ್ನೊಳಗೊಂಡ ‘ವಿಜಯೋತ್ಸಾಹ’ ಎಂಬ ಕೃತಿಯನ್ನು ಗುಲಬರ್ಗ ವಿವಿ ಯ ಕುಲಪತಿ ಪ್ರೊ. ದಯಾನಂದ ಆಗಸರ ಜನಾರ್ಪಣೆ ಮಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಸೇರಿದಂತೆ ಅನೇಕ ಗಣ್ಯರು, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವರಾಜ್ ಅಂಡಗಿ, ವಿಧ್ಯಾಸಾಗರ ದೇಶಮುಖ್, ಸಂತೋಷ ಕೂಡಹಳ್ಳಿ, ರವೀಂದ್ರ ಬಂಟನಳ್ಳಿ, ಶ್ಯಾಮಸುಂದರ ಕುಲಕರ್ಣಿ ಮತ್ತು ನಾಗಪ್ಪ ಸಜ್ಜನ್, ಶರಣರಾಜ್ ಚಪ್ಪರಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.