Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
Team Udayavani, Nov 23, 2024, 3:16 PM IST
ಕಲಬುರಗಿ: ಶಿಗ್ಗಾವಿ ಉಪಚುನಾವಣೆಯ ಫಲಿತಾಂಶ ಅನಿರೀಕ್ಷಿತ. ಅದನ್ನು ನಾವು ಒಪ್ಪುವುದಿಲ್ಲ. ಮುಸ್ಲಿಮರು ಜಾಸ್ತಿಯಿರುವ ಕಡೆ ಮತ ಬಂದಿರಬಹುದು. ಆದರೆ ಜನರ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ. ಕಾಂಗ್ರೆಸ್ ರೀತಿ ಇವಿಎಂ ಮೇಲೆ ಹಾಕುವುದಿಲ್ಲ. ಜನರ ತೀರ್ಪನ್ನು ಕ್ರಿಡಾ ಮನೋಭಾವದ ರೀತಿ ಸ್ವಾಗತ ಮಾಡುತ್ತೇವೆ ಎಂದು ಬಿಜೆಪಿ ನಾಯಕ, ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಅದನ್ನು ನಾವು ಜನರಿಗೆ ಸರಿಯಾಗಿ ತಲುಪಿಸಬೇಕಿತ್ತು. ಆದರೆ ಇನ್ನು ಅಂತಿಮ ಫಲಿತಾಂಶ ಬಂದಿಲ್ಲ. ಈಗಲೇ ನಿರಾಸೆ ವ್ಯಕ್ತಪಡಿಸುವುದು ಬೇಡ. ಆಡಳಿತ ಪಕ್ಷ ಇರುವುದರಿಂದ ಸಹಜವಾಗಿಯೇ ಮೇಲುಗೈ ಇರುತ್ತದೆ. ಸ್ವಾಭಾವಿಕವಾಗಿ ಅದು ಆಡಳಿತ ಪಕ್ಷಕ್ಕೆ ಸಹಾಯ ಆಗುತ್ತದೆ. ಈ ಫಲಿತಾಂಶ ಭ್ರಷ್ಟಾಚಾರ ಮಾಡಲು ನೀಡಿದ ಮತವೆಂದು ಕಾಂಗ್ರೆಸ್ ಭಾವಿಸಬಾರದು ಎಂದರು.
ರಾಜ್ಯದ ಫಲಿತಾಂಶವನ್ನು ಚಿಂತನೆ ನಡೆಸಬೇಕಿದೆ. ಆತ್ಮಚಿಂತನೆ ಮಾಡಬೇಕಾದ ಅನಿವಾರ್ಯತೆಯಿದೆ. ಯೋಗೇಶ್ವರ್- ಕಾಂಗ್ರೆಸ್ ಕಾಂಬಿನೇಷನ್ ವೀಕ್ ಇರಲಿಲ್ಲ. ಅದು ಸ್ಟ್ರಾಂಗ್ ಕಾಂಬಿನೇಷನ್ ಇತ್ತು. ಆದರೂ ನಮಗೆ ಗೆಲ್ಲುವ ವಾತವರಣವಿತ್ತು. ಮೈತ್ರಿ ಕಾರಣಕ್ಕೆ ಸೋಲಾಗಿದೆ ಎನ್ನಲ್ಲ ಎಂದರು.
ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ
ವಕ್ಪ್ ಎನ್ನುವ ಕರಾಳ ಕಾಯ್ದೆಯ ವಿರುದ್ದ ಹೊರಾಟ ಮುಂದುವರೆಯುತ್ತದೆ. ಇನ್ನಾದರೂ ಬಣ ರಾಜಕೀಯ ಶಮನ ಮಾಡಬೇಕು. ನಾನು ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ. ನಮಗೂ ಸಾಮರ್ಥ್ಯ ದೌರ್ಬಲ್ಯ ಎರಡೂ ಇದೆ. ಎಲ್ಲರ ಹತ್ತಿರವಿರುವ ಸಾಮರ್ಥ್ಯ ಬಳಸಿಕೊಳ್ಳಬೇಕು. ನಾಯಕತ್ವದ ಬದಲಾವಣೆ ಬಗ್ಗೆ ನಾನು ಮಾತನಾಡುವುದಿಲ್ಲ. ಎಲ್ಲಿ ಏನು ಹೇಳಬೇಕು ಅಲ್ಲಿ ಹೇಳುತ್ತೇನೆ ಎಂದರು.
ಮಹಾರಾಷ್ಟ್ರದಲ್ಲಿ 200 ಕ್ಕೂ ಹೆಚ್ಚು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದೇವೆ. ಜಾರ್ಖಂಡ್ ನಲ್ಲಿ ನಾವು ನೀರಿಕ್ಷಿಸಿದಷ್ಟು ಮುನ್ನಡೆ ಸಿಕ್ಕಿಲ್ಲ. ಇದೆಲ್ಲಾ ಸದ್ಯ ಆರಂಭಿಕ ಮುನ್ನಡೆ. ಆದರೆ ಎರಡೂ ರಾಜ್ಯಗಳಲ್ಲೂ ನಾವು ಅಧಿಕಾರಕ್ಕೆ ಬರುತ್ತೆವೆ. ಮಹಾರಾಷ್ಟ್ರದಲ್ಲಿ ಮೀಸಲಾತಿ ವಿಚಾರವನ್ನು ಯಶಸ್ವಿಯಾಗಿ ಹ್ಯಾಂಡಲ್ ಮಾಡಿದ್ದೆವು. ಗ್ಯಾರೆಂಟಿಯನ್ನು ನಾವೇ ಘೋಷಣೆ ಮಾಡಿದ್ದೆವು. ಮಂತಾಧರು ವೋಟ್ ಜಿಹಾದಿ ಕರೆ ಕೊಟ್ಟಿದ್ದರು. ನಾವು ಅದಕ್ಕೆ ಪ್ರತಿತಂತ್ರ ರೂಪಿಸಿದ್ದೆವು ಎಂದು ಸಿ.ಟಿ.ರವಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.