Kalaburagi: ಪ್ರತಿಷ್ಠಿತ ಗುಲ್ಬರ್ಗ ಕ್ಲಬ್‌ಗೆ ರವಿವಾರ ಚುನಾವಣೆ
Team Udayavani, Sep 2, 2023, 10:48 PM IST
ಕಲಬುರಗಿ: ಮಹಾ ನಗರದ ಸಾರ್ವಜನಿಕ ಉದ್ಯಾನವನ ದಲ್ಲಿರುವ ಪ್ರತಿಷ್ಠಿತ ಗುಲ್ಬರ್ಗ ಕ್ಲಬ್‌ಗೆ ಸೆ. 3 ರ ರವಿವಾರದಂದು ಚುನಾವಣೆ ನಡೆಯಲಿದೆ.
ರವಿವಾರ ಬೆಳಗ್ಗೆ9 ಗಂಟೆಯಿಂದ ಸಂಜೆ 4ರವರೆಗೆ ನಡೆದು, ತದನಂತರ ಮತ ಏಣಿಕೆ ನಡೆಯಲಿದೆ. ಒಂದು ವರ್ಷದ ೨೦೨೩-೨೦೨೪ನೇ ಸಾಲಿನ ಅವಧಿಗಾಗಿ ಪ್ರಮುಖ ಕಾರ್ಯದರ್ಶಿ, ಉಪಾಧ್ಯಕ್ಷ, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಮತ್ತು ಆಡಳಿತ ಮಂಡಳಿ ಸದಸ್ಯಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಜಿಲ್ಲಾಧಿಕಾರಿಗಳೇ ಈ ಕ್ಲಬ್‌ನ ಅಧ್ಯಕ್ಷರಾಗಿದ್ದು, ಕಾರ್ಯದರ್ಶಿ ಹುದ್ದೆಯೇ ಪ್ರಮುಖವಾಗಿದೆ.ಕಾರ್ಯದರ್ಶಿಯಾದವರೇ ಕ್ಲಬ್‌ನ್ನು ನಿರ್ವಹಿಸುತ್ತಾರೆ. ಪ್ರಸ್ತುತ ಕಾರ್ಯದರ್ಶಿ ಯಾಗಿರುವ ಚಂದ್ರಕಾಂತ ಸಂಗೋಳಗಿ ಪುನರಾಂಯ್ಕೆ ಬಯಸಿ ಪ್ರಮುಖವಾಗಿ ಕಣದಲ್ಲಿದ್ದಾರೆ. ಉಳಿದಂತೆ ಮಲ್ಲಿನಾಥ ಗುಡೇದ್ ಹಾಗೂ ಡಾ. ಪ್ರಕಾಶ ಬಬಲಾದಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಕಣದಲ್ಲಿರುವ ಇತರ ಅಭ್ಯರ್ಥಿಗಳು.
ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಎಸ್.ಎನ್. ಪಾಟೀಲ್ ಸ್ಪರ್ಧಿಸಿದ್ದಾರೆ. ಉಳಿದಂತೆ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ರವಿ ಉದನೂರ, ರೇವಣಸಿದ್ದಪ್ಪ ನಾಗೂರೆ, ಖಜಾಂಚಿಯಾಗಿ ಸಾತಪ್ಪ ಪಟ್ಟಣಕರ್, ಶೇಖರ ಮೋದಿ ಸ್ಪರ್ಧಿಸಿದ್ದಾರೆ. ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ಅನೀಲಕುಮಾರ ನಿಪ್ಪಾಣಿ, ಆಶೋಕಕುಮಾರ ಮಾಲಿ, ಚಂದ್ರಶೇಖರ ಕಮಲಾಪುರ, ಸಿ. ಬಸವರಾಜ, ಜಗದೀಶ ಅಲ್ಲದ, ನಿತೀನ
ಗಿಯಾ, ಪರಮೇಶ್ವರ ಸಂಗಾವಿ ಹಾಗೂ ವಿಶ್ವನಾಥ ಕಟ್ಟಿಮನಿ ಕಣದಲ್ಲಿದ್ದಾರೆ.
ಪ್ರಸ್ತುತ ಕಾರ್ಯದರ್ಶಿ ಯಾಗಿರುವ ಚಂದ್ರಕಾಂತ ಸಂಗೋಳಗಿ ಕಳೆದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಲ್ಲದೇ ಪ್ರಮುಖವಾಗಿ ಇಲ್ಲಿಯವರೆಗೆ ಆಗದ ವನ್ ಪ್ಲಸ್ ವನ್ ಮೆಂಬರ ಮಾಡಿರುವುದು ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ನಿವೃತ್ತ ಪ್ರಾಧ್ಯಾಪಕ ಪ್ರೊ. ನರೇಂದ್ರ ಬಡೆಶೇಷಿ ಚುನಾವಣಾಧಿಕಾರಿ ಗಳಾಗಿ ಕಾರ್ಯ ನಿರ್ವಹಿಸುವರು. ಕ್ಲಬ್‌ನ ಈ ಚುನಾವಣೆಯಲ್ಲಿ820 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಕಲಬುರಗಿ ಜಿಲ್ಲೆಯ ಖ್ಯಾತ ಉದ್ಯಮಿಗಳು, ವೈದ್ಯರು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕ್ಲಬ್‌ನ ಸದಸ್ಯರಾಗಿರುವುದು ವಿಶೇಷ. ಹೀಗಾಗಿ ಈ ಚುನಾವಣೆ ಪ್ರತಿಷ್ಠೆಯಾಗಿ ಗಮನ ಸೆಳೆಯುತ್ತದೆ. ರವಿವಾರ ರಾತ್ರಿ ಹೊತ್ತಿಗೆ ಚುನಾವಣ ಫಲಿತಾಂಶ ಹೊರ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.