![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 14, 2021, 3:10 PM IST
ಕಲಬುರಗಿ: ಶಿಥಿಲಾವಸ್ಥೆಯಲ್ಲಿರುವ 180 ವರ್ಷಗಳ ಹಿಂದಿನ ಕಲಬುರಗಿ ತಾಲೂಕು ತಹಶೀಲ್ದಾರ ಕಚೇರಿಯಲ್ಲಿ ರಾಶಿಗಟ್ಟಲೇ ಇದ್ದ ಕಸದ ತ್ಯಾಜ್ಯವನ್ನು ತಹಶಿಲ್ದಾರರೇ ಮುಂದೆ ನಿಂತು ಸಿಬ್ಬಂದಿಗಳೊಂದಿಗೆ ಸ್ವಚ್ಚತಾ ಕಾರ್ಯ ಕೈಗೊಂಡರು.
ನಗರದ ಹೃದಯ ಭಾಗ ಸೂಪರ್ ಮಾರ್ಕೆಟ್ ಮಲ್ಲಿರುವ ಕಚೇರಿ ವಿಶಾಲವಾದ ಜಾಗವಿದೆ. ಹಳೆಯ ಕಟ್ಟಡ ಹಾಗೂ ಸೂಕ್ತ ನಿರ್ವಹಣೆ ಇಲ್ಲದಿದ್ದಕ್ಕೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಗಬ್ಬೆದ್ದು ನಾರುತ್ತಿತ್ತು. ಇತ್ತೀಚೆಗೆ ಕಟ್ಟಡ ಮೇಲ್ಚಾವಣಿ ಮಹಿಳಾ ಸಿಬ್ಬಂದಿ ಮೇಲೆ ಕುಸಿದು ಬಿದ್ದಿತ್ತು. ಆದರೆ ಕಳೆದ ಫೆ. 8ರಂದು ಶಿಗ್ಗಾಂವಿಯಿಂದ ವರ್ಗಾವಣೆಯಾಗಿ ಕಲಬುರಗಿ ತಹಶೀಲ್ದಾರರಾಗಿ ಕಾರ್ಯಭಾರ ವಹಿಸಿಕೊಂಡಿರುವ ಪ್ರಕಾಶ ಕುದರಿ ಅವರು ಕಚೇರಿ ಹಾಗೂ ಆವರಣದಲ್ಲಿನ ಕಸದ ರಾಶಿಯ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಚೇರಿ ಆವರಣದಲ್ಲೇ ತಹಶೀಲ್ದಾರರ ವಸತಿ ಗೃಹವಿದೆ. ಆದರೆ ಏಳೆಂಟು ವರ್ಷಗಳಿಂದ ಬಳಕೆ ಮಾಡದ ಕಾರಣ ಅನಾಥವಾಗದೆ. ಗೃಹವನ್ನು ಸ್ವಚ್ಛತೆ ಮಾಡಿಸಿ ಬಳಕೆ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಕೇವಲ ಕಚೇರಿ ಆವರಣ ಹಾಗೂ ಕಟ್ಟಡ ಸ್ಚಚ್ಚಗೊಳಿಸಿದರೆ ಸಾಲದು. ಬಹಳ ದಿನಗಳಿಂದ ಇತ್ಯರ್ಥಗೊಳ್ಳದೇ ಇರುವ ಅರ್ಜಿ ಗಳನ್ನು ವಿಲೇವಾರಿ ಮಾಡುವುದು, ಒಟ್ಟಾರೆ ಆಡಳಿತದಲ್ಲಿ ಪಾರದರ್ಶಕತೆ ತರಲು ಶ್ರಮಿಸಲಾಗುವುದು ಎಂದು ತಹಶಿಲ್ದಾರ ಪ್ರಕಾಶ ಕುದರಿ ತಿಳಿಸಿದರು.
ಕಚೇರಿ ಬಾಳಿಕೆ ಕುರಿತಾಗಿ ಲೋಕೋಪಯೋಗಿ ಇಲಾಖೆಯಿಂದ ವರದಿ ಪಡೆದು ನೆಲಸಮ ಮಾಡುವ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದು. ನೆಲಸಮಗೊಳಿಸಲು ಪ್ರಾಚ್ಯ ವಸ್ತು ಇಲಾಖೆ ಅನುಮತಿ ನೀಡಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕು. ತಹಶಿಲ್ದಾರ ಕಚೇರಿಯ ಮಿನಿ ವಿಧಾನಸೌಧ ಬೇರೆಡೆ ಹೊಸದಾಗಿ ನಿರ್ಮಿಸಲು ಮೂರ್ನಾಲ್ಕು ಕಡೆ ಸ್ಥಳ ಗುರುತಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದ ಎನ್ ಸಿಸಿ ಕಚೇರಿ ಸ್ಥಳಾಂತರವಾಗುತ್ತಿರುವುದರಿಂದ ಈ ಸ್ಥಳದಲ್ಲೇ ತಹಶಿಲ್ದಾರ ಕಚೇರಿ ನಿರ್ಮಾಣವಾಗಬೇಕು ಇಲ್ಲವೇ ಈಗಿರುವ ತಹಶಿಲ್ದಾರ ಕಚೇರಿ ಆವರಣದಲ್ಲೇ ಕಚೇರಿ ಸ್ಥಾಪನೆಯಾದರೆ ಸೂಕ್ತ ಎಂಬುದು ಸಾರ್ವಜನಿಕರ ಹಾಗೂ ತಮ್ಮ ಅಭಿಪ್ರಾಯವಾಗಿದೆ ಎಂದು ತಹಶಿಲ್ದಾರ ಪ್ರಕಾಶ ಕುದರಿ ಈ ಸಂದರ್ಭದಲ್ಲಿ ತಿಳಿಸಿದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.