ತೊಗರಿ ಖರೀದಿಗೆ ಮೀನಾಮೇಷ
ತಪ್ಪದ ತೊಗರಿ ಬೆಳೆಗಾರರ ಬವಣೆ ನೋಂದಣಿ ಹೆಸರಿನಲ್ಲಿ ಶೋಷಣೆ
Team Udayavani, Jan 26, 2020, 10:45 AM IST
ಕಲಬುರಗಿ: ಕಳೆದ ವರ್ಷ ಬರಗಾಲದಿಂದ ಕೈ ಸುಟ್ಟುಕೊಂಡ ತೊಗರಿ ಬೆಳೆಗಾರರಿಗೆ ಈ ವರ್ಷ ಸ್ವಲ್ಪ ಉತ್ತಮ ಇಳುವರಿ ಬಂದಿದ್ದರೂ ಅದನ್ನು ಬೆಂಬಲ ಬೆಲೆಯಲ್ಲಿ ಮಾರಬೇಕೆಂದರೆ ಖರೀದಿ ಕೇಂದ್ರಗಳೇ ಕಾರ್ಯಾರಂಭವಾಗುತ್ತಿಲ್ಲ.
ತೊಗರಿ ಮಾರುಕಟ್ಟೆಗೆ ಬರಲಾರಂಭಿಸಿ ಒಂದೂವರೆ ತಿಂಗಳಾದರೂ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಆರಂಭವಾಗದ ಹಿನ್ನೆಲೆಯಲ್ಲಿ ರೈತರು ಮಾರುಕಟ್ಟೆಯಲ್ಲಿ ಇದ್ದ ಬೆಲೆಗೆ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಬೆಂಬಲ ಬೆಲೆ 6100 ರೂ. ಇದೆ. ಮಾರುಕಟ್ಟೆಯಲ್ಲಿ ತೊಗರಿಗೆ 4500 ರೂ. ಮಾತ್ರ ಬೆಲೆಯಿದೆ. ಆದರೆ ಸರ್ಕಾರ ಇದ್ಯಾವುದು ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ರೈತರನ್ನು ಕೆರಳಿಸುವಂತೆ ಮಾಡಿದೆ.
ಕಳೆದ 2019ರ ಡಿಸೆಂಬರ್ 18ರಂದು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ
ತನ್ನ ಪ್ರೋತ್ಸಾಹಧನ ನಿಗದಿ ಮಾಡಲು 10 ದಿನಗಳ ಕಾಲ ಸಮಯ ತೆಗೆದುಕೊಂಡಿತ್ತು. ಕೇವಲ 300 ರೂ. ಪ್ರೋತ್ಸಾಹಧನ ನಿಗದಿ ಮಾಡಿ ಕೇವಲ 10 ಕ್ವಿಂಟಲ್ ಗೆ ಮಿತಿ ಹೇರಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರೋತ್ಸಾಹಧನ 500 ರೂ. ನೀಡಲಾಗಿತ್ತು. ಆದರೆ ಪ್ರೋತ್ಸಾಹಧನ ಕಡಿಮೆಯಾದರೂ ಪರವಾಗಿಲ್ಲ ಬೇಗ ಖರೀದಿ ಆರಂಭವಾದರೆ ಸಾಕೆಂದು ರೈತರು ನಿಟ್ಟುಸಿರು ಬಿಟ್ಟರು. ನಿರೀಕ್ಷೆಯ ಪ್ರಕಾರ ಇಷ್ಟೊತ್ತಿಗೆ ಖರೀದಿ ಆರಂಭವಾಗಬೇಕಿತ್ತು.
ನೋಂದಣಿ ಹೆಸರಿನಲ್ಲಿ ಶೋಷಣೆ ಮಾಡುತ್ತ ಖರೀದಿಯೇ ಮಾಡ್ತಾ ಇಲ್ಲ. ಖರೀದಿ ಮಾಡುವ
ಮನಸ್ಸಿಲ್ಲದ ಸರ್ಕಾರ ಇಲ್ಲದ ನಿಯಮ ರೂಪಿಸಿ ಸಮಯ ದೂಡುತ್ತಿದೆ. ಕಳೆದ ವರ್ಷ ರೈತರ ನೋಂದಣಿಯೊಂದಿಗೆ ಖರೀದಿ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಈ ವರ್ಷ ನೋಂದಣಿ ಮಾತ್ರ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ 70 ಸಾವಿರ ರೈತರ ನೋಂದಣಿಯಾಗಿದೆ. ಆದರೆ ಒಬ್ಬರೇ ಒಬ್ಬನ ತೊಗರಿ ಖರೀದಿ ಮಾಡಿಲ್ಲ. ನೋಂದಣಿಯಿಂದ ವಂಚಿತ ರೈತರು: ರೈತರ ಆಧಾರ ಕಾರ್ಡ್‌ದೊಂದಿಗೆ ಖರೀದಿ ಕೇಂದ್ರಕ್ಕೆ ಹೋಗಿ ಹೆಸರು ನೋಂದಾಯಿಸಬೇಕೆಂದರೆ ನೋಂದಣಿ ಆಗುತ್ತಿಲ್ಲ. ಏಕೆಂದರೆ ರೈತನ ಹೊಲದ ದಾಖಲೆಯಲ್ಲಿ ತೊಗರಿ ಇದ್ದರೂ ಹತ್ತಿ, ಹೆಸರು ಇನ್ನ್ಯಾವುದೋ ಬೆಳೆ ತೋರಿಸಲಾಗುತ್ತಿದೆ.
ಹೀಗಾಗಿ ತೊಗರಿ ರೈತ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟದಿಂದ ವಂಚಿತರಾಗುವಂತಾಗಿದೆ. ಒಂದು ಸರ್ವೇ ನಂಬರ್‌ದಲ್ಲಿ ಒಂದು ಹಿಸ್ಸಾದಲ್ಲಿ ಹತ್ತಿಯಿದ್ದರೆ ಉಳಿದ ಹಿಸ್ಸಾಗಳಲ್ಲಿ ಹತ್ತಿಯೇ ತೋರಿಸಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ರೂಪಿಸಿದ ಅಧಂಬರ್ಧ ತಂತ್ರಾಂಶ ಹಾಗೂ ಆ್ಯಪ್‌ನಿಂದ ರೈತರು ಶೋಷಣೆಗೆ ಒಳಗಾಗುವಂತಾಗಿದೆ. ಒಟ್ಟಾರೆ ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ.
ಅಲೆದಾಟ-ಪರದಾಟ: ರೈತರು ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರು ನೋಂದಣಿ ಪ್ರಕ್ರಿಯೆ ಜ.31ಕ್ಕೆ ಅಂತ್ಯಗೊಳ್ಳಲಿದೆ. ಆದರೆ, ಪಹಣಿಯಲ್ಲಿ ತೊಗರಿ ಬದಲಿಗೆ ಮತ್ತಾÂವುದೋ ಬೆಳೆ ತೋರಿಸುತ್ತಿರುವುದರಿಂದ ರೈತರು ದಿನಾಲು ಖರೀದಿ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಅಲೆದಾಡುತ್ತಿದ್ದಾರೆ.
ಕಲಬುರಗಿ ತಾಲೂಕಿನ ನಂದೂರು (ಕೆ) ಮತ್ತು ಸಣ್ಣೂರು ಗ್ರಾಮಗಳ ಪ್ರಾಥಮಿಕ ಪತ್ತಿನ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರು ತಮ್ಮ ಹೆಸರು ನೋಂದಣಿಯಾಗಿ ಪರಿತಪ್ಪಿಸುತ್ತಿರುವ ನಿಜ ದರ್ಶನ ಕಂಡು ಬಂತು. ರೈತರಾದ ಶಾಂತಪ್ಪ ಪಾಟೀಲ, ನೀಲಕಂಠಯ್ಯಸ್ವಾಮಿ, ಮಹೇಶ ಲಾಳಿ, ಬಾಬುರಾವ, ಸುಭಾಷ ಕರದಳ್ಳಿ, ಜಗದೀಶ ಸೂರಾ ಅವರು ಆಳಲು ತೋಡಿಕೊಂಡರು. ಬೆಂಬಲ ಬೆಲೆಯಲ್ಲಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಸಂಸದ ಡಾ| ಉಮೇಶ ಜಾಧವ್ ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ರಾಜ್ಯ ಸರ್ಕಾರ ಕೇವಲ 300 ರೂ. ಪ್ರೋತ್ಸಾಹಧನ ನಿಗದಿ ಮಾಡಿದಾಗ ಹಾಗೂ ತೊಗರಿ ಖರೀದಿಗೆ ಆಗ್ರಹಿಸಿ ಎರಡು ವಾರಗಳಿಂದ ಅವರ ಮನೆ ಎದುರು ಧರಣಿ ಕುಳಿತರೂ ಜತೆಗೆ ಖರೀದಿ ಆರಂಭವಾಗದಿರುವ ಬಗ್ಗೆ ಸಂಸದರು ತುಟಿ ಬಿಚ್ಚದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೋಂದಣಿಗೆ ಸಮಸ್ಯೆ ಏನು?
ಕನಿಷ್ಠ ಬೆಂಬಲ ಬೆಲೆಯಡಿ ಹೆಸರು ನೋಂದಣಿಗೆ ತಂತ್ರಜ್ಞಾನ ಬಳಕೆಯಾಗುತ್ತಿದೆ. ಬೆಳೆ ದರ್ಶಕ ಆ್ಯಪ್, ಫ್ರೂಟ್ಸ್ ಆ್ಯಪ್ ಮತ್ತು ಭೂಮಿ ಆ್ಯಪ್‌ನ ಮಾಹಿತಿ ಆಧಾರದಡಿ ಹೆಸರು ನೋಂದಣಿ ಆಗುತ್ತಿದೆ. ಬೆಳೆ ಸಮೀಕ್ಷೆ ಸಂದರ್ಭ ಜಿಪಿಎಸ್ ಮೂಲಕ
ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಖಾಸಗಿ ಸಮೀಕ್ಷೆಕಾರರು ತೊಗರಿ ಬದಲು ಬೇರೆಯದ್ದೇ ಬೆಳೆ ಎಂದು ತಪ್ಪಾಗಿ ನಮೂದಿಸಿದ್ದಾರೆ. ರೈತರು ಬೆಳೆದ ಬೆಳೆಗೂ ಆ್ಯಪ್‌ಗ್ಳಲ್ಲಿ ತೋರಿಸುವ ಬೆಳೆಯ ಚಿತ್ರಕ್ಕೂ ತಾಳೆ ಆಗುತ್ತಿಲ್ಲ. ಇದರಿಂದಲೇ ಬಹುತೇಕ ರೈತರಿಗೆ ಹೆಸರು ನೋಂದಣಿ ಸಮಸ್ಯೆ ತಲೆದೋರಿದೆ. ಮತ್ತೂಂದು ಸಮಸ್ಯೆಯಂದರೆ, ಫ್ರೂಟ್ಸ್ ಆ್ಯಪ್‌ನಲ್ಲಿ ಎಫ್‌ಐಡಿಗೆ ರೈತರ ಮಾಹಿತಿ ನೋಂದಣಿ ಆಗಿಲ್ಲ. ಹೀಗಾಗಿ ತೊಗರಿ ರೈತರ ಇಲ್ಲದ ನಿಯಮಕ್ಕೆ ಒಳಗಾಗಿ ನಷ್ಟ ಅನುಭವಿಸುವಂತಾಗಿದೆ.
ಹೊಲದಲ್ಲಿ ತೊಗರಿ ಬೆಳೆದು ಕಟಾವು ಕೂಡ ಮಾಡಲಾಗಿದೆ. ಆದರೆ, ಆ್ಯಪ್‌ಗ್ಳಲ್ಲಿ ಮತ್ತ್ಯಾವುದೋ ಬೆಳೆಯ ಚಿತ್ರ ತೋರಿಸಲಾಗುತ್ತಿದೆ. ಹೀಗಾಗಿ ಕನಿಷ್ಠ ಬೆಂಬಲ ಬೆಲೆಯಡಿ ಹೆಸರು ನೋಂದಣಿ ಸಾಧ್ಯವಾಗುತ್ತಿಲ್ಲ. ಇದನ್ನು ಸರಿಪಡಿಸಿಕೊಳ್ಳಲು ರೈತ ಸಂಪರ್ಕ ಕೇಂದ್ರಕ್ಕೆ ಮೂರ್‍ನಾಲ್ಕು ಬಾರಿ ಅಲೆಯಲಾಗಿದೆ. ಆದರೂ, ಯಾವುದೇ ಬದಲಾವಣೆಯಾಗಿಲ್ಲ.
ನೋಂದಣಿ ದಿನಾಂಕ ಬೇರೆ ಮುಗಿಯಲು ಬಂದಿದೆ. ಏನು ಮಾಡೋದು ಎಂಬುದೇ ತೋಚುತ್ತಿಲ್ಲ.
ಶಾಂತಪ್ಪ ಪಾಟೀಲ,
ರೈತ, ಸಣ್ಣೂರು.
ರೈತರ ಆರ್ಥಿಕ ಸಂಕಷ್ಟದ ನಡುವೆ ತೊಗರಿ ಕಟಾವಾಗಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ
ಮಾರಾಟ ಮಾಡಬೇಕಾದ ದುಃಸ್ಥಿತಿ ಬಂದೊದಗಿದೆ. ಆದರೆ, ಸರ್ಕಾರ ಮಾತ್ರ ಹೆಸರು ನೋಂದಣಿ ತಡವಾಗಿ ಆರಂಭಿಸಿ, ಖರೀದಿ ಕೂಡ ಶುರು ಮಾಡಿಲ್ಲ. ಎಲ್ಲ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೋಂದಣಿ ದಿನಾಂಕ ವಿಸ್ತರಿಸಬೇಕು.
ಮಾರುತಿ ಮಾನ್ಪಡೆ,
ರಾಜ್ಯ ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.