![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 13, 2019, 12:59 PM IST
ವಾಡಿ: ಇಂಗಳಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಡಾ| ಉಮೇಶ ಜಾಧವ, ಮಾಜಿ ಶಾಸಕರಾದ ವಾಲ್ಮೀಕಿ ನಾಯಕ, ವಿಶ್ವನಾಥ ಪಾಟೀಲ ಹೆಬ್ಟಾಳ ಪಾಲ್ಗೊಂಡಿದ್ದರು.
ವಾಡಿ: ಹೈದ್ರಾಬಾದ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಾಂವಿಧಾನಿಕ 371ನೇ (ಜೆ)ಕಲಂ ಕಾಯ್ದೆ ಜಾರಿಗೆ ತರುವಲ್ಲಿ ಬಿಜೆಪಿ ಸೇರಿದಂತೆ ಈ ಭಾಗದ ಅನೇಕ ನಾಯಕರುಗಳ ಹೋರಾಟದ ಶ್ರಮವಿದೆ. ಹೀಗಾಗಿ ನಾನು
ಮಾಡಿದ್ದೇನೆ ಎನ್ನುವ ಬದಲು ಖರ್ಗೆಯವರು ನಾವು ಮಾಡಿದ್ದೇವೆ ಎನಬೇಕು ಎಂದು ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಟಾಂಗ್ ನೀಡಿದರು.
ಇಂಗಳಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ಧಾಳಿ ನಡೆಸಿದರು.
ಹೋದಲ್ಲೆಲ್ಲ ಖರ್ಗೆ ಅವರು ನಾನು ಅಭಿವೃದ್ಧಿ ಮಾಡಿದ್ದೇನೆ. ನಾನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಯಾರೂ ಮಾಡದಂಥ ವಿಶೇಷ ಅಭಿವೃದ್ಧಿ ಮಾಡಿದ್ದಾರಾ? ರಾಜಕಾರಣದಲ್ಲಿ ಖರ್ಗೆ ಮುಖ್ಯಮಂತ್ರಿ ಸ್ಥಾನ ಹೊರತುಪಡಸಿ ಎಲ್ಲ ಖಾತೆಗಳನ್ನು ಅನುಭವಿಸಿದ್ದಾರೆ. ಆದರೆ ಅವರನ್ನು ಗೆಲ್ಲಿಸಿದ ಗುರುಮಠಕಲ್ ಕ್ಷೇತ್ರ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಶೂನ್ಯ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಜನರು
ಯಾದಗಿರಿ ಜಿಲ್ಲೆಯಿಂದ ಗುಳೆ ಹೋಗುತ್ತಾರೆ. ಇದೇನಾ ಅವರು ಮಾಡಿರುವ ಅಭಿವೃದ್ಧಿ ಎಂದು ಪ್ರಶ್ನಿಸಿದರು.
ಕಲಬುರಗಿ ನಗರದ ಎಂಎಸ್‌ಕೆ ಮಿಲ್, ಶಹಾಬಾದ ನಗರದ ಸಿಮೆಂಟ್ ಕಂಪನಿ
ಹಾಗೂ ಕುರುಕುಂಟಾದ ಸಿಮೆಂಟ್ ಘಟಕಗಳು ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಮಂತ್ರಿಯಾಗಿದ್ದಾಗಲೇ ಬಂದ್ ಆಗಿವೆ. ಇದನ್ನು
ಜನರು ಮರೆಯಬಾರದು ಎಂದರು. ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ರಾಜು
ಮುಕ್ಕಣ್ಣ ಮಾತನಾಡಿ, ಪಾಕಿಸ್ತಾನದ ಪಾಪಿಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಕೊಂದ ಭಾರತೀಯ ಸೈನ್ಯದ ಕ್ರಮವನ್ನೇ ಕಾಂಗ್ರೆಸ್ ಪ್ರಶ್ನಿಸಿದೆ. ಎಷ್ಟು ಜನರು ಸತ್ತಿದ್ದಾರೆ ಲೆಕ್ಕ ಕೊಡಿ ಎಂದು ಕಾಂಗ್ರೆಸ್ ನಾಯಕರು
ಕೇಳುತ್ತಿದ್ದಾರೆ. ರಕ್ತ ಹೀರುವ ಸೊಳ್ಳೆಗಳನ್ನು ಹೊಸಕಿಹಾಕಿದ ಬಳಿಕ ಎಷ್ಟು ಸೊಳ್ಳೆ ಸತ್ತಿವೆ ಎಂದು ಲೆಕ್ಕ ಇಡಲಾದಿತೆ? ಕಾಂಗ್ರೆಸ್ ಪಕ್ಷದ ಜನದ್ರೋಹ ಬಯಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಮುಖ ನೋಡಿ ಸಾಕಾಗಿದೆ. ಅವರ ಮಗ ಪ್ರಿಯಾಂಕ್ ಖರ್ಗೆ ಬಹಳ ಡೇಂಜರ್. ಮಂತ್ರಿಯಾಗಿ ಗಾಳಿಯಲ್ಲಿ ಓಡಾಡುತ್ತಿದ್ದಾನೆ. ಇವರ ಆಟ ಕೊನೆಗಾಣಬೇಕು ಎಂದು ಹೇಳಿದರು.
ಚುನಾವಣೆ ನಂತರ ಡಾ| ಜಾಧವ ದವಾಖಾನೆಗೆ ಹೋಗುತ್ತಾರೆ ಎಂದು
ಟೀಕಿಸಿದ್ದ ಕಾಂಗ್ರೆಸ್‌ನ ಬಾಬುರಾವ ಚವ್ಹಾಣ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜು
ಮುಕ್ಕಣ್ಣ, ಚುನಾವಣೆಯಲ್ಲಿ ಜಾಧವ ಗೆದ್ದು ಸಚಿವರಾಗುತ್ತಾರೆ. ಸೋತ ನಂತರ ಖರ್ಗೆ ಅವರು ರೋಗಿಯಾಗಿ ಡಾ| ಉಮೇಶ ಜಾಧವ ಅವರ ದವಾಖಾನೆಯಲ್ಲಿ ದಾಖಲಾಗುತ್ತಾರೆ ಎಂದು ಚುಚ್ಚಿದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ, ವಾಲ್ಮೀಕಿ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಧರ್ಮಣ್ಣ ಇಟಗಾ ಮಾತನಾಡಿದರು.
ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ವಾಡಿ ಅಧ್ಯಕ್ಷ ಬಸವರಾಜ
ಪಂಚಾಳ, ಜಿಲ್ಲಾ ಮುಖಂಡ ಶರಣಪ್ಪ ತಳವಾರ, ಶ್ರೀಶೈಲ ನಾಟೀಕಾರ,
ಚಂದ್ರಕಾಂತ ಹೂಗಾರ, ಶಂಕರ ಜಾಧವ ಪಾಲ್ಗೊಂಡಿದ್ದರು.
ಅಂಬೇಡ್ಕರ್ ಅವರು ಕಾಂಗ್ರೆಸ್ ಈಸ್ ಬರ್ನಿಂಗ್ ಹೌಸ್ ಎಂದು ಹೇಳಿದ್ದಾರೆ. ಹಾಗಾಗಿ ನಾನು ಸುಡುವ ಮನೆ ಬಿಟ್ಟು ಬಿಜೆಪಿ ಎನ್ನುವ ಅಭಿವೃದ್ಧಿಯ ಮನೆಗೆ ಬಂದಿದ್ದೇನೆ. ನಾನು ಗೆದ್ದರೆ ನರೇಂದ್ರ ಮೋದಿ ಗೆದ್ದಂತೆ. ಖರ್ಗೆ ವಿರುದ್ಧ ಸೋತವರೆಲ್ಲಾ ಕಾಂಗ್ರೆಸ್ ಸೇರಿದ್ದಾರೆ. ಖರ್ಗೆ ಹತ್ತಿರ ಅಂತಹ ಯಾವ ಮಂತ್ರವಿದೆಯೋ ನನಗೆ ಅರ್ಥವಾಗುತ್ತಿಲ್ಲ.
ಡಾ| ಉಮೇಶ ಜಾಧವ,
ಕಲಬುರಗಿ ಲೋಕಸಭೆ
ಕ್ಷೇತ್ರದ ಬಿಜೆಪಿ ಅಭ್ಯರ್ಥಿ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.