ಕಲಬುರಗಿಯಲ್ಲಿ ಮುಂದುವರೆದ ಮಳೆ : ಹತ್ತಕ್ಮೂ ಹೆಚ್ಚು ಮನೆ ಕುಸಿತ : ಮಳೆಗೆ ಮೊದಲ ಬಲಿ
ಜನ ಜೀವನ ಅಸ್ತವ್ಯಸ್ತ
Team Udayavani, Jul 9, 2022, 10:08 PM IST
ಕಲಬುರಗಿ : ತುಂತುರು ಹಾಗೂ ಸ್ವಲ್ಪ ಜೋರಾಗಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರೆದಿದೆ.
ಸತತ ಮಳೆಯಿಂದ ಹೊಲಗಳಲ್ಲಿ ನೀರು ನಿಲ್ಲಲಾರಂಭಿಸಿದ್ದು, ಮನೆಗಳು ಸಹ ಬಿದ್ದಿರುವುದು ವರದಿಯಾಗಿದೆ. ಚಿತ್ತಾಪುರ ಪಟ್ಟಣದ ಸ್ಟೇಷನ್ ಪ್ರದೇಶದಲ್ಲಿ ಅರೀಪಾಬೇಗಂ ಗಂಡ ಸರ್ದಾರ್ ಅಲಿ (65) ಎನ್ನುವ ಮಹಿಳೆ ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.
ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ನಗರ ಪ್ರದೇಶದಲ್ಲಂತು ನಾಗರೀಕರು ಮಳೆ ಹಿನ್ನೆಲೆಯಲ್ಲಿ ಹೊರಗೆ ಬಾರದೇ ಮನೆಯಲ್ಲೇ ಉಳಿದುಕೊಂಡಿರುವುದು ಕಂಡು ಬಂತು.
ವ್ಯಾಪಕ ಮಳೆ ಮುನ್ಸೂಚನೆ ಹಿನ್ನಡೆಯಲ್ಲಿ ಶನಿವಾರ ಶಾಲಾ ಕಾಲೇಜುಗಳಿಗೆ ಶುಕ್ರವಾರ ಸಂಜೆಯೇ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದರು.
ಗ್ರಾಮೀಣ ಭಾಗದಲ್ಲೂ ಸತತ ಮಳೆ ಸುರಿಯುತ್ತಿರುವುದರಿಂದ ರೈತರು ಸಹ ಹೊಲಗಳಿಗೆ ಹೋಗದೇ ಮನೆಯಲ್ಲಿ ಉಳಿದುಕೊಂಡಿರುವುದು ಕಂಡು ಬಂತು. ಒಟ್ಟಾರೆ ಸತತ ಜಿಟಿಪಿಟಿ ಹಾಗೂ ಸ್ವಲ್ಪ ಜೋರಾದ ಮಳೆಗೆ ಜಿಲ್ಲಾಡಳಿತ ನಿಗಾ ವಹಿಸಿದ್ದು, ತನ್ನ ಅಧೀನ ಅಧಿಕಾರಿಗಳಿಗೆ ಕೇಂದ್ರ ಸ್ಥಾನ ಬಿಡದಿರುವಂತೆ ನಿರ್ದೇಶನ ನೀಡಲಾಗಿದೆ.
ಭಾಗಶ ಬಿದ್ದ 10 ಮನೆಗಳು : ಸತತ ಮಳೆಗೆ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಮನೆಗಳು ಭಾಗಶ: ಬಿದ್ದಿವೆ. ಅದೇ ರೀತಿ ಇನ್ನೂ ಹಲವೆಡೆ ಮನೆಗಳು ಅಲ್ಪಸ್ವಲ್ಪ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆ ಯಾದ್ಯಂತ 17.08 ಮೀ.ಮೀ. ಮಳೆಯಾಗಿದೆ. ಅತಿ ಹೆಚ್ಚಿನ ಮಳೆ ಚಿಂಚೋಳಿ ಹಾಗೂ ಶಹಾಬಾದ್ ತಾಲೂಕಿನಲ್ಲಿ 25 ಮೀ. ಮೀ ಮಳೆಯಾಗಿದೆ. ಅತಿ ಕಡಿಮೆ ಅಫಜಲಪುರ ತಾಲೂಕಿನಲ್ಲಿ 16. 7 ಮೀ.ಮೀ ಮಳೆಯಾಗಿದೆ.
ರೇನ್ ಕೊಟ್ ಗೆ ಮುಗಿ ಬಿದ್ದ ಜನತೆ
ಸತತ ಸುರಿಯುತ್ತಿರುವ ಮಳೆಯಿಂದ ಹಾಗೂ ಊಟಿಯಂತೆ ತಣ್ಣಗೆ ವಾತಾವರಣ ನಿರ್ಮಾಣವಾಗಿದ್ದರಿಂದ ಕಲಬುರಗಿ ನಗರದ ಪ್ರದೇಶದಲ್ಲಿ ರೇನ್ ಕೋಟ್ ಖರೀದಿ ಮಾಡಲು ಜನ ಮುಗಿ ಬಿದ್ದಿರುವುದು ಕಂಡುಬಂತು. ಒಟ್ಟಾರೆ ಸತತ ಜಿಟಿಪಿಟಿ ಮಳೆಯಿಂದ ರಸ್ತೆಗಳು ಜನರಿಲ್ಲದೇ ಕೆಲ ಸಮಯ ಭಣಗುಟ್ಟಿರುವುದು ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.