![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 27, 2019, 10:18 AM IST
ಕಲಬುರಗಿ: ದೇಶದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಕೋನದಲ್ಲಿ ರಚಿತವಾದ ಭಾರತದಂತ ಸಂವಿಧಾನ ಜಗತ್ತಿನ ಯಾವ ದೇಶದಲ್ಲೂ ಇಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಪೊಲೀಸ್ ಮೈದಾನದಲ್ಲಿ ದೇಶದ 70ನೇ ಗಣರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತ ಮೇಲೆ ಸಂವಿಧಾನ ರಚನೆ ಕಾರ್ಯ ಅಷ್ಟೊಂದು ಸಲೀಸಾಗಿರಲಿಲ್ಲ. ಆದರೆ ಡಾ| ಬಿ.ಆರ್. ಅಂಬೇಡ್ಕರ್ ವಿವಿಧ ವಿದೇಶಗಳ ಸಂವಿಧಾನ ಓದಿ, ಭಾರತ ದೇಶದ ಸರ್ವಧರ್ಮ, ಎಲ್ಲ ಭಾಷಿಕರು ಸೇರಿದಂತೆ ಸರ್ವರ ಅಭಿವೃದ್ಧಿ ಗಮನದಲ್ಲಿರಿಸಿ ಸಂವಿಧಾನ ರಚಿಸಿದರು ಎಂದು ಹೇಳಿದರು.
ಸುದೀರ್ಘ 70 ವರ್ಷಗಳಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಮಾತು ಕೇವಲ ಘೋಷಣೆಯಾಗಿ ಉಳಿಯದಂತೆ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನ್ಯಾಯ ಕಲ್ಪಿಸಲಾಗಿದೆ. ಆದರೆ ಇತ್ತೀಚೆಗೆ ವಿಶ್ವದಲ್ಲೇ ಶ್ರೇಷ್ಠವಾಗಿರುವ ಸಂವಿಧಾನದ ಬಗ್ಗೆ ಹಗುರಾಗಿ ಮಾತನಾಡುತ್ತಿದ್ದಾರೆ. ಆದರೆ ಶೋಷಿತರು-ದುರ್ಬಲರು ಮುಖ್ಯವಾಹಿನಿಗೆ ಬರಬೇಕೆಂಬುದೇ ಸಂವಿಧಾನದ ಆಶಯವಾಗಿದೆ ಎಂದರು.
ಕಲಬುರಗಿ ನಗರದಲ್ಲಿ 46.18 ಕೋಟಿ ರೂ. ವೆಚ್ಚದಲ್ಲಿ ಐದು ನೂತನ ಮಾದರಿ ವಸತಿನಿಲಯ, ಜೇವರ್ಗಿಯಲ್ಲಿ 15.66 ಕೋಟಿ ರೂ. ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪಿಸಲಾಗುತ್ತಿದೆ. ಮುಂದಿನ ತಿಂಗಳು ಈ ಕಾರ್ಯಕ್ಕೆ ಅಡಿಗಲ್ಲು ನೆರವೇರಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಗತಿ ತಾಂಡಾ ಯೋಜನೆ, ಐರಾವತ್, ಉನ್ನತಿ, ಸಮೃದ್ಧಿ, ಪ್ರಗತಿ ಕಾಲೋನಿ ಹಾಗೂ ಪ್ರಬುದ್ಧ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಸಚಿವರು ಪ್ರೊಬೇಷನರಿ ಎಎಸ್‌ಪಿ ರಾಮ ರಾಜನ್, ಸಹಾಯಕ ಪರೇಡ್ ಕಮಾಂಡರ್ ಆರ್‌ಪಿಐ ಚನ್ನಬಸವ ನೇತೃತ್ವದ ತಂಡ ಸರ್ಕಾರಿ ಅಂಧ ಬಾಲಕರ ವಸತಿ ಶಾಲೆ, ಪೊಲೀಸ್ ವಾದ್ಯ ವೃಂದ ಸೇರಿದಂತೆ ಒಟ್ಟು 17 ತುಕಡಿಗಳಿಂದ ಪರೇಡ್ ವಂದನೆ ಸ್ವೀಕರಿಸಿದರು.
ಸನ್ಮಾನ: ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರಾದ ವೆಂಕಟರಾವ್ ಅರ್ಜುನರಾವ್, ಬಾಬುರಾವ್ ಶಂಕರರಾವ್ ದೇಶಮುಖ, ಸೀತಾರಾಂ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ| ಶಿವಾನಂದ ಲೇಂಗಟಿ, ಜಿಮ್ಸ್‌ನ ವೈದ್ಯ ಡಾ| ಸಂದೀಪ, ಅಧಿಕಾರಿಗಳಾದ ಗೊಬ್ಬೂರ ದತ್ತಪ್ಪಾ, ಮಹ್ಮದ್ ಸಲೀಮ್, ಜಾಫರ ಖಾಸಿಂ ಅನ್ಸಾರಿ, ಪಟ್ಟಣ ನಾಡ ಕಚೇರಿ ಗ್ರಾಮ ಲೆಕ್ಕಿಗ ಶ್ರೀವತ್ಸ ಅವರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ತಲಾ 10,000 ರೂ. ಚೆಕ್ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಉತ್ತಮ ಸೇವಾ ಪ್ರಶಸ್ತಿ ಪಡೆದ ಇನ್ಸ್‌ಪೆಕ್ಟರ್ ರಮೇಶ ಕಾಂಬಳೆ, ಶಿರಸ್ತೇದಾರ ಸಂಜೀವಕುಮಾರ ಪಾಟೀಲ, ಜಿಲ್ಲಾಸ್ಪತ್ರೆಯ ಮಹ್ಮದ ಅಬ್ದುಲ್ ಹೈ, ವಾರ್ತಾ ಇಲಾಖೆಯ ಛಾಯಾಗ್ರಾಹಕ ತುಳಜಾರಾಮ ಪವಾರ, ಡಿಸಿ ಕಚೇರಿಯ ರಾಘವೇಂದ್ರ ಅವರಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಡಾ| ಶಿವಾರಾಂ ಅಸುಂಡಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಪತ್ರಕರ್ತ ಪ್ರಭಾಕರ ಜೋಶಿ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. 2018-19ನೇ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಕಲಬುರಗಿ ತಾಲೂಕಿನ ಉದನೂರ ಗ್ರಾಮದ ಬಸವರಾಜ ಅರ್ಜುನರಾವ್ ಪಾಟೀಲ ಸೇರಿದಂತೆ ಏಳು ರೈತರನ್ನು ಕೃಷಿ ಇಲಾಖೆಯಿಂದ ಸನ್ಮಾನಿಸಲಾಯಿತು. ಡಾ| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗಕ್ಕಾಗಿ ನೀಡಲಾಗುವ ಒಂದು ಲಕ್ಷ ರೂ.ಗಳ ನೇರಸಾಲ ಚೆಕ್‌ನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಇದೇ ವೇಳೆ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ರಚಿಸಿದ ‘ಸಂವಿಧಾನ ಓದು-ವಿದ್ಯಾರ್ಥಿ, ಯುವಜನರಿಗಾಗಿ’ ಕೈಪಿಡಿ ಬಿಡುಗಡೆ ಮಾಡಿದರು.
ಶಾಸಕಿ ಖನೀಜ್ ಫಾತೀಮಾ, ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಆರ್‌ಸಿ ಸುಭೋದ ಯಾದವ್, ಐಜಿಪಿ ಮನೀಷ ಕರ್ಬೀಕರ್, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಎಸ್‌ಪಿ ಶಶಿಕುಮಾರ, ಸಿಇಒ ಡಾ| ಪಿ. ರಾಜಾ, ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರ್ರನುಮ್, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ ಮತ್ತಿತರರು ಇದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.