ಎಲ್ಲಾ ವಿಷಯದಲ್ಲಿ ಇತಿಹಾಸ ನಿರ್ಮಿಸಿದೆ ಕಲಬುರಗಿ ಸಾಹಿತ್ಯ ಸಮ್ಮೇಳನ
Team Udayavani, Feb 9, 2020, 1:31 PM IST
ಕಲಬುರಗಿ: ಮೂರು ದಿನಗಳ ಕಾಲ ನಡೆದ ಅಖಿಲ ಭಾರತ 85ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯ ಎಲ್ಲಾ ವಿಧಗಳಲ್ಲೂ ಇತಿಹಾಸ ನಿರ್ಮಿಸಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ತಿಳಿಸಿದರು.
ಕನ್ನಡ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಅಂದಾಜು 5ರಿಂದ 6 ಲಕ್ಷ ಜನ ಬಂದಿರುವುದು, 22 ಸಾವಿರ ಪ್ರತಿನಿಧಿಗಳಾಗಿರುವುದು, ನಿರೀಕ್ಷೆ ಮೀರಿ ಪುಸ್ತಕ ವಹಿವಾಟು, ಎಲ್ಲೂ ಒಂದೂ ಅನಪೇಕ್ಷಿತ ಘಟನೆ ನಡೆಯದಿರುವುದು, ಯಾರಿಗೂ ಊಟದ ಕೊರೆತೆಯಾಗದಂತೆ ಸಮ್ಮೇಳನ ನಡೆದಿರುವುದು ದಾಖಲೆಯಾಗಿದೆ ಎಂದು ವಿವರಣೆ ನೀಡಿದರು.
ಸಮ್ಮೇಳನ ಯಶಸ್ವಿಯಲ್ಲಿ ಶಾಸಕ- ಜನಪ್ರತಿನಿಧಿಗಳ ನೇತೃತ್ವದ ಹಾಗೂ ಅಧಿಕಾರಿಗಳು ಒಳಗೊಂಡ ಕಾರ್ಯಾಧ್ಯಕ್ಷರು, ಇತರೆ ಅಧಿಕಾರಿಗಳ ತಂಡ ಶ್ರಮವಹಿಸಿದೆ. ಅದರಲ್ಲೂ ದಕ್ಷ, ದೂರದೃಷ್ಟಿಯುಳ್ಳ ಹಾಗೂ ಹಗಲಿರಳು ಶ್ರಮಿಸಿದ ಜಿಲ್ಲಾಧಿಕಾರಿ ಶರತ್ ಬಿ ಅವರ ಪಾತ್ರ, ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿ ಗೆ ಹೆಚ್ಚಿನ ಸಲ ಬಾರದೇ ಇದ್ದರೂ ದಿನಾಲು ಸಿದ್ಧತೆಗಳ ವಿವರಣೆ ಕೇಳುತ್ತಾ ಮಾರ್ಗದರ್ಶನ ನೀಡಿರುವುದು ಮತ್ತು ಬಹು ಮುಖ್ಯವಾಗಿ ನಾಡಿನ ಜನತೆ ಉತ್ಸುಕತೆ ಪಾಲ್ಗೊಂಡಿರುವುದು ಸಮ್ಮೇಳನ ಯಶಸ್ವಿಗೆ ಕಾರಣಗಳಾಗಿವೆ ಎಂದು ಸಿಂಪಿ ವಿವರಣೆ ನೀಡಿದರು.
ತಾನು ಒಂಬತ್ತು ಸಮ್ಮೇಳನದಲ್ಲಿ ಭಾಗವಹಿಸಿ ಎಲ್ಲವನ್ನೂ ನೋಡಿದ್ದೇನೆ. ಆದರೆ ಕಲಬುರಗಿ ಸಮ್ಮೇಳನ ಎಲ್ಲದರಲ್ಲೂ ಒಂದೆರಡು ಹೆಜ್ಜೆ ಮುಂದಿದೆ. ಹೀಗಾಗಿ ಎಲ್ಲರಿಗೂ ಶಿರಸಾಷ್ಟಾಂಗ ನಮಸ್ಕಾರ ಸಲ್ಲಿಸುವೆ ಎಂದರು.
ಕಸಾಪ ಗೌರವ ಕಾಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ನಾಗರಹಳ್ಳಿ, ಖಜಾಂಚಿ ದೌಲತರಾವ ಮಾಲಿಪಾಟೀಲ್, ಇತರ ಪದಾಧಿಕಾರಿಗಳಾದ ಸೂರ್ಯಕಾಂತ ಪಾಟೀಲ್, ಲಿಂಗರಾಜ ಸಿರಗಾಪುರ, ಆನಂದ ನಂದೂರಕರ್.ವಿಶ್ವನಾಥ ಭಕರೆ, ವೀರಸಂಗಪ್ಪ, ಪ್ರೇಮಕುಮಾರ, ರಮೇಶ ಕಡಾಳೆ, ಚಂದ್ರಶೇಖರ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.