![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 29, 2020, 10:38 AM IST
ಕಾಳಗಿ: ಪಟ್ಟಣದಲ್ಲಿ ರಸ್ತೆ ಮೇಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಶುಕ್ರವಾರ ತಹಶೀಲ್ದಾರ್ ನೀಲಪ್ರಬಾ ಬಬಲಾದ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೇಂಕಟೇಶ ತೆಲಾಂಗ್ ನೇತೃತ್ವದಲ್ಲಿ ತೆರವು ಗೊಳಿಸಲಾಯಿತು.
ಸರ್ವೋಚ್ಚ ನ್ಯಾಯಲಯದ ಆದೇಶ ಹಾಗೂ ಜಿಲ್ಲಾಧಿಕಾರಿ ನಿದೇರ್ಶನದಂತೆ ಸಾರ್ವಜನಿಕ ರಸ್ತೆ ಮೇಲಿರುವ ಅನಧಿಕೃತ ಧಾರ್ಮಿಕ ಕಟ್ಟಡ, ಮಸೀದಿ ತೆರವುಗೊಳಿಸಲು ಶುಕ್ರವಾರ ಬೆಳ್ಳಂಬೆಳಗ್ಗೆ ಪೊಲೀಸ್ ಬಂದೋಬಸ್ತ್ನೊಂದಿಗೆ ಎರಡು ಜೆಸಿಬಿ ಯಂತ್ರ, ಮೂರು ಟ್ರ್ಯಾಕ್ಟರ್‌ನೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಅಕ್ರಮ ಪಾಂಡೆಬ್ಬಿ, ಲಕ್ಷ್ಮೀ ದೇವಸ್ಥಾನ, ಯಂಕರೆಡ್ಡಿ ದೇವಸ್ಥಾನ, ಪಿಕಲಮ್ಮ ದೇವಸ್ಥಾನ, ಯಲ್ಲಮ್ಮ ದೇವಸ್ಥಾನ, ರಾಮನಗರ ದರ್ಗಾವನ್ನು ತೆರವುಗೊಳಿಸಲಾಯಿತು. ಬಸ್‌ನಿಲ್ದಾಣದ ಹನುಮಾನ ದೇವಸ್ಥಾನ, ಮುಖ್ಯಬಜಾರ್‌ನ ಗಾಳಿ ಮರ್ಗಮ್ಮ ದೇವಸ್ಥಾನ ತೆರವುಗೊಳಿಸಲು ಮುಂದಾದ ಅಧಿಕಾರಿ ತಂಡದವರೊಂದಿಗೆ ಸ್ಥಳೀಯ ಸಾರ್ವಜನಿಕರು ವಾಗ್ವಾದಕ್ಕಿಳಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶ ಇರುವುದರಿಂದ ತೆರವು ಕಾರ್ಯಚರಣೆ ಅನಿವಾರ್ಯವಾಗಿದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಸಾರ್ವಜನಿಕರ ಮನವೊಲಿಸಿ ತೆರವುಗೊಳಿಸಿದರು.
ಧಾರ್ಮಿಕ ಆಚರಣೆ ಅನುಸಾರ ಪೂಜಾ ಕಾರ್ಯ ಕೈಗೊಂಡು ದೇವರ ಮೂರ್ತಿ ಸ್ಥಳಾಂತರಿಸಿದ ಮೇಲೆ ಬಸ್ ನಿಲ್ದಾಣದ ಹನುಮಾನ ದೇವಸ್ಥಾನ, ಮುಖ್ಯಬಜಾರನ ಗಾಳಿ ಮರ್ಗಮ್ಮನ ದೇವಸ್ಥಾನ ತೆರವುಗೊಳಿಸಲಾಯಿತು. ಕಾಳಗಿ ಪಟ್ಟಣದಲ್ಲಿ ಏಳು ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ತಿಳಿಸಿದ್ದಾರೆ.
ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರೆದಾರ, ಪಟ್ಟಣಪಂಚಾಯತ ಮುಖ್ಯಾಧಿ ಕಾರಿ ವೆಂಕಟೇಶ ತೆಲಾಂಗ, ಪಿಡಬ್ಲ್ಯುಡಿ ಎಇಇ ಮುಸ್ತಾಕ್ ಅಹ್ಮದ್, ಜಿಲ್ಲಾ ಪಂಚಾಯತ ಎಇಇ ವೀರೇಂದ್ರಕುಮಾರ, ಜೆಸ್ಕಾಂ ಎಇಇ ವಿವೇಕಾನಂದ ಕುಲಕರ್ಣಿ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂ ದಿ ಇದ್ದರು. ಪಿಎಸ್‌ಐ ಬಸವರಾಜ ಚಿತ್ತಕೊಟಿ ನೇತೃತ್ವದ 40ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.
ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ರಸ್ತೆ ಮೇಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇದಕ್ಕೂ ಮೊದಲು ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿ, ಅವರ ಅನುಮತಿ ಪಡೆದು ಎಲ್ಲರ ಸಹಕಾರದೊಂದಿಗೆ ತೆರವು ಕಾರ್ಯಚರಣೆ ಮಾಡಲಾಗಿದೆ.
ವೆಂಕಟೇಶ ತೆಲಾಂಗ್,
ಪ.ಪಂ ಮುಖ್ಯಾಧಿಕಾರಿ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.