ಬಿಸಿಲ ನಾಡಿನಲ್ಲಿ ಬಣ್ಣದೋಕುಳಿ ಕಲರವ
Team Udayavani, Mar 13, 2017, 3:03 PM IST
ಕಲಬುರಗಿ: ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಹೋಳಿ ಹಬ್ಬದ ರಂಗಿನಾಟ ಬಿಸಿಲು ನಾಡು ಕಲಬುರಗಿಯಲ್ಲಿ ರವಿವಾರ ಶುರುವಾಗಿದ್ದು, ಸೋಮವಾರ ಬಣ್ಣದೋಕುಳಿ ನಡೆಯಲಿದೆ. ರವಿವಾರ ದಿನದಂದೇ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬಣ್ಣದಾಟ ಆರಂಭವಾಗಿತ್ತು.
ಮಕ್ಕಳು,ಯುವಕರು, ಮಹಿಳೆಯರು ವಿವಿಧ ರೂಪದ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಹೋಳಿ ಹಬ್ಬದ ಸಂಭ್ರಮ ಸವಿದರು. ನಗರದ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಹೋಳಿ ಹಬ್ಬದಂಗವಾಗಿ ವಿವಿಧ ತರಹದ ಬಣ್ಣಗಳನ್ನು ಯುವಕರು ಒಬ್ಬರಿಗೊಬ್ಬರ ಮೇಲೆ ಎರಚಿದರೆಮಕ್ಕಳು ಪಿಚಕಾರಿ ಹಾಗೂ ಬಾಟಲಿಗಳಲ್ಲಿ ಬಣ್ಣವನ್ನು ತುಂಬಿಕೊಂಡು ಎರಚಿದರು.
ಪ್ರಮುಖ ರಸ್ತೆಗಳಲ್ಲಿ ಹೋಳಿ ಹುಣ್ಣಿಮೆಯ ಆಚರಣೆಕಾರರಿಂದ ಬಣ್ಣವನ್ನು ಮೈಮೇಲೆ ಹಾಕುವುದರಿಂದ ತಪ್ಪಿಸಿಕೊಳ್ಳಲು ಅನೇಕ ಕಡೆಗಳಲ್ಲಿ ವಾಹನ ಸವಾರರು ಮತ್ತು ಪಾದಾಚಾರಿಗಳು ವಿಫಲಯತ್ನ ನಡೆಸಿದರು. ಆದಾಗ್ಯೂ, ಮಕ್ಕಳು ಹಾಗೂಯುವಕರು ಓಡೋಡಿ ಬಣ್ಣ ಎರಚಿದರು. ಹಲವಾರು ವೃತ್ತಗಳಲ್ಲಿ ಗುಂಪು, ಗುಂಪಾಗಿ ಸೇರಿದ್ದ ಯುವಕರ ಪಡೆಯು ಬಣ್ಣಗಳಲ್ಲಿ ಮಿಂದೆದ್ದು, ಕುಣಿದು, ಕುಪ್ಪಳಿಸಿದರು.
ದ್ವಿಚಕ್ರವಾಹನಗಳ ಮೇಲೆ ಅನೇಕ ಯುವಕರು ಸಂಚರಿಸಿ ಬಣ್ಣದಾಟದಲ್ಲಿ ತೊಡಗಿದರು. ಸವಾರರು ತಾವು ರಂಗು, ರಂಗಾಗಿದ್ದರಲ್ಲದೇ ಅವರ ವಾಹನಗಳೂ ಸಹಬಣ್ಣದಲ್ಲಿ ಮುಳುಗೆದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಸೋಮವಾರ ಬೆಳಗಿನ ಜಾವ ಕಾಮದಹನವಾದ ನಂತರ ರಂಗು, ರಂಗಿನ ಹೋಳಿ ಆಟಕ್ಕೆ ಮತ್ತಷ್ಟು ರಂಗು ಬರಲಿದೆ. ಸೋಮವಾರ ದಿನವಿಡಿ ಬಣ್ಣದೋಕುಳಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.