ಕ್ಯಾನ್ಸರ್‌ಗೆ ರೋಬೊಟಿಕ್ ಸರ್ಜರಿ ವರದಾನ
ಪರಿಣಿತರಲ್ಲದವರಿಗೂ ಚಿಕಿತ್ಸೆ ಮಾಹಿತಿ ಲಭ್ಯ
Team Udayavani, Feb 14, 2021, 3:17 PM IST
ಕಲಬುರಗಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಾಧುನಿಕ ಮತ್ತು ನಾವಿನ್ಯ ತಂತ್ರಜ್ಞಾನ ಆವಿಷ್ಕಾರಗೊಂಡಿದ್ದು, ಇದರಿಂದ ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಹೈದರಾಬಾದ್‌ನ ಅಮೆರಿಕನ್ ಆಂಕಾಲಜಿ ಇನ್‌ಸ್ಟಿಟ್ಯೂಟ್ ತಜ್ಞ ಡಾ| ಜಗದೀಶ್ವರ ಗೌಡ ಹೇಳಿದರು.
ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಶನಿವಾರ ಎಂಆರ್‌ಎಂಸಿ, ಅಮೆರಿಕನ್ ಆಂಕಾಲಜಿ ಇನ್ ಸ್ಟಿಟ್ಯೂಟ್, ಸಿಟಿಝೆನ್ಸ್ ಹಾಸ್ಟಿಟಲ್ ಸಹಯೋಗದಲ್ಲಿ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯಲ್ಲಿ ಇತ್ತೀಚೆಯ ಹೊಸ ತಂತ್ರಜ್ಞಾನ ಬೆಳವಣಿಗೆ ಕುರಿತು ಹಮ್ಮಿಕೊಂಡಿದ್ದ ನಿರಂತರ ವೈದ್ಯಕೀಯ ಕಾರ್ಯಾಗಾರ (ಸಿಎಂಇ)ದಲ್ಲಿ ಅವರು ಮಾತನಾಡಿದರು.
ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಚಿಕಿತ್ಸೆ ನೀಡುವುದರಿಂದ ಶಸ್ತ್ರ ಚಿಕಿತ್ಸೆ ಮಾಡುವುದು ಕೆಲವೊಂದು ಪ್ರಕರಣಗಳಿಗೆ ಅಗತ್ಯವಾಗುವುದಿಲ್ಲ. ರೋಬೊಟಿಕ್ ಸರ್ಜರಿ ಕ್ಯಾನ್ಸರ್‌ನ್ನು ಪರಿಣಾಕಾರಿಯಾಗಿ ನಿರ್ವಹಿಸಬಲ್ಲ ವಿಧಾನವಾಗಿದೆ.
ರೋಬೋಟಿಕ್ ಸರ್ಜರಿ ಕ್ಯಾನ್ಸರ್ ರೋಗಿಗಳಿಗೆ ವರದಾನ ಎಂದರು.
ಕ್ಯಾನ್ಸರ್ ಚಿಕಿತ್ಸೆ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಮತ್ತು ತಂತ್ರಜ್ಞಾನ ಬಳಕೆ ಮಾಡಿಕೊಂಡು ಅತ್ಯಲ್ಪ ಸಮಯದಲ್ಲಿ ಪರಿಣಾಮಕಾರಿ ಚಿಕಿತ್ಸೆ
ನೀಡಬಹುದಾಗಿದೆ. ರೋಬೋಟಿಕ್ ಸರ್ಜರಿ ವಿಧಾನದಿಂದ ಕ್ಯಾನ್ಸರ್ ಪರಿಣಿತರಲ್ಲದವರೂ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು
ಅರಿತುಕೊಳ್ಳಬಹುದಾಗಿದೆ ಎಂದರು.
ಗಂಟಲು ಮತ್ತು ಥೈರಾಡ್ ಕ್ಯಾನ್ಸರ್ ಕಾಣಿಸಿಕೊಂಡವರಿಗೆ ಕನಿಷ್ಠ 10ರಿಂದ 30ಮಿಲಿ ಕ್ಯೂರಿಯಷ್ಟು ಬಳಸಿಕೊಂಡು ವಿಕಿರಣ ಚಿಕಿತ್ಸೆ
ನೀಡಬಹುದಾಗಿದೆ. ಹೆಚ್ಚು ಕ್ಯಾನ್ಸರ್ ಕಣಗಳಿದ್ದರೆ ಅದನ್ನು 100ಮಿಲಿ ಕ್ಯೂರಿಯಷ್ಟು ಬಳಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಎಂಆರ್ ಎಂಸಿ ಡೀನ್ ಡಾ| ಉಮೇಶ್ಚಂದ್ರ, ಬದಲಾದ ಜೀವನಶೈಲಿಯಿಂದ ಕ್ಯಾನರ್ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೊಂದು ಪದ್ಧತಿ ಪಾಲಿಸುವ ಮೂಲಕ ರೋಗಮುಕ್ತರಾಗಬಹುದು ಎಂದರು.
ಎಂಆರ್‌ಎಂಸಿ ಸರ್ಜರಿ ವಿಭಾಗ ಮುಖ್ಯಸ್ಥ ಡಾ| ವಿಜಯಕುಮಾರ ಕಪ್ಪಿಕೇರಿ, ಡಾ| ರಾಜಶೇಖರ ಪಾಟೀಲ, ಪ್ರಾಧ್ಯಾಪಕರಾದ ಡಾ| ಎಸ್.ಎಸ್.
ಕಾರಭಾರಿ, ಡಾ| ಸುರೇಶ ಪಾಟೀಲ, ಕೆಬಿಎನ್ ಕಾಲೇಜಿನ ಡಾ| ರವೀಂದ್ರ ದೇವಣಿ, ಇಎಸ್ ಐಸಿ ಕಾಲೇಜಿನ ಡಾ| ರವೀಂದ್ರ ದಡೇದ,
ಡಾ| ವಿಜಯಕುಮಾರ ವೇಮೂರಿ, ಬಸವೇಶ್ವರ ಆಸ್ಪತ್ರೆಯ ಮೆಡಿಕಲ್ ಸಹ ಅಧೀಕ್ಷಕ ಡಾ| ಎಂ.ಆರ್. ಪೂಜಾರಿ, ಡಾ| ರವೀಂದ್ರ ಪಾಟೀಲ,
ಡಾ| ಡಿ.ಎಸ್.ಸಜ್ಜನ, ಎಂಆರ್‌ಡಿ ವಿಭಾಗದ ಮುಖ್ಯಸ್ಥ ಸದಾನಂದ ಮಹಾಗಾಂವ, ಡಾ| ಪ್ರೀತಿ ಕೊಣ್ಣೂರ ಹಾಗೂ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಓದಿ : ಶಿಥಿಲಾವಸ್ಥೆಯ ಕಚೇರಿಯನ್ನು ಸ್ವತಃ ಸ್ವಚ್ಚಗೊಳಿಸಿದ ಕಲಬುರಗಿ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.