ಅಂತಾರಾಜ್ಯ ಮೊಬೈಲ್ ಕಳರ ಬಂಧನ
|ಹೈದ್ರಾಬಾದ್‌ನ ಚೆರಾÉಪಲ್ಲಿಯಲ್ಲಿ ಬಂಧನ
Team Udayavani, Feb 14, 2021, 3:48 PM IST
ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಮೊಬೈಲ್ ಅಂಗಡಿಯೊಂದರ ಕಳ್ಳತನ ಪ್ರಕರಣದಲ್ಲಿ ನಾಲ್ವರು ಅಂತಾರಾಜ್ಯ ಮೊಬೈಲ್ ಕಳ್ಳರನ್ನು ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದು, ಎರಡು ಲಕ್ಷ ರೂ.ಗೂ ಅಧಿಕ ಮೌಲ್ಯದ 18 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಮುಂಬೈ ಮೂಲದ ಮಹ್ಮದ್ ತಬ್ರೇಜ್ ದಾವೂದ್ ಶೇಖ್, ಫರಹಾನ್ ಮುಮ್ತಾಜ್ ಶೇಖ್, ರಶೀದ್ ಅಹ್ಮದ್ ರμàಕ್ ಶೇಖ್ ಮತ್ತು ರಾಜು
ಪಾಂಡುರಂಗ ಅಂಬೇಕರ್ ಎಂಬುವವರೇ ಬಂಧಿತ ಕಳ್ಳರಾಗಿದ್ದಾರೆ.
ಕಳೆದ ಅಕ್ಟೋಬರ್‌ನ 15-16ರ ರಾತ್ರಿ ಸೂಪರ್ ಮಾರ್ಕೆಟ್‌ನ “ದಿ ಮೊಬೈಲ್ ಮಾಸ್ಟ್‌ರ್’ ಅಂಗಡಿಯ ಕೀಲಿ ಮುರಿದು ಅಂದಾಜು 15
ಲಕ್ಷ ಮೌಲ್ಯದ 86 ಮೊಬೈಲ್ ಮತ್ತು ಮೊಬೈಲ್‌ಗೆ ಸಂಬಂಧಪಟ್ಟ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಬ್ರಹ್ಮಪುರ ಠಾಣೆಯ ಪೊಲೀಸರು, ನಗರ ಪೊಲೀಸ್ ಆಯುಕ್ತ ಐಜಿಪಿ ಎನ್.ಸತೀಶ ಕುಮಾರ, ಉಪ ಪೊಲೀಸ್
ಆಯುಕ್ತ ಡಿ.ಕಿಶೋರಬಾಬು, “ಎ’ ಉಪ ವಿಭಾಗದ ಅಂಶುಕುಮಾರ ಮಾರ್ಗದರ್ಶನ ಹಾಗೂ ಇನ್ಸ್‌ಪೆಕ್ಟರ್ ಕಪಿಲ್‌ದೇವ, ಪಿಎಸ್‌ಐ ಕೋತ್ವಾಲ್ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಹೆಚ್ಚಿಸಿದ್ದಾರೆ.
ಹೈದರಾಬಾದ್‌ನ ಚೆರಾಪಲ್ಲಿ ಜೈಲಿನಲ್ಲಿದ್ದ ಆರೋಪಿಗಳನ್ನು ಬಾಡ್ ವಾರೆಂಟ್ ಮೇಲೆ ನಗರಕ್ಕೆ ತಂದು ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಲ್ಲದೇ, ಈ ಕಳ್ಳರಿಂದ ಮೊಬೈಲ್‌ಗಳನ್ನು ಪಡೆದಿದ್ದ ಮುಂಬೈ ಮೂಲದ ಜಾವೀದ್ ಮಜರ್ ಖಾನ್ ಎನ್ನುವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಅಂಗಡಿಯಲ್ಲಿ ಒಟ್ಟು 86 ಮೊಬೈಲ್‌ಗಳು ಕಳ್ಳತನವಾಗಿದ್ದವು. ಸದ್ಯ ಬಂಧಿತರಿಂದ 18 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಉಳಿದ ಆರೋಪಿಗಳು ಮತ್ತು ಮೊಬೈಲ್‌ಗಳ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ : ಯಾರಿಗೂ ಸಂಶಯ ಬೇಡ, ಮೀಸಲಾತಿ ಬಗ್ಗೆ ಸೂಕ್ತ ನಿರ್ಧಾರ: ಸಿಎಂ ಯಡಿಯೂರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.