ರೈತರ ಸ್ಥಿತಿ ಸುಧಾರಣೆ ಅವಶ್ಯ: ಅಜಯಸಿಂಗ್
ಸೊನ್ನ ಕ್ರಾಸ್ ಬಳಿ ಆಯೋಜಿಸಲಾಗಿದ್ದ ರೈತರ ಸಮಾಲೋಚನಾ ಸಭೆಯನ್ನು ಶಾಸಕ ಡಾ| ಅಜಯಸಿಂಗ್ ಉದ್ಘಾಟಿಸಿದರು. ತಹಶೀಲ್ದಾರ್ ಸಿದರಾಯ ಭೋಸಗಿ, ಗ್ರಾಪಂ ಅಧ್ಯಕ್ಷ ಬೈಲಪ್ಪ ನೇದಲಗಿ ಇದ್ದರು.
Team Udayavani, Feb 14, 2021, 3:53 PM IST
ಜೇವರ್ಗಿ: ರೈತರು ದೇಶದ ಬೆನ್ನೆಲುಬು ಆಗಿದ್ದು, ಅವರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಂಡ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಮುಂದಾಗಬೇಕು ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ತಾಲೂಕಿನ ಸೊನ್ನ ಕ್ರಾಸ ಬಳಿ ಇರುವ ಕಾಶಿಂ ಪಿಂಜಾರಾ ಜಮೀನಿನಲ್ಲಿ ಕಲಶ್ ಸೀಡ್ಸ್ ಆಯೋಜಿಸಿದ್ದ ರೈತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಎಂಟು ಸಾವಿರ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದ್ದು, ಸೊನ್ನ, ಕಲ್ಲಹಂಗರಗಾ, ನೆಲೋಗಿ ವ್ಯಾಪ್ತಿಯಲ್ಲಿಯೇ ಐದು ಸಾವಿರ ಎಕರೆ ಬಿತ್ತನೆ ಮಾಡಲಾಗಿದೆ.
ಕಲಶ್ ಸಿಡ್ಸ್ ಹೈಬ್ರಿಡ್ ಮೆಣಸಿನಕಾಯಿ ಹಾಗೂ ಸೊನ್ನ ವಿಜಯಕುಮಾರ ಪಾಟೀಲ ಅಗ್ರೋ ಏಜೆನ್ಸಿ ಸಹಯೋಗದಲ್ಲಿ ರೈತರಿಗೆ ಹಂತ
ಹಂತವಾಗಿ ಹೆಚ್ಚಿನ ಇಳುವರಿ ಬರುವ ಮಾಹಿತಿ ಒದಗಿಸುವ ಮೂಲಕ ಉತ್ತಮ ಇಳುವರಿಗೂ ರೈತರಿಗೆ ಸಹಕಾರಿಯಾಗಿದ್ದಾರೆ ಎಂದರು.
ಸೊನ್ನ ವಿರಕ್ತ ಮಠದ ಪೀಠಾಧಿ ಪತಿ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್‌ಸಿದರಾಯ ಭೋಸಗಿ, ನೆಲೋಗಿ
ಗ್ರಾ.ಪಂ ಅಧ್ಯಕ್ಷ ಬೈಲಪ್ಪ ನೇದಲಗಿ, ಶರಣು ಸಾಹು ಬಿಲ್ಲಾಡ, ಗಿರೆಪ್ಪಗೌಡ ಕಲ್ಲಹಂಗರಗಾ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಅಶೋಕ ಪಾಟೀಲ, ಬಹದ್ದೂರ ರಾಠೊಡ, ವಿಜಯಕುಮಾರ ಬಿರಾದಾರ, ಚಂದ್ರು ಹೊಸಮನಿ, ರಾಚಣ್ಣ ಸಾಹು ಕಲ್ಲಹಂಗರಗಿ, ಸಂಗಮೇಶ ಗೋಗಿ, ಕುಬೇರ, ಎಂ ಬಾಪುಗೌಡ ಕಲ್ಲಹಂಗರಗಿ, ಶರಣು ಹೊಸಮನಿ, ನಿಂಗಣ್ಣ ಕುಂಬಾರ, ಸುನೀಲ ಹಳ್ಳಿ, ಧೂಳೇಶ ಪಾಟೀಲ ನೆಲೋಗಿ, ಬಾಬುಗೌಡ ವಿಭೂತಿ, ಬಸವಂತ್ರಾಯಗೌಡ ಗಾಣಿಗೇರ, ಧರ್ಮರಾಜ ಜೊಗೂರ, ಶರಬು ಕಲ್ಯಾಣಿ, ಮಲ್ಲಿಕಾರ್ಜುನ ಬೂದಿಹಾಳ, ರಿಯಾಜ್ ಪಟೇಲ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.