ಸದೃಢ ವ್ಯಕ್ತಿತ್ವಕ್ಕೆ ಕರಾಟೆ ಪೂರಕ: ಬಿಇಒ ದೊಡ್ಡರಂಗಪ್ಪ
Team Udayavani, Feb 5, 2018, 12:07 PM IST
ಚಿತ್ತಾಪುರ: ಪ್ರೌಢಶಾಲೆ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಶಿಸ್ತು, ಸಂಯಮ, ಏಕಾಗ್ರತೆ ವೃದ್ಧಿಯಾಗಿ ಸದೃಢ ವ್ಯಕ್ತಿತ್ವ ರೂಪಿಸಿಕೊಳ್ಳಲು ಕರಾಟೆ ತರಬೇತಿ ಪೂರಕವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಲಬುರಗಿ ಮತ್ತು ಟೆಂಕ್ವಾಂಡೋ ಕರಾಟೆ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೌಢಶಾಲೆ
ವಿದ್ಯಾರ್ಥಿನಿಯರ ಕರಾಟೆ ಪ್ರದರ್ಶನ ಮತ್ತು ಬಹುಮಾನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ
ಪ್ರತಿಕೂಲ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ್ಥರನ್ನಾಗಿಸಲು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ಮೂಲಕ ಸ್ವಯಂ ರಕ್ಷಣಾ ತರಬೇತಿ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜಾಗಿದೆ. ಆದ್ದರಿಂದ ವಿದ್ಯಾರ್ಥಿನಿಯರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಸಿಪಿಐ ಶಂಕರಗೌಡ ಪಾಟೀಲ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಬ್ಟಾಳಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲು
ಸಾರ್ವಜನಿಕರ ಶಿಕ್ಷಣ ಇಲಾಖೆ ಹಾಕಿಕೊಂಡಿರುವ ಹೊಸ ಆಯಾಮವಾಗಿದೆ ಎಂದು ಹೇಳಿದರು.
ಅಸೋಸಿಯೇಷನ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊತಿನಮಡಿ, ಪಿಎಸ್‌ಐ ಜಗದೇವಪ್ಪ ಪಾಳಾ, ದೈಹಿಕ ಶಿಕ್ಷಣಾಧಿಕಾರಿ ದೇವಿಂದ್ರರೆಡ್ಡಿ ದುಗನೂರ, ಮುಖ್ಯಶಿಕ್ಷಕ ನಾಗೇಂದ್ರಪ್ಪ ಕಾಶಿ, ಅಡತ್ ಬಜಾರ ಎಸ್‌ಡಿಎಂಸಿ ಅಧ್ಯಕ್ಷ ರಾಮು ಹರವಾಳ, ಉದ್ಯಮಿ ಸತೀಶ ಕಾಂತಾ, ಕರಾಟೆ ತರಬೇತಿದಾರರಾದ ಸಾಬಯ್ಯ ಭೋಸಗಿ, ರಮೇಶ ಭೋಸಗಿ, ಮಾರುತಿ ಭೋಸಗಿ, ಚಂದ್ರಕಾಂತ ಟಲಾಕುಂಟಿ, ಸಂಜುಕುಮಾರ ಚೌದ್ರಿ, ರಾಘವೇಂದ್ರ ಭಜಂತ್ರಿ, ಗಂಗಾಧರ ಹೊಟ್ಟಿ ಹಾಗೂ ಚಿತ್ತಾಪುರ, ದಿಗ್ಗಾಂವ, ಅಳ್ಳೋಳ್ಳಿ, ಡೋಣಗಾಂವ, ಅಲ್ಲೂರ ಬಿ., ಭೀಮನಳ್ಳಿ, ಯಾಗಾಪುರ, ಭಾಗೋಡಿ, ವಾಡಿ ಪ್ರೌಢಶಾಲೆಗಳ ವಿದ್ಯಾರ್ಥಿನಿಯರು, ಶಿಕ್ಷಕರು ಭಾಗವಹಿಸಿದ್ದರು.
ಕರಾಟೆ ಮುಖ್ಯ ತರಬೇತುದಾರ ವಿಜಯಕುಮಾರ ಹರವಾಳ ಪ್ರಾಸ್ತಾವಿಕ ಮಾತನಾಡಿದರು. ಸಿದ್ರಾಮ ಭೋವಿ ಸ್ವಾಗತಿಸಿದರು, ಅಯ್ಯಣ್ಣ ಅಲ್ಲಂ ನಿರೂಪಿಸಿದರು. ಬಸವರಾಜ ಯಂಬತ್ನಾಳ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.