ಶರಣರಲ್ಲಿ ಕಾಯಕಯೋಗಿ ಸಿದ್ಧರಾಮೇಶ್ವರರು ಅಗ್ರಗಣ್ಯ
Team Udayavani, Feb 12, 2018, 11:17 AM IST
ಶಹಾಬಾದ: ಹನ್ನೇರಡನೇ ಶತಮಾನದಲ್ಲಿ ಒಂದು ದೊಡ್ಡ ಕ್ರಾಂತಿ ನಡೆಯಿತು. ಅದು ವೈಚಾರಿಕ ಕ್ರಾಂತಿ. ಸಮಾಜದಲ್ಲಿ ಸಮಾನತೆ ತರುವ ಮೊಟ್ಟ ಮೊದಲನೇ ಕ್ರಾಂತಿ. ಅಣ್ಣ ಬಸವಣ್ಣನವರು ಹಾಗೂ ಬಸವಾದಿ ಶರಣರು ಕೈಗೊಂಡ ಕ್ರಾಂತಿಯಲ್ಲಿ ಶರಣರಲ್ಲಿಯೇ ಅಗ್ರಗಣ್ಯರೆನಿಸಿಕೊಂಡವರು ಕಾಯಕಯೋಗಿ ಸಿದ್ಧರಾಮೇಶ್ವರರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ಭೋವಿ ವಡ್ಡರ ಸಮಾಜ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾಯಕಯೋಗಿ ಸಿದ್ಧರಾಮೇಶ್ವರರ 846ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಯಾಣದಲ್ಲಿ ನಡೆದ ಕ್ರಾಂತಿಯಲ್ಲಿ ಸಿದ್ಧರಾಮೇಶ್ವರರ ಪಾತ್ರ ಹಿರಿದಾದದ್ದು. ಹನ್ನೆರಡನೇ ಬಸವಾದಿ ಶರಣರ ತತ್ವ ವಚನ ಸಾಹಿತ್ಯಕ್ಕೆ ಸಮಾಜದಲ್ಲಿ ಪರಿವರ್ತನೆ ಮಾಡುವ ಶಕ್ತಿ ಇದೆ. ಯಾರು ಕಾಯಕ, ದಾಸೋಹದಲ್ಲಿ ನಿಷ್ಠೆ ಇಡುತ್ತಾರೆ ಅವರೆಲ್ಲರೂ ಕೂಡ ಶರಣರ ತತ್ವ ಪಾಲಿಸಬಹುದು. ಬಸವಾದಿ ಶರಣರ ವಚನ ಸಾಹಿತ್ಯ ಯಾವುದೋ ಕಾಲ್ಪನಿಕ ಲೋಕದ ಕಲ್ಪನೆಗಳಲ್ಲ. ವಚನ ಸಾಹಿತ್ಯಕ್ಕೆ ತನ್ನದೇ ಆದ ಮೆರುಗು ಇದೆ.ಅದಕ್ಕೆ ಕಾರಣ ಶರಣರು ಬರೆದ ವಚನಗಳು ಅನುಭಾವದ ನುಡಿಗಳು ನುಡಿದಂತೆ ನಡೆದ, ನಡೆದಂತೆ ನುಡಿದ ಮಾತುಗಳೇ ಇವತ್ತು ವಾಕ್ಯಗಳಾಗಿವೆ. ಭೋವಿ ವಡ್ಡರ ಸಮಾಜ ಸಂಪೂರ್ಣ ಕಾಯಕದಲ್ಲಿ ನಿಷ್ಠೆ ಹೊಂದಿರುವವರು. ರಟ್ಟೆ ಮೇಲೆ ಬದುಕು ಸಾಗಿಸುವವರು. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾಭಿಮಾನವಾಗಿ ಬದುಕುವಂತೆ ಮಾಡಬೇಕು. ಗಳಿಸಿದ ಹಣವನ್ನು ದುಶ್ಚಟಗಳಿಗೆ ಹಾಕದೇ ಮಕ್ಕಳ ಮತ್ತು ಕುಟುಂಬದ ಏಳಿಗೆಗೆ ಬಳಸಿ ಎಂದು ಹೇಳಿದರು.
ಭೋವಿ ಗುರು ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಭೋವಿ ವಡ್ಡರ ಸಮಾಜದವರು ದುಡಿಯುವ
ವರ್ಗವದರು. ಸಮಾಜ ಹಿಂದುಳಿಯಲು ಶಿಕ್ಷಣ ಹಾಗೂ ಸಂಸ್ಕಾರವೇ ಕಾರಣ.ಅದಕ್ಕಾಗಿ ಗಂಡು-ಹೆಣ್ಣು ಎನ್ನದೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯವಿದೆ ಎಂದು ಹೇಳಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿದರು. ಭೋವಿ ವಡ್ಡರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಅಧ್ಯಕ್ಷತೆ ವಹಿಸಿದ್ದರು.
ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ, ನಗರಸಭೆ ಅಧ್ಯಕ್ಷೆ ಗೀತಾಸಾಹೇಬಗೌಡ ಬೋಗುಂಡಿ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ವೆಂಕಟೇಶ ಕುಸಾಳೆ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ, ಶಾಮ ನಾಟೀಕಾರ, ನಿಂಗಣ್ಣ ಎಸ್. ದೇವಕರ್, ರಾಮು ನಂದೂರ, ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ್, ಜೆಡಿಎಸ್ ಅಧ್ಯಕ್ಷ ರಾಜ್‌ಮಹ್ಮದ್‌ರಾಜಾ, ಮಲ್ಲಿಕಾರ್ಜುನ ಕುಸ್ತಿ, ಭೀಮಾಶಂಕರ ದಂಡಗುಲಕರ್, ಫುಲಾಬಾಯಿ ಅಡಿವೆಪ್ಪ, ರಾಜು ಮೇಸ್ತ್ರಿ ಇದ್ದರು. ಹಣಮಂತ ಪವಾರ ಸ್ವಾಗತಿಸಿದರು. ದೇವದಾಸ ಜಾಧವ ನಿರೂಪಿಸಿದರು.ಮಹಾಂತೇಶ ದೊಡ್ಡಮನಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.