ಹೈ-ಕಕ್ಕೆ ಖರ್ಗೆ ಮುಂಚೂಣಿ ನಾಯಕ
Team Udayavani, Mar 31, 2017, 3:15 PM IST
ಸೇಡಂ: ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೈದ್ರಾಬಾದ ಕರ್ನಾಟಕ ಭಾಗದ ಮುಂಚೂಣಿ ನಾಯಕರಿದ್ದಂತೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. ತಹಶೀಲ್ದಾರ ಕಚೇರಿ ಬಳಿ 20 ಕೋಟಿ ರೂ. ವೆಚ್ಚದ ಮಿನಿ ವಿಧಾನಸೌಧ ಕಟ್ಟಡ, 2 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಸೇಡಂ ಇತಿಹಾಸದಲ್ಲೇ ನಡೆಯದಂತೆ ಕಾಮಗಾರಿಗಳು ಭರದಿಂದ ಸಾಗಿವೆ. ಬಿಸಿಎಂ ವಸತಿ ನಿಲಯ, ಪುರಸಭೆ ಶಾಪಿಂಗ್ ಮಳಿಗೆಗಳ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿವೆ. 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಮಿನಿ ವಿಧಾನಸೌಧ ಸಾರ್ವಜನಿಕರ ಎಲ್ಲ ಅನುಕೂಲತೆ ಪೂರೈಸುವ ಕೇಂದ್ರಬಿಂದುವಾಗಲಿದೆ ಎಂದರು.
371 (ಜೆ)ನೇ ಕಲಂ ಮೀಸಲಾತಿಯಡಿ ಹೈಕ ಭಾಗದ ವೈದ್ಯಕೀಯ ವಿದ್ಯಾರ್ಥಿಗಳಿಗೆ 750 ಸೀಟು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 6000 ಸೀಟು ಲಭಿಸಲಿದೆ. ಸಂಸದ ಡಾ|ಮಲ್ಲಿಕಾರ್ಜುನ ಖರ್ಗೆ ಹೈಕ ಭಾಗಕ್ಕೆ ತೋರಿಸಿರುವ ಬದ್ಧತೆಯಿಂದಲೇ ಇಷ್ಟೊಂದು ಕೆಲಸಗಳು ಆಗುತ್ತಿವೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಎಚ್.ಕೆ.ಆರ್.ಡಿ.ಬಿ.ಯಡಿ ಪ್ರತಿ ಹಳ್ಳಿ, ತಾಂಡಾಗಳಿಗೆ ರಸ್ತೆ ಕಲ್ಪಿಸಲಾಗುವುದು. ಈಗಾಗಲೇ ಸೇಡಂನಿಂದ ತೆಲಂಗಾಣ ಗಡಿ ವರೆಗೆ ನಾಲ್ಕು ಪಥದ ರಸ್ತೆ ನಿರ್ಮಿಸುವ ಕಾಮಗಾರಿ ಮಂಜೂರಾಗಿದೆ. ರಾಜ್ಯದಲ್ಲೇ ಪ್ರಥಮ ದ್ವಿತೀಯ ಹಂತದ 1000 ಕೋಟಿ ರೂ. ವೆಚ್ಚದ ರಿಂಗ್ ರಸ್ತೆ ಕಲಬುರಗಿಗೆ ಮಂಜೂರಾಗಿದೆ.
ಸೇಡಂ ತಾಲೂಕಿನ 56 ಹಳ್ಳಿಗಳಿಗೆ ಸ್ಮಶಾನ ಭೂಮಿ ದೊರೆಯಲಿದೆ ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಮಾತನಾಡಿದರು. ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವಾಲಯಕ್ಕೆ ಎರಡು ಎಕರೆ ಜಮೀನು ನೀಡಿದ ರೈತ ರಾಮಲು ಭೀಮಪ್ಪ ಅವರಿಗೆ 14.70 ಲಕ್ಷ ರೂ. ಚೆಕ್ ವಿತರಿಸಲಾಯಿತು.
ಮಾಜಿ ಶಾಸಕ ನಾಗರೆಡ್ಡಿ ಪಾಟೀಲ, ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗಳ್ಳಿ, ಮುಖಂಡ ಶ್ರೀನಿವಾಸ ದೇಶಪಾಂಡೆ, ವೆಂಕಟರೆಡ್ಡಿ, ವಿಶ್ವನಾಥ ಪಾಟೀಲ, ಈರಪ್ಪ ಗುಂಡಗುರ್ತಿ, ಅಬ್ದುಲ್ ಗಫೂರ್, ಸುದರ್ಶನರೆಡ್ಡಿ ಪಾಟೀಲ, ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಚವ್ಹಾಣ, ತಾಪಂ ಅಧ್ಯಕ್ಷೆ ಸುರೇಖಾ ಪುರಾಣಿಕ, ಇಇ ಕುಲಕರ್ಣಿ, ಮುರಳೀಧರ, ಪುರಸಭೆ ಸದಸ್ಯ ದತ್ತು ಪಾಟೀಲ ಇದ್ದರು. ಲೊಕೋಪಯೋಗಿ ಇಲಾಖೆಯ ಪಲ್ಲಾ ಲಕ್ಷ್ಮೀಕಾಂತರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುದುರೇನ ನಿರೂಪಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಯ್ಯ ಸ್ವಾಮಿ ಸ್ವಾಗತಿಸಿ, ವಂದಿಸಿದರು. ಎಪಿಎಂಸಿ ಸದಸ್ಯ ರಾಮಯ್ಯ ಪೂಜಾರಿ, ಗಣಪತರಾವ ಚಿಮ್ಮನಚೋಡ್ಕರ್, ಜಿಂಜಾನಿ ಜಾಗಿರದಾರ, ವೆಂಕಟರಾಮರೆಡ್ಡಿ ಮದಕಲ್, ಶಂಭುರೆಡ್ಡಿ ಮದ್ನಿ, ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಮಣಿಸಿಂಗ ಚವ್ಹಾಣ, ಬಸವರಾಜ ಕಾಳಗಿ, ಹಣಮಂತ ಭರತನೂರ್, ಅನೀಲ ಹಳಿಮನಿ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.