ಜ್ಞಾನ-ವಿಜ್ಞಾನ ಬಳಕೆಯಲ್ಲಿ ಜಾಗೃತಿ ಅವಶ್ಯ
Team Udayavani, Mar 29, 2018, 1:11 PM IST
ಕಲಬುರಗಿ: ನವೀನ ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವೆಬ್ ದುನಿಯಾ ಕೆಲಸ ಮಾಡುತ್ತಿದೆ. ಜೀವನದ ಎಲ್ಲಾ ಕ್ಷೇತ್ರಗಳೊಂದಿಗೆ ಸಾರ್ವತ್ರಿಕ ಶಿಕ್ಷಣದಲ್ಲಿ ಹೆಚ್ಚು ಪಾತ್ರವಹಿಸುತ್ತಿದೆ. ಆದ್ದರಿಂದ ಈ ಕುರಿತು ಇಂದಿನ ಹಾಗೂ ಮುಂದಿನ ಪೀಳಿಗೆ ಹೆಚ್ಚು ತಿಳಿದುಕೊಳ್ಳುವುದು ಉತ್ತಮ ಎಂದು ಪತ್ರಕರ್ತ ಸಂಗಮನಾಥ ರೇವತಗಾಂವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಅನುಭವ ಮಂಟಪದಲ್ಲಿ ಹಿಂದಿ ಸ್ನಾತಕೋತ್ತರ ಅಧ್ಯಯನ ಮತ್ತು ಅನುಸಂಧಾನ ವಿಭಾಗ ಹಾಗೂ ನಾಟ್‌ನಲ್ ಇಪ್ಲಾಟ್‌ಫಾರಂ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಹಿಂದಿ ಔರ್ ವೆಬ್‌ದುನಿಯಾ ವಿಷಯದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜ್ಞಾನ ಮತ್ತು ವಿಜ್ಞಾನ ಪ್ರತಿರೂಪವಾದ ಮತ್ತು ಮನುಷ್ಯ ಸಮಾಜದ ಅವಿಸ್ಮರಣೀಯ ಕ್ರಾಂತಿಯಾಗಿದೆ. ಇದರ ಬಳಕೆ ಮತ್ತು ಉಪಯೋಗದ ಹಿನ್ನೆಲೆಯಲ್ಲಿ ಯುವ ಜನತೆಯಲ್ಲಿ ಅತೀ ಹೆಚ್ಚು ಜಾಗೃತಿಯ ಅವಶ್ಯಕತೆಯೂ ಇದೆ ಎಂದು ಪ್ರತಿಪಾದಿಸಿದರು. ಮಾಧ್ಯಮಗಳು ಇಂದು ತಮ್ಮ ಜವಾಬ್ದಾರಿ ನಿಭಾಯಿಸುವ ನಿಟ್ಟಿನಲ್ಲಿ ಕೆಲವು ಅಪವಾದಗಳನ್ನು ಎದುರಿಸುತ್ತಿವೆ. ಅದರ ಸತ್ಯಾಸತ್ಯತೆ ಓದುಗರೇ ನಿರ್ಧಾರ ಮಾಡುತ್ತಾರೆ ಎಂದರು.
ಇದಕ್ಕೂ ಮುನ್ನ ಉದ್ಘಾಟನೆ ಮಾಡಿದ ಗುವಿವಿ ಕಂಪ್ಯೂಟರ್ ಅಧ್ಯಯನ ವಿಭಾಗದ ಅಧ್ಯಕ್ಷ ಶಿವಾನಂದ ರುಮ್ಮಾ ಮಾತನಾಡಿ, ಕಂಪ್ಯೂಟರ್ ಭಾಷಾ ಬೆಳೆವಣಿಗೆಗೆ ಯೂನಿಕ್ ಕೋಡ್ ತಂತ್ರಾಂಶ ಅಳವಡಿಸುವುದು ಅಗತ್ಯವಾಗಿದೆ. ಯೂನಿಕ್ ಕೋಡ್ ತಂತ್ರಾಂಶ ನಿರ್ಮಾಣದಿಂದ ಕಂಪ್ಯೂಟರ್ ಭಾಷೆ ಯಶಸ್ವಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಯೂನಿಕ್ ಕೋಡ್ ತಂತ್ರಾಂಶ ಅಳವಡಿಸುವಲ್ಲಿ ಪ್ರಮುಖ ಕಂಪನಿಗಳು ಸರ್ಕಾರಕ್ಕೆ ಒತ್ತಡ ಹಾಕಬೇಕು. ಇದರಿಂದ ಪ್ರಾದೇಶಿಕ ಭಾಷೆಗಳ ಪ್ರಗತಿ ಸಾಧ್ಯ. ಕಂಪ್ಯೂಟರ್ ಯುಗದಲ್ಲಿ ಭಾಷೆ ಜೀವಂತಿಕೆಗೆ ರಾಜಾಶ್ರಯ ಬೇಕು. ತಾಂತ್ರಿಕ ಹಿನ್ನೆಲೆಯ ವಾತಾವರಣ ನಿರ್ಮಾಣ ಮಾಡುವ ಅಧಿಕಾರಿಗಳ ಶ್ರಮ ಬೇಕು. ಇ-ಪೇಪರ್ ಬಳಸಬೇಕು. ಮಾತೃಭಾಷೆ ಬೆಳೆವಣಿಗೆಗೆ ತಂತ್ರಜ್ಞಾನಗಳ ಅಸ್ತಿತ್ವ ಬೇಕು. ಚಿಂತನ-ಮಂಥನದಿಂದ ಭಾಷೆಗಳನ್ನು ಸಮಾಜದಲ್ಲಿ ಕೊಂಡಯ್ಯಬೇಕಾಗಿದೆ ಎಂದರು.
ಅತಿಥಿಯಾಗಿದ್ದ ಗುವಿವಿ ಕೇಂದ್ರೀಯ ಗ್ರಂಥಾಲಯ ಉಪ ಗ್ರಂಥಪಾಲಕ ಡಾ| ಸುರೇಶ ಜಂಗೆ ಮಾತನಾಡಿ, ವೆಬ್‌ದುನಿಯಾ ಲೋಕವೇ ವಿಸ್ಮಯವಾಗಿದೆ. ರಾಷ್ಟ್ರೀಯ ಭಾಷೆ ಹಿಂದಿಯು ವೆಬ್‌ದುನಿಯಾ ಕ್ಷೇತ್ರದಲ್ಲಿ ಸಮನ್ವಯತೆ ಸಾಧಿಸಿದೆ. ಮುದ್ರಣ ಕ್ಷೇತ್ರಕ್ಕಿಂತ ವಿದ್ಯುನ್ಮಾನ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಹಿಂದಿ ಭಾಷೆ ಯೋಗ್ಯ ಭಾಷೆಯಾಗಿದ್ದು, ಆ ಬಗ್ಗೆ ಯಾವ ನಕಾರಾತ್ಮಕ ನಿಲುವು ಸಲ್ಲ ಎಂದರು.
ಗುವಿಗು ಕಲಾ ನಿಕಾಯದ ಡೀನ್ ಪ್ರೋ.ಪರಿಮಳಾ ಅಂಬೇಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಪರಿಮಳಾ ಅಂಬೇಕರ್ ಅನುವಾದಿಸಿದ ಕನಕದಾಸ ಕಾವ್ಯ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ನಾಟ್‌ನಲ್ ಸಹ ಸಂಸ್ಥಾಪಕ ನಿಲಾಭ ಶ್ರೀವಾತ್ಸವ, ಗರಿಮಾ ಸಿನ್ಹಾ ವೇದಿಕೆ ಮೇಲಿದ್ದರು. ಆರಂಭದಲ್ಲಿ ಕವಿತಾ ಮಠಪತಿ ಪ್ರಾರ್ಥನೆ ಹಾಡಿದರು.
ಉಪನ್ಯಾಸಕಿ ಪಂಚಶಿಲಾ ಗೋಖಲೆ ಸ್ವಾಗತಿಸಿದರು. ಅನುರಾಧಾ ಕುಲಕರ್ಣಿ ನಿರೂಪಿಸಿದರು. ಡಾ| ಜ್ಞಾನಬೋ ಗಾದಗೆ ವಂದಿಸಿದರು. ನಂತರ ನಡೆದ ಗೋಷ್ಠಿಗಳಲ್ಲಿ ಗುವಿಗು ಕೇಂದ್ರಿಯ ಗ್ರಂಥಾಲಯ ಉಪಗ್ರಂಥಪಾಲಕ ಡಾ| ಪ್ರವೀಣಕುಮಾರ ಕುಂಬಾರ, ಉಪಗ್ರಂಥಪಾಲಕ ಡಾ| ಖೇಮಣ್ಣ ಅಲ್ದಿ ಮುಂತಾದವರು ಉಪನ್ಯಾಸ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.