ಮೋದಿಯವರೇ ರಾಜ್ಯದಲ್ಲಿ 200-300 ಪರ್ಸೆಂಟ್ ಸರ್ಕಾರ ಇದೆ: ಡಿಕೆ ಶಿವಕುಮಾರ್ ವಾಗ್ದಾಳಿ

ರಾಜ್ಯದ ಜನತೆ ಸೋಂಕು ಅಂಟಿಸಿದ್ದೇ ಸರ್ಕಾರ, ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ಅಂಟಿದೆ‌!

Team Udayavani, Aug 4, 2020, 3:42 PM IST

ಮೊದಿಯವರೇ ರಾಜ್ಯದಲ್ಲಿ 200-300 ಪರ್ಸೆಂಟ್ ಸರ್ಕಾರ ಇದೆ: ಡಿಕೆ ಶಿವಕುಮಾರ್ ವಾಗ್ದಾಳಿ

ಕಲಬುರಗಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು‌ ನಮ್ಮ ಸರ್ಕಾರವನ್ನು ಹತ್ತು ಪರ್ಸೆಂಟ್ ಸರ್ಕಾರ ಎಂದು ಕರೆದಿದ್ದರು. ಈಗ ಎಷ್ಟು ಪರ್ಸೆಂಟ್ ಸರ್ಕಾರ ಇದೆ ಗೊತ್ತಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಉಪಕರಣ ಖರೀದಿಯಲ್ಲಿ ಕೋಟ್ಯಾಂತರ ರೂ. ಹಗರಣ ನಡೆದಿದೆ. ಸರ್ಕಾರದಲ್ಲಿ ಇನ್ನೂರು, ಮುನ್ನೂರು ಪರ್ಸೆಂಟ್ ನಡೆಯುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಖರೀದಿಸಿದ‌‌ ಉಪಕರಣಗಳ ಬೆಲೆ ಮತ್ತು ರಾಜ್ಯ ಸರ್ಕಾರ ಖರೀಸಿದ ಉಪಕರಣಗಳ ಬೆಲೆಯೇ ಸಾಕ್ಷಿ.‌ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ನಿಮಗೆ ಎಂದು ಟೀಕಾ ಪ್ರಹಾರ ಮಾಡಿದರು.

ರಾಜ್ಯದಲ್ಲಿ ಕೋವಿಡ್ ಹೆಸರಲ್ಲಿ 4,500 ಕೋಟಿ ಖರ್ಚು ಮಾಡಲಾಗಿದೆ. ಅದರಲ್ಲಿ ಅರ್ಧದಷ್ಟು ಹಣ ಲೂಟಿ ಹೊಡೆಯುವ ಕೆಲಸ ಮಾಡಿದ್ದಾರೆ. ತಮಿಳುನಾಡು ಸರ್ಕಾರ ತಲಾ ಒಂದು ವೆಂಟಿಲೇಟರ್ ಗೆ 4.78 ಲಕ್ಷ ನೀಡಿ ಖರೀದಿಸಿದೆ. ಕೇಂದ್ರ ಸರ್ಕಾರ ಒಂದು ವೆಂಟಿಲೇಟರ್ 4 ಲಕ್ಷ ರೂ.ಗೆ ಖರೀದಿ ಮಾಡಿದೆ. ಆದರೆ, ರಾಜ್ಯವಸರ್ಕಾರ ಒಂದೇ ವೆಂಟಿಲೇಟರ್ ಗೆ 18.20 ಲಕ್ಷ ಕೊಟ್ಟು ಖರೀದಿ ಮಾಡಿದೆ. ಅವ್ಯವಹಾರದಲ್ಲಿ ತೊಡಗಿರುವ ಸರ್ಕಾರಕ್ಕೆ ನಾವು ಸಹಕಾರ‌ ನೀಡಬೇಕಾ ಎಂದು ಕಿಡಿಕಾರಿದರು.

ಮಹಾಭಾರತ ಯುದ್ಧದ 18 ದಿನಗಳ ಕಾಲ ನಡೆದಿದೆ.‌ ಕೋವಿಡ್ ಯುದ್ಧವನ್ನು 21 ದಿನದಲ್ಲಿ ಗೆಲ್ಲೋಣ ಎಂದು ಮೋದಿಯವರು ಹೇಳಿದರು. ನಾವು, ದೇಶದ ಜನತೆ ಎಲ್ಲರೂ ಬೆಂಬಲ ಕೊಟ್ಟರು. ಲಾಕ್ ಡೌನ್, ಸೀಲ್ ಡೌನ್ ಎಲ್ಲಾ ಮುಗಿದು 120 ದಿನ ಕಳೆದರೂ ಏನೂ ಬದಲಾಗಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ; ವಿಪಕ್ಷ ನಾಯಕ ಸಿದ್ದರಾಯಯ್ಯ ಗೆ ಕೋವಿಡ್ ಸೋಂಕು ದೃಢ: ಆಸ್ಪತ್ರೆಗೆ ದಾಖಲು

ಸರ್ಕಾರ ಹೇಳಿದಂತೆ ನಾವೂ ಸಹಕಾರ ನೀಡಿದೇವು. ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದೇವು. ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಸೇರಿ ಕೊವೀಡ್ ನಿರ್ವಹಣೆಗೆ ಸಲಹೆ ನೀಡಿದ್ದೇವೆ. ದೇಶದಲ್ಲೇ ರಾಜ್ಯದಲ್ಲಿ ಉತ್ತಮ ಮೆಡಿಕಲ್ ಕಾಲೇಜ್ ಗಳು, ಆಸ್ಪತ್ರೆಗಳಿವೆ. ಅವರನೆಲ್ಲ ಕರೆದು ಮಾತನಾಡಿ ಎಂದು ಸಲಹೆ ಕೊಟ್ಟೇವು. ಆದರೂ, ನೀವು ಮಾತನಾಡಲಿಲ್ಲ. ಅವರೆಲ್ಲ ಬಂದರೆ ಸಚಿವರು ತಮಗೆ ಸಿಗಬಹುದಾದದ್ದು ಸಿಗಲ್ಲ ಅಂತಾ ಭಾವಿಸಿದರು ಎಂದು ದೂರಿದರು.

ರಾಜ್ಯದ ಜನತೆ ಸೋಂಕು ಅಂಟಿಸಿದ್ದೇ ಸರ್ಕಾರ. ಆದರೆ, ಯಾವ ಸಚಿವರು ಸೋಂಕಿತರನ್ನೂ ಭೇಟಿ ಮಾಡಲಿಲ್ಲ. ಯಾಕೆ ನೀವು ಹೋಗಿ ಅವರನ್ನು ಭೇಟಿ ಮಾಡಿ ಧೈರ್ಯ ಹೇಳಿದರೆ ನಿಮಗೆ ಸೋಂಕು ತಗುಲುತ್ತಾ? ಸೋಂಕಿತರು ತೀರಿದಾಗ ಅವಮಾನಕರವಾಗಿ ಹೂಳಲಾಯಿತು. ನಿಮ್ಮ ತಂದೆ-ತಾಯಿ ಅಥವಾ ನಿಮ್ಮ‌ ಸಂಬಂಧಿಕರಾಗಿದರೆ ಹೀಗೆ ಮಾಡ್ತಾ ಇದ್ರಾ? ಮೂವತ್ತಕ್ಕು ಅಧಿಕ ಪೌರ ಕಾರ್ಮಿಕರು ಸೋಂಕಿನಿಂದ ಮೃತಪಟ್ಟಿದ್ದಾರೆ. ಆ ನಿರ್ಗತಿಕರಿಗೆ ಯಾರು‌ ದಿಕ್ಕು ಎಂದು ಡಿಕೆಶಿ ಹರಿಹಾಯ್ದರು.

ಇದನ್ನೂ ಓದಿ; ಲಾಕ್ ಡೌನ್ ವಾಪಸ್ ಪಡೆಯುವ ಅವಶ್ಯಕತೆ ಇರಲಿಲ್ಲ:  ರಾಮಲಿಂಗ ರೆಡ್ಡಿ

ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ಅಂಟಿದೆ‌. ಇದನ್ನೆಲ್ಲ ಪ್ರಶ್ನೆ ಮಾಡಿದರೆ ನನಗೆ, ಸಿದ್ದರಾಮಯ್ಯನವರಿಗೆ ನೋಟಿಸ್ ಕೊಡುತ್ತೀರಾ? ಎಂಥಾ ನೋಟಿಸ್’ಗಳಿಗೆ ನಾವು ಹೆದರಿಲ್ಲ. ನಿಮ್ಮ ನೋಟಿಸ್ ಗೆ ಹೆದರುತ್ತೀವಾ? ನಿಮ್ಮ ನೂರು ನೋಟಿಸ್ ಎದುರಿಸುವ ತಾಕತ್ತು ಜನ ನಮಗೆ ನೀಡಿದ್ದಾರೆ. ನೋಟಿಸ್ ಕೊಟ್ಟು ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು 24 ಗಂಟೆಗಳಲ್ಲಿ ದಾಖಲೆ ಕೊಡುವುದಾಗಿ ಹೇಳಿದ್ದರು. ಇಷ್ಟು ದಿನವಾದರೂ ಎಲ್ಲಿದೆ ದಾಖಲೆ?‌ ಹಗರಣದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಪಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ.ಅಜಯ್ ಸಿಂಗ್, ಖನೀಜ್ ಫಾತೀಮಾ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

Amith-sha

Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್‌ ಶಾ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyank

Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ

2-kalburgi

Kalaburagi: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ

Waqf

Kalaburagi: ಆಳಂದದ ಬೀರದೇವರ ಆಸ್ತಿ ಪಹಣಿಯಲ್ಲಿ “ವಕ್ಫ್’ ರದ್ದು

Sedam-yathre

Waqf: ಮಠದ ಜಾಗದ ಪಹಣಿಯಲ್ಲಿ ವಕ್ಫ್‌ ನಮೂದು; ಸ್ವಾಮೀಜಿ ಪಾದಯಾತ್ರೆ ಬಳಿಕ ಹೆಸರು ಮಾಯ!

8-

Kalaburagi: ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Untitled-5

Puttur: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

1

Mangalore: ವಂಚನೆ ಪ್ರಕರಣದಲ್ಲಿ ಭಾಗಿ ಆರೋಪಿಸಿ 30.65 ಲಕ್ಷ ರೂ. ಹಣ ವರ್ಗಾಯಿಸಿ ವಂಚನೆ

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

death

Belthangady: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.