![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 3, 2021, 12:00 PM IST
ಆಳಂದ: ತಾಲೂಕಿನ ಹೋಬಳಿ ಕೇಂದ್ರ ನಿಂಬರಗಾ ಗ್ರಾಮದಲ್ಲಿ ಕುಡಕಿ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಕುಡಕಿ ಗ್ರಾಮಸುಧಾರಣ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸಮಿತಿಯ ಮುಖಂಡರು ಮತ್ತು ಗ್ರಾಮಸ್ಥರು ಸೇರಿ ಮಂಗಳವಾರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಕುಡಕಿ ಗ್ರಾಮವೂ ತಾಲೂಕಿನ ಗಡಿ ಗ್ರಾಮವಾಗಿದ್ದರಿಂದ ಹಲವು ದಶಕಗಳಿಂದಲೂ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಮತ್ತು ಸಾರಿಗೆ ಬಸ್ ಸೌಲಭ್ಯದ ಸಮಸ್ಯೆ ನಿವಾರಣೆ ಆಗುತ್ತಿಲ್ಲ.ಈ ಕುರಿತು ಹಲವು ಬಾರಿ ಸಂಬಂಧಿ ತ ಅಧಿಕಾರಿಗಳಿಗೆಮತ್ತು ಜನ ಪ್ರತಿನಿ ಧಿಗಳ ಗಮನಕ್ಕೆ ತರಲಾಗಿದೆ. ಆದರೂ ಗ್ರಾಮಸ್ಥರ ಬೇಡಿಕೆಗೆ ಸ್ಪಂದನೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಸುಧಾರಣ ಸಮಿತಿ ಗೌರವ ಅಧ್ಯಕ್ಷನರಸಿಂಗರಾವ್ ಮಾಲಿಪಾಟೀಲ, ಅಧ್ಯಕ್ಷ ಹಣಮಂತರಾವ್ ಎಲ್. ಹಳಕುಂದೆ, ಉಪಾಧ್ಯಕ್ಷ ದತ್ತಾತ್ರೆಯ ಆರ್. ಕುಡಕಿ, ಶಿವಣ್ಣ ಬುರಾಣಪೂರ, ಹಳ್ಳೆಪ್ಪ ತಳವಾರ, ಶಿವಯ್ಯ ಸ್ವಾಮಿ, ಶರಣಬಸಪ್ಪ
ಮಾಲಿಪಾಟೀಲ, ಬೆಂಬಲವಾಗಿ ನಿಂಬರಗಾದ ವಿಠ‍್ಠಲ ಕೋಣೆಕರ್, ಸೂರ್ಯಕಾಂತ ಚಿಂಚನಸೂರ, ವೀರಣ್ಣಾ ನಾಗಶೆಟ್ಟಿ, ಶ್ರೀಮಂತ ವಾಗªರಿ, ಗುರಣ್ಣಾ ಕಾಮನಗೊಳ,ರಾಜಶೇಖರ ಕರಣಾಕರ್, ಶರಣಬಸಪ್ಪ ನಿರ್ಮೂಲಕರ್, ಪ್ರಕಾಶ ಸರ್ವೋದಯ, ಚಂದ್ರಶಾ ತಳವಾರ, ದೇವಿಂದ್ರ ಬೆಳ್ಳೆ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.ಸ್ಥಳಕ್ಕೆ ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ ಅವರು ಆಗಮಿಸಿ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸಲು ಸಂಬಂಧಿತ ಇಲಾಖೆಗೆ ಸೂಚಿಸಲಾಗುವುದು. ಕುಡಕಿ ರೈಲು ನಿಲ್ದಾಣವರೆಗೆ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಎನ್‌ಇಕೆಆರ್‌ಟಿಸಿ ಅಧಿಕಾರಿಗಳು ಮನವಿ ಸ್ವೀಕರಿಸಿ ತಿಂಗಳ ಕಾಲಾವಕಾಶದೊಳಗೆ ಕಾಯಂ ಮುಖಾಂ ಬಸ್ ಸೌಲಭ್ಯ ಒದಗಿಸಲಾಗುವುದು. ಆಳಂದನಿಂದ ಕುಡಕಿಬಸ್ ಸಂಚಾರಕ್ಕೆ 15 ದಿನಗಳಲ್ಲಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಪಿಡಬ್ಲೂಡಿ ಎಇಇ ಅರುಣಕುಮಾರ ಬಿರಾದಾರ, ಗ್ರಾಮೀಣ ನೀರು ಸರಬರಾಜು ಇಲಾಖೆ ಎಂಜಿನಿಯರ್ ಹಾಜರಿದ್ದು ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಪಿಎಸ್‌ಐ ಸುವರ್ಣ ಮಲಶೆಟ್ಟಿ ಬಂದೋಬಸ್ತ್ ಒದಗಿಸಿದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.