![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Dec 30, 2021, 8:17 PM IST
ಕಲಬುರಗಿ: ರಾಷ್ಟ್ರಕವಿ ಕುವೆಂಪು ತಮ್ಮ ಸಾಹಿತ್ಯದ ಮೂಲಕ ಕನ್ನಡ, ವೈಜ್ಞಾನಿಕ, ವೈಚಾರಿಕ, ಭಾವೈಕ್ಯ, ಮನುಜಮತ, ವಿಶ್ವಪಥ, ವಿಶ್ವಮಾನವ ಪ್ರಜ್ಞೆ ಮೂಡಿಸಿದವರು. ಆದ್ದರಿಂದ ಅವರು ಜಗದ ಕವಿ, ಯುಗದ ಕವಿ ಎಂದು ಹಿರಿಯ ಸಾಹಿತಿ ಡಾ| ಚಿ.ಸಿ.ನಿಂಗಣ್ಣ ಬಣ್ಣಿಸಿದರು.
ನಗರದ ಆರಾಧನಾ ಮಹಾವಿದ್ಯಾಲಯದಲ್ಲಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ) ಹಮ್ಮಿಕೊಂಡಿದ್ದ ವಿಶ್ವಮಾನವ ಕುವೆಂಪು ಹಾಗೂ ಗಾನಗಂಧರ್ವ ಸಿ.ಅಶ್ವತ್ಥ್ ಜನ್ಮದಿನದ ಅಂಗವಾಗಿ ಕುವೆಂಪು ಬದುಕು-ಬರಹ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆದಿಕವಿ ಪಂಪ ನುಡಿದ ಮನುಜ ಕುಲಂ ತಾನೊಂದೆ ವಲಂ ಎಂಬು ದನ್ನು ತಮ್ಮ ಬದುಕಿನ ಧ್ಯೇಯ ವಾಕ್ಯ ವನ್ನಾಗಿಸಿಕೊಂಡು ಅದರಂತೆಯೇ ಬದುಕಿದವರು ಕುವೆಂಪು ಎಂದರು.
ತಮ್ಮ ಸಾಹಿತ್ಯ ಸಾಧನೆಯಿಂದ ಹಲವು ಮೊದಲುಗಳಿಗೆ ಭಾಜನರಾದ ಕುವೆಂಪು ಅವರು, ತಮ್ಮ “ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಮೂಲಕ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಹತ್ತು ಪ್ರಶಸ್ತಿಗಳನ್ನು ಮೊಟ್ಟ ಮೊದಲಿಗೆ ಕನ್ನಡಕ್ಕೆ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸುಜಾತಾ ಜಂಗಮಶೆಟ್ಟಿ, ಡಾ| ಸಂಗಮೇಶ ಹಿರೇಮಠ, ಆನಂದ ಸಿದ್ಧಾಮಣಿ, ಡಾ| ಶಿವಶರಣ ಪಾಟೀಲ ಕೋಡ್ಲಾ, ಡಿ.ಎನ್.ಪಾಟೀಲ ಅವರಿಗೆ ಕುವೆಂಪು ಪ್ರಶಸ್ತಿ ಮತ್ತು ಗಾಯಕರಾದ ಪ್ರಮೋದಿನಿ ಶೀಲವಂತ, ಬಸಯ್ಯ ಗುತ್ತೇದಾರ, ಪ್ರಕಾಶ ಪೂಜಾರಿ, ಜೈಭೀಮ್ ಸಾವಳಗಿ, ಶ್ರವಣಕುಮಾರ ಮಠ ಅವರಿಗೆ ಸಿ.ಅಶ್ವತ್ಥ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ, ಮಾಜಿ ಮೇಯರ್ ಸೈಯದ್ ಅಹ್ಮದ್, ಉದ್ಯಮಿ ಹಣಮಂತ ಹೊಸ್ಮನಿ, ಶಾಲೆಯ ಪ್ರಾಂಶುಪಾಲರಾದ ಚೇತನಕುಮಾರ ಗಾಂಗಜಿ ಮತ್ತಿತರರು ಪಾಲ್ಗೊಂಡಿದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.