ಇಂಗ್ಲಿಷ್ ಹೇರಿಕೆ ಬೇಡ ಎಂದಿದ್ರು ಕುವೆಂಪು
Team Udayavani, Sep 24, 2022, 4:16 PM IST
ಸೇಡಂ: ಇಂಗ್ಲಿಷ್ ಭಾಷೆ ಬಗ್ಗೆ ಆರಂಭದ ದಿನಗಳಲ್ಲಿ ಪ್ರೀತಿ ಹೊಂದಿದ್ದ ಕುವೆಂಪು ಅವರು ತಮ್ಮ 18ನೇ ವಯಸ್ಸಿನಲ್ಲೇ ಇಂಗ್ಲಿಷ್ ಪುಸ್ತಕವೊಂದನ್ನು ಪ್ರಕಟಿಸಿದ್ದರು ಎಂದು ದೊಡ್ಡಪ್ಪ ಅಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ|ಆನಂದ ಸಿದ್ಧಾಮಣಿ ಹೇಳಿದರು.
ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ “ಜ್ಞಾನಪೀಠ ಗಾರುಡಿಗರು’ ಉಪನ್ಯಾಸ ಮಾಲಿಕೆಯಲ್ಲಿ ಕುವೆಂಪು ಕುರಿತು ಅವರು ಉಪನ್ಯಾಸ ನೀಡಿದರು.
ಕುವೆಂಪು ಪ್ರೌಢ ಶಾಲೆ ಹಂತದಲ್ಲಿ ಇರುವಾಗಲೇ ಸಾಹಿತ್ಯದ ಬಗ್ಗೆ ಒಲವು ತೋರಿದ್ದರು. ಆಂಗ್ಲ ಭಾಷೆ ಮೇಲೆ ಅಪಾರ ಪ್ರೀತಿ ಹೊದ್ದಿದ್ದ ಅವರು ತಮ್ಮ ನೆಚ್ಚಿನ ಗುರುಗಳ ಮಾತಿನಿಂದ ಪ್ರೇರೇಪಿತರಾಗಿ ಕನ್ನಡ ಭಾಷೆಯ ಅತಿ ದೊಡ್ಡ ವಿದ್ವಾಂಸರಾಗಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದರು. ರಾಮಕೃಷ್ಣ ಆಶ್ರಮದ ನಂಟು ಹೊಂದಿದ್ದ ಕುವೆಂಪು ಅನೇಕ ಸಾಧು, ಸಂತರ ಜತೆ ತಮ್ಮ ವಿಚಾರಧಾರೆ ಹಂಚಿಕೊಳ್ಳುತ್ತಿದ್ದರು ಎಂದರು.
ಕುವೆಂಪು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದು ವಿಶ್ವ ವಿದ್ಯಾಲಯದ ಸೌಭಾಗ್ಯ. ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಕುವೆಂಪು ಇಂಗ್ಲಿಷ ಭಾಷೆ ದ್ವೇಷಿಸಲಿಲ್ಲ. ಬದಲಿಗೆ ಬಲವಂತವಾಗಿ ಮಕ್ಕಳಿಗೆ ಹೇರಬೇಡಿ ಎಂದು ಪ್ರತಿಪಾದಿಸಿದ್ದರು. ಮಾತೃ ಭಾಷೆ¿ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ. ಮಾತೃ ಭಾಷೆ ಉಳಿದರೆ ಮಾತ್ರ ದೇಶದ ಸಂಸ್ಕೃತಿ ಉಳಿಯುತ್ತದೆ ಎಂದಿದ್ದರು ಎಂದು ಹೇಳಿದರು.
ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ|ಸದಾನಂದ ಬೂದಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಎಲ್ಲ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆಯ ಸಹಕಾರ ಇರುತ್ತದೆ. ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಿಸುವಂತೆ ಮಾಡಬೇಕು ಎಂದು ಹೇಳಿದರು.
ಈ ವೇಳೆ “ಅವ್ವ’ ಪ್ರಶಸ್ತಿ ಪಡೆದ ಸಾಹಿತಿ ಸಿದ್ಧಪ್ಪ ತಳ್ಳಳ್ಳಿ ಅವರನ್ನು ಸತ್ಕರಿಸಲಾಯಿತು. ಕಸಾಪ ಅಧ್ಯಕ್ಷೆ ಸುಮಾ ಚಿಮ್ಮನಚೋಡಕರ್, ಮಾತೃಛಾಯಾ ಕಾಲೇಜಿನ ಪ್ರಾಚಾರ್ಯ ಚನ್ನಬಸ್ಸಪ್ಪ ಗವಿ, ಕಪಾಸ ಗೌರವ ಸಲಹೆಗಾರ ಶರಣಪ್ಪ ಕೊಳ್ಳಿ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಡಾ|ಮುರಳಿಧರ ದೇಶಪಾಂಡೆ, ಉಪನ್ಯಾಸಕ ಜಗದೀಶ ಕಡಬಗಾಂವ, ರಾಮಚಂದ್ರ ಜೋಶಿ, ಶಿವಲೀಲಾ ತೋಟದ, ಬಸಮ್ಮ ಪಾಟೀಲ, ರಮೇಶ ರಾಠೊಡ, ಪ್ರಕಾಶ ಗೊಣಗಿ, ಜನಾರ್ಧನರೆಡ್ಡಿ ತುಳೇರ, ಶಶಿಕಾಂತ ಬೆಡಸೂರ, ಲಕ್ಷ್ಮೀನಾರಾಯಣ ಚಿಮ್ಮನಚೋಡಕರ್, ಸಂದೀಪ ಪ್ಯಾಟಿ, ಶಿವಾರೆಡ್ಡಿ ಗೌಡನಹಳ್ಳಿ, ವೀರಭದ್ರಯ್ಯಸ್ವಾಮಿ, ವಿಶ್ವನಾಥ ಕೋರಿ, ಇನಾಯತ್ ರುದ್ನೂರ ಇನ್ನಿತರರಿದ್ದರು. ವಿರೇಂದ್ರ ಭಂಟನಹಳ್ಳಿ ಪ್ರಾರ್ಥಿಸಿದರು. ಮಾತೃಛಾಯಾ ಕಾಲೇಜಿನ ಪ್ರಾಚಾರ್ಯ ಚನ್ನಬಸಪ್ಪ ಗವಿ ಸ್ವಾಗತಿಸಿದರು, ರಾಚಣ್ಣ ಬಳಗಾರ ನಿರೂಪಿಸಿದರು, ರಾಜು ಚೆನ್ನೀರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.