ಚಂದಾಪುರ ನಿವಾಸಿಗಳಿಗೆ ಶುದ್ಧ ನೀರು ಮರೀಚಿಕೆ

ಪುರಸಭೆಯಿಂದ ನಿರ್ವಹಣೆ ಕೊರತೆ ,ಎಂಟು ವರ್ಷಗಳಿಂದ ಶುದ್ಧೀಕರಿಸದೇ ನೀರು ಪೂರೈಕೆ

Team Udayavani, Oct 28, 2020, 3:41 PM IST

ಚಂದಾಪುರ ನಿವಾಸಿಗಳಿಗೆ ಶುದ್ಧ ನೀರು ಮರೀಚಿಕೆ

ಚಿಂಚೋಳಿ: ಪಟ್ಟಣದ ಚಂದಾಪುರ ನಗರದ ನಿವಾಸಿಗಳಿಗೆ ಶುದ್ಧ ನೀರು ಪೂರೈಕೆ ಮರೀಚಿಕೆಯಾಗಿದೆ.

ಮುಲ್ಲಾಮಾರಿ ನದ ದಂಡೆಯಲ್ಲಿ ಇರುವ ಶುದ್ಧೀಕರಣ ಘಟಕದಿಂದ ನೀರು ಶುದ್ಧೀಕರಣಗೊಳಿಸದೇ ನೇರವಾಗಿ ಹಳ್ಳದ ನೀರನ್ನೇ ಕಳೆದ 8 ವರ್ಷಗಳಿಂದ ಚಂದಾಪುರ ನಗರಕ್ಕೆ ನೀರು ಪೂರೈಸಲಾಗುತ್ತಿದೆ. ಆದರೆ, ಕೆಲವರುಅನಿವಾರ್ಯವಾಗಿ ನೀರು ಸೇವನೆಯಿಂದ ನೆಗಡಿ, ಕೆಮ್ಮು, ಜ್ವರ ಇಂತಹ ಸಣ್ಣ-ಪುಟ್ಟ ಕಾಯಿಲೆಗಳಿಂದ ಜನರು ನರಳುವಂತಾಗಿದೆ. ಪುರಸಭೆ ಅಧೀನಕ್ಕೆ

ಒಳಪಟ್ಟಂತಹ ಶುದ್ಧೀಕರಣ ಘಟಕಕ್ಕೆ ಸೂಕ್ತ ನಿರ್ವಹಣೆ ಕೊರತೆ ಕಾಡುತ್ತಿದೆ. ಕೆಲವೊಮ್ಮೆ ಮೋಟರ್‌ ಸುಟ್ಟರೆ ಚಂದಾಪುರ ನಗರದ ಜನರು ಜಲಕ್ಷಾಮ ಎದುರಿಸಬೇಕಾಗುತ್ತದೆ. ಜನರುಯಾರು ನೀರು ಕುಡಿಯುವುದಿಲ್ಲ. ಕೇವಲ ಬಟ್ಟೆ ತೊಳೆಯಲು, ಮನೆ ಶುಚಿಗೊಳಿಸಲು ಮತ್ತು ಶೌಚಾಲಯಕ್ಕೆ ಮಾತ್ರ ಬಳಸುತ್ತಾರೆ. ಹೀಗಾಗಿ ಕೆಲ ಜನರು ಖಾಸಗಿ ನೀರಿನ ಟ್ಯಾಂಕರ್‌ ಮೂಲಕ ನೀರು ಪಡೆದುಕೊಳ್ಳಬೇಕಾಗಿದೆ.

ಕೆಲವರ ಮನೆಗಳಲ್ಲಿ ಬೋರ್‌ವೆಲ್‌ಗ‌ಳಿವೆ. ಇನ್ನು ಕೆಲವರು ಸಾರ್ವಜನಿಕ ನಳಗಳಿಗೆ ಬೋರ್‌ವೆಲ್‌ ದಿಂದ ನೀರು ಸರಬರಾಜು ಮಾಡಿದ ನೀರನ್ನೇಕುಡಿಯುತ್ತಾರೆ. ಶುದ್ಧೀಕರಣಗೊಳಿಸಿ ನೀರುಸರಬರಾಜು ಮಾಡುವಂತೆ ಮುಖ್ಯಾಧಿ ಕಾರಿಗಳಿಗೆತಿಳಿಸಿದರೂ ಸಹ ಇತ್ತ ಗಮನ ಹರಿಸುತ್ತಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ. ಮುಲ್ಲಾಮಾರಿ ನದಿ ನೀರಿನ ಪ್ರವಾಹದಿಂದಾಗಿ ಶುದ್ಧೀಕರಣಕ್ಕೆ ನೀರು ನುಗ್ಗಿ ಸಾಕಷ್ಟು ಕೆಸರು, ಮೋಟರ್‌ಗಳು ಹಾಳಾಗಿವೆ. ಟಿಸಿ ಸುಟ್ಟಿದ್ದರಿಂದ ಚಂದಾಪುರ ನೀರು ಪೂರೈಕೆ ಇಲ್ಲದೇ ಇಲ್ಲಿನ ಜನರು ಶುದ್ಧ ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ಶಾಸಕರು, ಸಂಸದರು, ಮೇಲಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ತಾಲೂಕು ಜೆಡಿಎಸ್‌ ಮುಖಂಡ ಹಣಮಂತರಾವ ಪೂಜಾರಿ ಆಗ್ರಹಿಸಿದ್ದಾರೆ.

ಚಂದಾಪುರ ನಗರದಲ್ಲಿ ಸಾರ್ವಜನಿಕರಿಗೆ ಶುದ್ಧ ನೀರು ಪೂರೈಕೆಗೋಸ್ಕರ ಮಾಜಿ ಸಚಿವ ಸುನೀಲ್‌ ವಲ್ಯಾಪುರೆ ಬಿಜೆಪಿ ಸರಕಾರದಿಂದ 110 ಲಕ್ಷ ರೂ. ಅನುದಾನ ಮಂಜೂರುಗೊಳಿಸಿದ್ದರು. ಅಂದಿನ ಸಿಎಂ ಡಿ.ವಿ. ಸದಾನಂದಗೌಡರು 2012ರಲ್ಲಿ ಅಡಿಗಲ್ಲು ನೆರವೇರಿಸಿದ್ದರು. ಅನುದಾನ ಕೊರತೆಯಿಂದ ಸ್ಥಗಿತವಾಗಿದ್ದರಿಂದ ಮತ್ತೆ ಚಂದಾಪುರ ಮತ್ತು ಪಟ್ಟಣದಲ್ಲಿ ಸಿಎಂಎಸ್‌ ಎಂಟಿಡಿಪಿ ಯೋಜನೆಯಡಿ 20 ದಶಲಕ್ಷಲೀಟರ್‌ ಸಾಮರ್ಥ್ಯವುಳ್ಳ ಜಲ ಶುದ್ಧೀಕರಣ 125 ಲಕ್ಷ ರೂ.ಗಳಲ್ಲಿ ಕೈಗೊಂಡ ಕಾಮಗಾರಿಯನ್ನು ಅಂದಿನ ಬೀದರ ಸಂಸದ ಎನ್‌.ಧರ್ಮಸಿಂಗ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿ| ಖಮರುಲ್‌ ಇಸ್ಲಾಂ 2014ರಲ್ಲಿ ಉದ್ಘಾಟಿಸಿದ್ದರು.

ಹಳ್ಳದ ನೀರು ಕುಡಿಯಲು ಯೋಗ್ಯವಾಗಿದ್ದರು ಚಂದಾಪುರ ನಿವಾಸಿಗಳು ನೀರು ಸೇವಿಸುವುದಿಲ್ಲ. ಏಕೆಂದರೆ ಜನರು ಹೆಚ್ಚಾಗಿ ಬೋರ್‌ವೆಲ್‌ ನೀರು ಕುಡಿಯುವುದರಿಂದಹಳ್ಳದ ನೀರು ಬೇಡವಾಗಿದೆ. ಮುಲ್ಲಾಮಾರಿನದಿಯ ನೀರು ಶುದ್ಧೀಕರಣ ಘಟಕದೊಳಗೆನುಗ್ಗಿದ್ದರಿಂದ ಕೆಮಿಕಲ್‌ ಯಂತ್ರಗಳು ಕೆಟ್ಟಿವೆ. ಶುದ್ಧ ನೀರು ಸರಬರಾಜು ಮಾಡಲು ನಿರಂತರವಾಗಿ ಪ್ರಯತ್ನ ನಡೆದಿದೆ. ಜನರ ವಿಶ್ವಾಸ ಗಳಿಸುವ ಪ್ರಯತ್ನ ನಡೆದಿದೆ. ಮುಲ್ಲಾಮಾರಿ ನದಿ ನೀರು ಸೇವೆಗೆ ಯೋಗ್ಯವಾಗಿದೆ. ಜಾಥಾ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅಭಯಕುಮಾರ ಹಬೀಬ, ಮುಖ್ಯಾಧಿಕಾರಿ, ಪುರಸಭೆ

 

ಶಾಮರಾವ ಚಿಂಚೋಳಿ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.