ಶೌಚ ಗೃಹ ಇಲ್ಲದ ಸ್ಥಳದಲ್ಲಿ ಜನರ ಕ್ವಾರಂಟೈನ್!
ಬಾಟಲಿಯಲ್ಲಿ ಮೂತ್ರ ಮಾಡುವ ದುಸ್ಥಿತಿ
Team Udayavani, May 22, 2020, 5:46 AM IST
ಸೇಡಂ: ದುಗನೂರು ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿರುವ ಶೌಚಾಲಯಕ್ಕೆ ಫ್ಲೆಕ್ಸ್‌ಗಳ ಪರದೆ ಹಾಕಿರುವುದು.
ಸೇಡಂ: ಇಲಿಗೆ ಹೆದರಿ ಹುಲಿ ಬೋನಿಗೆ ಬಿದ್ದಂತಾಗಿದೆ ತಾಲೂಕಿನ ಕೋವಿಡ್-19 ಕ್ವಾರಂಟೈನ್ ಕೇಂದ್ರದಲ್ಲಿರುವ ಜನರ ಬದುಕು. ಹೌದು. ಹೊರ ರಾಜ್ಯಕ್ಕೆ ಕೂಲಿ ಅರಸಿ ಹೋಗಿದ್ದವರು ಈಗ ಕೋ ಮಹಾಮಾರಿಗೆ ಹೆದರಿ ತವರಿಗೆ ಬಂದಿದ್ದು, ಅವರಲ್ಲಿ ಸಂತಸಕ್ಕಿಂತ ಅಸೂಯೆ ಮನೆ ಮಾಡಿದೆ. ಹೊಟ್ಟೆಗೆ ಅನ್ನ, ನೀರು ಹಾಕುವ ಸರ್ಕಾರ ಶೌಚಕ್ಕೆ ವ್ಯವಸ್ಥೆ ಮಾಡುವಲ್ಲಿ ಎಡವಿರುವುದು ತಾಲೂಕಿನಲ್ಲಿರುವ ಬಹುತೇಕ ಕ್ವಾರಂಟೈನ್ ಕೇಂದ್ರಕ್ಕೇ ಭೇಟಿ ನೀಡಿದರೆ ಅರಿವಾಗುತ್ತದೆ.
ತಾಲೂಕಿನಾದ್ಯಂತ 53 ಕ್ವಾರಂಟೈನ್ ಕೇಂದ್ರಗಳಲ್ಲಿ 1,523 ಜನರನ್ನು ಇರಿಸಲಾಗಿದೆ. ಆದರೆ ಬಹುತೇಕ ಕೇಂದ್ರಗಳಲ್ಲಿ ಶೌಚಾಲಯಗಳ ಕೊರತೆ ಇದೆ. ಹೆಚ್ಚಿನ ಜನರನ್ನು ಕ್ವಾರಂಟೈನ್ ಮಾಡಿರುವ ಮುಧೋಳ, ಮೋತಕಪಲ್ಲಿ, ಕೋಡ್ಲಾ, ದುಗನೂರು ಇನ್ನುಳಿದ ಕಡೆ ಸೂಕ್ತ ಶೌಚಾಲಯಗಳಿಲ್ಲದೆ ಜನರ ಅಕ್ಕ-ಪಕ್ಕದ ಜಮೀನುಗಳನ್ನು ಅವಲಂಬಿಸಿದ್ದಾರೆ.
ಹಗಲಲ್ಲೇ ಬಯಲಿಗೆ ಹೋಗಲಾಗದ ಮಹಿಳೆಯರು ಬಾಟಲಿಗಳಲ್ಲಿ ಮೂತ್ರ ಮಾಡಿ ಎಸೆಯುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇಷ್ಟಾದರೂ ಸಹ ತಾಲೂಕು ಆಡಳಿತ ಜಾಣಕುರುಡುತನ ಪ್ರದರ್ಶಿಸುತ್ತಿದೆ ಎಂಬುದು ಅಲ್ಲಿರುವ ಜನರ ಆರೋಪ. ದುಗನೂರು ಪ್ರೌಢಶಾಲೆಯಲ್ಲಿರುವ ಶೌಚಾಲಯ ನಾಮಕೆವಾಸ್ತೆ ಎಂಬಂತಿವೆ. ಅಳಿದುಳಿದ ಶೌಚಾಲಯ ಕಟ್ಟಡಕ್ಕೆ ಬಾಗಿಲುಗಳಿಲ್ಲ. ಪ್ರಚಾರಕ್ಕೆ ಬಳಸುವ ಫ್ಲೆಕ್ಸ್‌ಗಳನ್ನು ಪರದೆ ರೀತಿಯಲ್ಲಿ ಕಟ್ಟಿ ಶೌಚಾಲಯ ಬಳಸುವಂತಾಗಿದೆ. ಮೋತಕಪಲ್ಲಿಯಲ್ಲಿರುವ ಕೇಂದ್ರಗಳ ಪೈಕಿ ಒಂದರಲ್ಲಿ ಶೌಚಾಲಯವಿದೆ. ಆದರೆ ಬಳಕೆಗೆ ಯೋಗ್ಯವಿಲ್ಲ. ಇನ್ನೊಂದರಲ್ಲಿ ಹತ್ತಾರು ಜನರಿಗೆ ಎರಡು ಶೌಚಗೃಹಗಳಿವೆ. ಕೋಣೆಗಳಲ್ಲಿ ಫ್ಯಾನ್ ವ್ಯವಸ್ಥೆ ಇಲ್ಲದ ಪರಿಣಾಮ ಮಹಿಳೆಯರು ರಾತ್ರಿ ಹೋರಾಂಗಣದಲ್ಲೇ ನಿದ್ರಿಸುವಂತಾಗಿದೆ.
100ಕ್ಕೂ ಅಧಿಕ ಜನರಿರುವ ಮುಧೋಳ ಗ್ರಾಮದ 6 ಕೇಂದ್ರಗಳ ಪೈಕಿ ಮೂರರಲ್ಲಿ ಶೌಚಾಲಯಗಳಿಲ್ಲ. ಇರುವ ಹೊಸ ಶೌಚಾಲಯಗಳು ಲಾಕ್ ಮಾಡಲಾಗಿದೆ. ಜೊತೆಗೆ ಸಂಜೆಯಾದರೆ ಗ್ರಾಮದ ನೂರಾರು ಜನ ಕ್ವಾರಂಟೈನ್ ನಲ್ಲಿರುವವರನ್ನು ಭೇಟಿಯಾಗಿ, ಆಹಾರ ತಂದು ಕೊಡುತ್ತಿದ್ದಾರೆ. ಪೊಲೀಸ್ ಠಾಣೆ ಪಕ್ಕದಲ್ಲೇ ಕೇಂದ್ರವಿದ್ದರೂ ಈ ರೀತಿ ಕಾನೂನು ಉಲ್ಲಂಘನೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಇನ್ನು ಬಹುತೇಕ ಕೇಂದ್ರಗಳಿಗೆ ನಿತ್ಯ ಹೊರಗಿನವರು ಬಂದು ಭೇಟಿ ನೀಡುವುದು ಸಾಮಾನ್ಯ ಎನ್ನಲಾಗಿದೆ.
ಶೌಚಾಲಯಗಳಿಲ್ಲದ ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸುವುದರ ಜತೆಗೆ ಇದ್ದ ಶೌಚಗೃಹಗಳ ದುರಸ್ತಿ ಕಾರ್ಯ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರಿಗೆ ಸಮಸ್ಯೆಯಾಗದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಸಹ ಅನೇಕ ಕೇಂದ್ರಗಳನ್ನು ವೀಕ್ಷಿಸಿದ್ದೇವೆ. –ಬಸವರಾಜ ಬೆಣ್ಣೆಶಿರೂರ, ಸೇಡಂ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.