ನೀರಾವರಿ ಯೋಜನೆ ಅನುಷ್ಠಾನದಲ್ಲಿ ಇಚ್ಛಾ ಶಕ್ತಿ ಕೊರತೆ
Team Udayavani, Aug 9, 2022, 4:04 PM IST
ಆಳಂದ: ದೂರದೃಷ್ಟಿ ಮತ್ತು ಜನಪರ ಯೋಜನೆಗಳ ಕೈಗೆತ್ತಿಕೊಂಡಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರದ ನೀರಾವರಿಯಂತ ಕಾಮಗಾರಿಗಳನ್ನು ಸಹ ಬಿಜೆಪಿ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದ ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು, ನೀರಾವರಿ ಕೃಷಿ ಉತ್ತೇಜನದಂತ ಕಾಮಗಾರಿಗಳಲ್ಲೂ ಪೂರ್ಣಗೊಳಿಸಿದೆ ಕಡೆಗಣಿಸಿದೆ ಎಂದು ಹರಿಹಾಯ್ದರು. ಕೊರಳ್ಳಿ ಹತ್ತಿರದ ತಾಲೂಕಿನ ಜೀವನಾಡಿ ಅಮಾರ್ಜಾ ಅಣೆಕಟ್ಟು ಪೂರ್ಣವಾಗಿ ನೀರು ತುಂಬಿರುವ ಪ್ರಯುಕ್ತ ಸೋಮವಾರ ರೈತರು ಮತ್ತು ಬೆಂಬಲಿಗರೊಂದಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ನಮ್ಮ ಅಕಾರವಯಲ್ಲಿ ಅಮರ್ಜಾ ಅಣೆಕಟ್ಟೆಗೆ ಭೀಮಾನದಿ ನೀರು ತರುವ ಯೋಜನೆಯ ಹಾಗೂ ಮಾರ್ಗದ 13 ಹಳ್ಳಿಯ ಕರೆಗಳಿಗೆ ನೀರು ಭರ್ಥಿ ಮಾಡುವ ಯೋಜನೆಯೂ ಸಕಾಲಕ್ಕೆ ಅನುಷ್ಠಾನ ಕೈಗೊಳ್ಳುವಲ್ಲಿ ಬಿಜೆಪಿ ಸರ್ಕಾರ ಹಿಂದೇಟು ಹಾಕಿದೆ. ಕಾಮಗಾರಿ ಆರಂಭಿಸಿ ನಾಲ್ಕು ವರ್ಷವಾದರೂ ಇದುವರೆಗೂ ಪ್ರಗತಿಕಂಡಿಲ್ಲ. ಯೋಜನೆ ಯಶಸ್ವಿಯಾದರೆ ಬೇಸಿಗೆಯಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಪೂರಕವಾಗಲಿದೆ. 13 ಕೆರೆಗಳಿಗೆ ಬೇಸಿಗೆಯಲ್ಲಿ ನೀರು ಬತ್ತದೆ ಕೃಷಿ, ಜನ ಜಾನುವಾರುಗಳಿಗೆ ಅನುಕೂಲವಾಗುತ್ತಿದೆ. ಈ ಕೆಲಸವನ್ನು ಅಕಾರದಲ್ಲಿದ್ದವರು ತುರ್ತಾಗಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಆಳಂದ ತಾಲೂಕು ಹೆಚ್ಚಾಗಿ ಬಯಲು ಕೃಷಿ ಪ್ರದೇಶವಾಅಗಿದೆ. ಇಲ್ಲಿ ಹತ್ತಾರು ಕೆರೆ, ಗೊಕಟ್ಟೆಗಳ ನಿರ್ಮಾಣಕ್ಕೆ ಪೂರಕವಾಗಿದ್ದರು ಈ ಕೆಲಸಕ್ಕೆ ಮುಂದಾಗಿಲ್ಲ. ಕೆರೆ, ಗೋಕಟ್ಟೆಗಳ ಮೂಲಕ ರೈತರ ಜಮೀನಿಗೆ ನೀರು ಒದಗಿಸಿದರೆ ರೈತರು ತಮ್ಮ ಬೆಳೆ ಬೆಳೆದು ಆರ್ಥಿಕವಾಗಿ ಮುಂದೆ ಬರುತ್ತಾರೆ. ಸರ್ಕಾರ ಈ ಇಂಥ ಕೆಲಸಗಳಿಗೆ ಒತ್ತು ನೀಡಿದರೆ ಎಷ್ಟೇ ಅತಿವೃಷ್ಟಿ ಅನಾವೃಷ್ಟಿ ಎದುರಾದರೂ ಸಹಿತ ರೈತರಿಗೆ ತೊಂದರೆ ಆಗದು ಎಂದರು.
ನಿಸರ್ಗದಲ್ಲಿ ದೊಡ್ಡ ಶಕ್ತಿ ಅಡಗಿದೆ. ಶುದ್ಧ ನೀರು, ಗಾಳಿ ಅರಣ್ಯದ ಅವಶಕತೆ ಇದೆ. ಇಂದು ಪರಿಸರ ಅಸಮತೋಲನದಿಂದಾಗಿ ಜಾಗತೀಕ ತಾಪಮಾನ ಮತ್ತು ಪದೇ ಪದೇ ಅತಿವೃಷ್ಟಿ ಅನಾವೃಷ್ಟಿಗೆ ತುತ್ತಾಗುವಂತಾಗಿದೆ. ಅತಿವೃಷ್ಟಿ ಅನಾವೃಷ್ಟಿ ಅಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರೂ ಪರಿಸರದ ಸಮತೋಲನೆ ಕಾಪಾಡಲು ಮುಂದಾಗಬೇಕಾಗಿದೆ. ಸತತ ಮಳೆಯಿಂದಾಗಿ ಪ್ರಸಕ್ತ ಮುಂಗಾರಿನ ಬೆಳೆಗಳು ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ಪರಿಹಾರ ಒದಗಿಸಿ ಬರುವ ಹಿಂಗಾರು ಹಂಗಾಮಿನ ಬಿತ್ತನೆಗೆ ಸಹಕಾರ ನೀಡಬೇಕು ಎಂದರು.
ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಕೆಪಿಸಿಸಿ ಭಾಲ್ಕಿ ಸಂಯೋಜಕ ಗುರುಶರಣ ಪಾಟೀಲ ಕೊರಳ್ಳಿ, ಮುಖಂಡರಾದ ಮಜರ್ ಹುಸೇನ್ ತಾಪಂ ಮಾಜಿ ಅಧ್ಯಕ್ಷ ಮೋಹನ್‌ಗೌಡ ಪಾಟೀಲ, ಮಲ್ಲಪ್ಪ ಹತ್ತರಕಿ, ಗಣೇಶ ಪಾಟೀಲ, ಲಿಂಗರಾಜ ಪಾಟೀಲ್, ರಾಜಶೇಖರ್ ಯಳಸಂಗಿ, ಶಂಕರರಾವ್ ದೇಶಮುಖ, ಲಕ್ಷಣ ಝಳಕಿ, ತಯಬ್ ಅಲಿ ಶೇಖ ಮಹಾಂತೇಶ್ ಪಾಟೀಲ್, ಶರಣ ಆಳಂಗಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷತೆ ಜೈಚಿತ್ರ ವೇದಶೆಟ್ಟಿ, ಸತೀಶ ಪನ್ನಶೆಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.