ಲಕ್ಷ ದೀಪೋತ್ಸವ ಸಂಭ್ರಮ
Team Udayavani, Sep 30, 2018, 10:56 AM IST
ಕಲಬುರಗಿ: ನೂತನ ವಿದ್ಯಾಲಯ ಮೈದಾನದಲ್ಲಿ ಶನಿವಾರ ಸಂಜೆ ಶ್ರೀ ಸತ್ಯಪ್ರಮೋದತೀರ್ಥರ ಜನ್ಮ ಶತಮಾನೋತ್ಸವ ನಿಮಿತ್ತ ವಿಶ್ವ ಮಧ್ವ ಮಹಾಪರಿಷತ್ ವತಿಯಿಂದ ಲಕ್ಷ ದೀಪೋತ್ಸವ ಆಯೋಜಿಸಲಾಗಿತ್ತು. ಮಹಾನಗರ ಸೇರಿದಂತೆ ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡು ದೀಪ ಬೆಳಗಿದರು.
ಲಕ್ಷ ದೀಪೋತ್ಸವಕ್ಕೂ ಮುನ್ನ ಬ್ರಹ್ಮಪುರ ಉತ್ತರಾದಿ ಮಠದ ಶ್ರೀ ವಿಠuಲ ರುಕ್ಮಿಣಿ ಮಂದಿರದಿಂದ ನೂತನ ವಿದ್ಯಾಲಯ ಮೈದಾನದವರೆಗೆ ನಡೆದ ಶ್ರೀ ಸತ್ಯಪ್ರಮೋದತೀರ್ಥರ ಪಾದುಕೆ ಮೆರವಣಿಗೆ ಗಮನ ಸೆಳೆಯಿತು. ಈ ವೇಳೆ ಶ್ರೀ ಸತ್ಯಪ್ರಮೋದತೀರ್ಥ ಮಹಾರಾಜ ಕಿ ಜೈ, ಹರಿಸರ್ವೋತ್ತಮ ವಾಯು ಜೀವೋತ್ತಮ, ಉತ್ತರಾದಿ ಮಠಕ್ಕೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.
ಲಕ್ಷ ದೀಪೋತ್ಸವ ಹಾಗೂ ಮೆರವಣಿಗೆಯಲ್ಲಿ ಪಂ| ರಂಗಾಚಾರ್ಯ ಗುತ್ತಲ, ಉತ್ತರಾದಿ ಮಠದ ದಿವಾನ ಪಂ| ಶಶೀಧರಾಚಾರ್ಯ, ಹಿರಿಯ ವಿದ್ವಾಂಸ ಪಂ| ರಾಮಾಚಾರ್ಯ ಅವಧಾನಿ, ಪಂ| ಗೋಪಾಲಾಚಾರ್ಯ ಅಕಮಂಚಿ, ಪಂ| ಹಣಮಂತಾಚಾರ್ಯ ಸರಡಗಿ, ಪಂ| ವಿನೋದಾಚಾರ್ಯ ಸರಡಗಿ, ಪಂ| ವಿಷ್ಣುದಾಸಾಚಾರ್ಯ ಖಜೂರಿ, ಪಂ| ಡಾ| ಗುರುಮಧ್ವಾಚಾರ್ಯ ನವಲಿ, ಪಂ| ಗಿರೀಶಾಚಾರ್ಯ ಕೊಪ್ಪರ, ಪಂ| ಪ್ರಸನ್ನಾಚಾರ್ಯ ಜೋಶಿ, ಪಂ| ಗಿರೀಶಾಚಾರ್ಯ ಅವಧಾನಿ, ಪಂ| ಭೀಮಸೇನಾಚಾರ್ಯ ಜೋಶಿ, ಪಂ| ಶ್ರೀನಿವಾಸಾಚಾರ್ಯ ಪದಕಿ, ಮಠಾಧಿಕಾರಿ ರಾಮಾಚಾರ್ಯ ಘಂಟಿ, ಆನಂದ ತೀರ್ಥಾಚಾರ, ವಿಶ್ವ ಮಧ್ವ ಮಹಾಪರಿಷತ್‌ನ ಅರವಿಂದ ನವಲಿ, ರವಿ ಲಾತೂರಕರ್, ಡಾ| ಗಿರೀಶಾಚಾರ್ಯ ಗಲಗಲಿ, ವಿನುತ್ ಕುಲಕರ್ಣಿ, ರಘೋತ್ತಮ ಘಂಟಿ, ಜಯತೀರ್ಥ ಜೋಶಿ, ಅನಂತ ಕಾಮೇಗಾಂವ, ಅಭಿಜಿತ್ ದೇಶಮುಖ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.