ಶಾಸಕರ ಸಮಾರಂಭದಲ್ಲಿ ವ್ಯಕ್ತಿಗೆ ಥಳಿತ
Team Udayavani, Oct 19, 2017, 10:51 AM IST
ಚಿಂಚೋಳಿ: ತಾಲೂಕಿನ ಕುಂಚಾವರಂ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ|ಬಿ. ಆರ್. ಅಂಬೇಡ್ಕರ್ ವಸತಿ ಯೋಜನೆ ಅಡಿ ಮಂಜೂರಿಗೊಂಡ ಮನೆ ಆದೇಶ ಪತ್ರವನ್ನು
ಪಡೆದುಕೊಳ್ಳಲು ಆಗಮಿಸಿದ ಮೊಗದಂಪುರ ಗ್ರಾಮದ ದಲಿತ ವ್ಯಕ್ತಿಗೆ ಕುಂಚಾವರಂ ಪೊಲೀಸ್ ಠಾಣೆ ಪೇದೆಯೊಬ್ಬರು
ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಸಮಾರಂಭದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು.
ಕುಂಚಾವರಂ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮೊಗದಂಪುರ ಗ್ರಾಮದ ದಲಿತ ವ್ಯಕ್ತಿ ಮೊಗಲಪ್ಪ ಎನ್ನುವಾತ ತನ್ನ ಪತ್ನಿಯೊಂದಿಗೆ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೆಲವು ಗ್ರಾಮಗಳಿಂದ ಆಗಮಿಸಿದ ಕೆಲವರು ಗಲಾಟೆ ಮಾಡುತ್ತಿದ್ದರು. ಈ ವೇಳೆ ಪೇದೆ ರಾಜಶೇಖರ ಎನ್ನುವಾತ ಕೈಯಲ್ಲಿದ್ದ ಬಡಿಗೆಯಿಂದ ಥಳಿಸಿ ಠಾಣೆಗೆ ಕರೆದುಕೊಂಡು
ಹೋದ. ಈ ವಿಷಯ ತಿಳಿದ ಕೆಲವರು ಆಕ್ರೋಶಗೊಂಡ ಮೊಗದಂಪುರ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಗಲಾಟೆ ನಡೆಸಿದರು. ನಂತರ ಕುಂಚಾವರಂ ತಾಪಂ ಸದಸ್ಯ ಚಿರಂಜೀವಿ ಪಾಪಯ್ಯ ಶಿವರಾಮಪುರ, ಮಾಜಿ ತಾಪಂ ಸದಸ್ಯ ನರಸಿಂಹಲು ಕುಂಬಾರ ಪೊಲೀಸನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ಸಮಾಧಾನ ಪಡಿಸಿದರು.
ಇದೆ ವೇಳೆ ಡಾ| ಉಮೇಶ ಜಾಧವ್ ಪೊಲೀಸ್ ಪೇದೆಯನ್ನು ತರಾಟೆಗೆ ತೆಗೆದುಕೊಂಡು, ಇಲ್ಲಿ ಹೆಚ್ಚು ಬಡವರಿದ್ದಾರೆ.
ಸಮಾರಂಭಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತನಿಗೆ ಅನಾವಶ್ಯಕವಾಗಿ ಬಾಸುಂಡೆ ಬರುವಂತೆ ಪೊಲೀಸ್
ಪೇದೆಯೊಬ್ಬ ಬಡಿಗೆಯಿಂದ ಹೊಡೆದಿದ್ದಾನೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.