![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 28, 2021, 10:36 AM IST
ಬೀದರ: ಇತಿಹಾಸ ಕತ್ತಲೆಯಿಂದ ಬೆಳಕಿನ ಕಡೆ ಕೊಂಡೊಯ್ಯುವ ವಿಷಯವಾಗಿದೆ ಎಂದು ಕಲಬುರಗಿ ಪ್ರಾಧ್ಯಾಪಕ ಡಾ| ಶಶಿಶೇಖರ ರೆಡ್ಡಿ ತಿಳಿಸಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಇತಿಹಾಸ ವಿಭಾಗದಿಂದ ರಾಜ್ಯ ಪತ್ರಾಗಾರ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ “ಬಹಮನಿ ಮನೆತನದ ಸಾಂಸ್ಕೃತಿಕ ಕೊಡುಗೆಗಳು’ ಕುರಿತು ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಬುದ್ಧಿವಂತಿಕೆ ಹಿತಾಸಕ್ತಿಗೆ ಬಲಿಕೊಟ್ಟು ಅಧ್ಯಯನ ಮಾಡುವಾಗ ಇತಿಹಾಸದ ಬಗ್ಗೆ ನಂಬಿಕೆ ವಿಶ್ವಾಸ ಇಲ್ಲದಂತಾಗುತ್ತದೆ. ಇತಿಹಾಸ ಪ್ರಜ್ಞಾವಂತರಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಇತಿಹಾಸದ ಘಟನೆಗಳು ರಾಜಕೀಯಕರಣವಾಗುತ್ತಿರುವುದು ದುಃಖಕರ ಸಂಗತಿ ಎಂದರು.
ಇಲ್ಲಿನ ಬಿದರಿ ಕಲೆ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಇತಿಹಾಸ ಮುಂದಿನ ಪೀಳಿಗೆಗೆ ಎಲ್ಲ ಪ್ರಬಂಧಗಳು ದಾರಿದೀಪವಾಗಬೇಕು. ಇತಿಹಾಸದಿಂದ ಪಾಠ ಕಲಿಸಬೇಕಾಗಿದೆ ವಿನಃ ಪುನರಾವರ್ತನೆ ಆಗೋದು ಬೇಡ. ಸಮಾನತೆ, ಮಾನವೀಯ ಮೌಲ್ಯ ಬಿತ್ತರಿಸುವ ಕೆಲಸ ಮಾಡಬೇಕು ಎಂದರು.
ಕಲಬುರಗಿ ಉಪನ್ಯಾಸಕ ಡಾ| ಶಂಭುಲಿಂಗ ವಾಣಿ ಆಶಯ ನುಡಿಯಾಡಿ, ಬಹಮನಿ ಸುಲ್ತಾನರು ಮೂಲತಃ ಈ ದೇಶದವರಲ್ಲ. ಇಲ್ಲಿನವರಿಗೆ ಅವರ ಚರಿತ್ರೆ ಬರೆಯಲು ಕೊಡಲಿಲ್ಲ. ಸಂಶೋಧನೆ ಕುರಿತು ಉಪನ್ಯಾಸಕರಲ್ಲಿ ಆಸಕ್ತಿ ಇರಬೇಕು. ಚರಿತ್ರೆಯಲ್ಲಿ ಕಥೆಗಳು ಬಂದರೆ ಇತಿಹಾಸ ತನ್ನ ಸತ್ವ ಕಳೆದುಕೊಳ್ಳುತ್ತದೆ. “ಇಣಕಿ ನೋಡಬೇಕೆ ವಿನಃ ಕೆಣಕಿ ನೋಡಬಾರದು’ ಇಲ್ಲಿಯವರೆಗೆ ನಾವು ಮೂಲ ಕೃತಿವರೆಗೆ ಹೋಗಿಲ್ಲ. ಬಹಮನಿ ಅರಸರ ಕುರಿತು ಮೂಲ ಕೃತಿ ಗೊತ್ತಿಲ್ಲ. ಯಝದಾನಿ, ಸೇರವಾನಿ ಬರೆದ ಕೃತಿಗಳು ಓದಿದ್ದೇವೆ ವಿನಃ ನಿಜವಾದ ಕೃತಿ ಸಿಕ್ಕಿಲ್ಲ ಎಂದರು.
ಇದನ್ನೂ ಓದಿ: 37 ಭಿಕ್ಷುಕರು ನಿರಾಶ್ರಿತರ ಕೇಂದ್ರಕ್ಕೆ ರವಾನೆ
ಬಹಮನಿ ಸುಲ್ತಾನರ ಈ ಭಾಗಕ್ಕೆ ಅಪಾರ ಕೊಡುಗೆ ಇದೆ. ಈ ಭಾಗ ವಾಸ್ತುಶಿಲ್ಪಯಿಂದ ಸಂಪದ್ಭರಿತವಾಗಿದೆ ಎಂದು ತೋರಿಸಿಕೊಟ್ಟವರೇ ಬಹಮನಿ ಸುಲ್ತಾನರು. ಹೀಗಾಗಿ ಸಾಂಸ್ಕೃತಿಕ ಕೊಡುಗೆ ಇದೆ. ವಿದೇಶಿಗರು ದೇವಾಲಯ ನೋಡಲು ಬರುವುದಿಲ್ಲ, ಹಳೇ ಪ್ರವಾಸಿ ತಾಣ ನೋಡಲು ಬರುತ್ತಾರೆ. ಮೂಲ ದಾಖಲೆಗಳು ಮೂಲ ಪ್ರದೇಶಕ್ಕೆ ಸೇರಿಸಬೇಕು. ಇದನ್ನು ಸರ್ಕಾರ ಹಾಗೂ ಪತ್ರಾಗಾರ ಇಲಾಖೆ ಮಾಡಬೇಕು ಎಂದರು.
ಪ್ರಾಚಾರ್ಯ ಡಾ| ಎಂ.ಎಸ್. ಚೆಲುವಾ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಲಕ್ಷ್ಮೀ ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ಡೀನ್ ಎಸ್. ಅಂಡಗಿ, ಡಾ| ಸಂಜುಕುಮಾರ ತಾಂದಳೆ, ಪ್ರಾಚಾರ್ಯ ಡಾ| ಬಸವರಾಜ ಬಲ್ಲೂರ, ಡಾ| ಚಂದ್ರಶೇಖರ ಬಿರಾದಾರ, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ಬಿದರಿ ಕಲೆ ಮತ್ತು ಅದರ ವೈಶಿಷ್ಟತೆ, ಬಹಮನಿ ಮನೆತನದ ಸಾಂಸ್ಕೃತಿಕ ಕೊಡುಗೆಗಳು ಹಾಗೂ ಪ್ರಬಂಧಗಳ ಮಂಡನೆ ಕುರಿತು 3 ಗೋಷ್ಠಿಗಳು ನಡೆದವು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.