ವೇದದ ಮಹತ್ವ ಎಲ್ಲರಿಗೂ ತಿಳಿಸಿ
Team Udayavani, Apr 10, 2017, 3:37 PM IST
ಕಲಬುರಗಿ: ವೇದಗಳ ಸಂರಕ್ಷಣೆಯಾಗಬೇಕು ಹಾಗೂ ವೇದದ ಮಹತ್ವ ಎಲ್ಲರಿಗೂ ತಿಳಿಸಬೇಕೆಂಬ ಉದ್ದೇಶ ದಿಂದ ವೇದಪಾರಾಯಣ ಅಭಿ ಯಾನ ಆರಂಭವಾಗಿದ್ದು, ವೇದ ಪಾರಾಯಣ ಗಳನ್ನು ಹೆಚ್ಚೆಚ್ಚು ಮಾಡಿಸಬೇಕೆಂದು ಪಂ| ಮಧುಸೂಧನ ಶಾಸ್ತ್ರೀ ಹಂಪಿಹೋಳಿ ಹೇಳಿದರು.
ನಗರದ ಸಾಯಿ ಮಂದಿರದಲ್ಲಿ ರವಿವಾರ ಬೆಳಗ್ಗೆ ನಡೆದ ವೇದಪಾರಾಯಣ ಅಭಿಯಾನದ 7 ನೇ ವಾರ್ಷಿಕ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷ್ಣಾದ ಶೇಷಭಟ್ಟರು, ಪುಣೆ, ಮುಂಬೈ, ಬೀದರ, ವಿಜಯಪುರ, ಕಲಬುರಗಿ, ಬೆಳಗಾವಿ ನಗರದ ವೇದ ವಿದ್ವಾಂಸರು ಭಾಗವಹಿಸಿದ್ದರು. ಸುಮಾರು 110 ಕ್ಕೂ ಹೆಚ್ಚು ವೇದ ಪಾರಾಯಣ ನಡೆಯಿತು. ಉಪನ್ಯಾಸಕರಾಗಿ ಡಾ| ಯೋಗೇಶ ಜೋಶಿ ವೇದದ ಉತ್ಪತ್ತಿ, ಬೆಳವಣಿಗೆ ಹಾಗೂ ಮಹತ್ವ ತಿಳಿಸಿದರು.
ದಾನಿಗಳಿಗೆ ವಸ್ತ್ರ ಮಂತ್ರಾಕ್ಷತೆ, ಫಲಪುಷ್ಪ ನೀಡಿ ಆಶೀರ್ವದಿಸಲಾಯಿತು ವೇದ ವಿದ್ವಾಂಸರಿಗೆ ದಕ್ಷಿಣೆ ಹಾಗೂ ವಸ್ತ್ರ ನೀಡಿ ಸತ್ಕರಿಸಲಾಯಿತು. ಮಹಾ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಲೋಕೇಶಭಟ್ಟ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.