ಭೋವಿ ಜನಾಂಗ ಅಭಿವೃದ್ಧಿಗೊಳ್ಳಲಿ
Team Udayavani, Jan 18, 2019, 7:06 AM IST
ಆಳಂದ: ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಭೋವಿ ವಡ್ಡರ ಜನಾಂಗದವರು ಶಿವಯೋಗಿ ಸಿದ್ಧರಾಮೇಶ್ವರನ ತತ್ವಾದರ್ಶ ಮೈಗೂಡಿಸಿಕೊಂಡು ಎಲ್ಲ ರಂಗದಲ್ಲೂ ಅಭಿವೃದ್ಧಿಗೆ ಪಣತೋಡಬೇಕು ಎಂದು ಸಮಾಜದ ಮುಖಂಡ ವಿಠuಲ ಕೋಣೆಕರ್ ಆಶಯ ವ್ಯಕ್ತಪಡಿಸಿದರು. ತಾಲೂಕಿನ ನಿಂಬರಗಾ ಗ್ರಾಮದಲ್ಲಿ ಭೋವಿ ವಡ್ಡರ ಸಮಾಜ ಹಮ್ಮಿಕೊಂಡಿದ್ದ ಸೊಲ್ಲಾಪುರದ ಶಿವಯೋಗಿ ಸಿದ್ಧರಾಮೇಶ್ವರರ 847ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಡ್ಡರ ಸಮುದಾಯಕ್ಕೆ ಸರ್ಕಾರ ಮೀಸಲಾತಿ ಕಲ್ಪಿಸಿದರೂ ಸಹಿತ ಶಿಕ್ಷಣ ಕೊರತೆ ಹಾಗೂ ಆರ್ಥಿಕ ಹಿನ್ನೆಡೆಯಿಂದ ಸಮುದಾಯದ ಜನರು ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶರಣ ಶಿವಯೋಗಿ ಸಿದ್ಧರಾಮೇಶ್ವರರು ಸಮಾಜ, ಜನರ ಹಿತಕ್ಕಾಗಿ ದುಡಿದು ಅನೇಕ ಕೆರೆ ಕಟ್ಟೆ, ದೇವಾಲಯಗಳನ್ನು ನಿರ್ಮಿಸಿ ಅದರೊಂದಿಗೆ ಬದುಕಿನ ಮಾರ್ಗವನ್ನು ತೋರಿದ್ದಾರೆ ಎಂದರು.
ಸಮಾಜದ ಯುವ ಮುಖಂಡ ಅರ್ಜುನೆ ಬಂಡೆ ಮಾತನಾಡಿ, ತಾಂತ್ರಿಕವಾಗಿ ವೈಜ್ಞಾನಿಕ ಯುಗದಲೂ ವಡ್ಡರ ಜನಾಂಗವೂ ಇಂದಿಗೂ ತಮ್ಮ ಹಳೆ ಕುಲಕಸಬನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಕಲ್ಲು ಒಡೆಯುವ ಯಂತ್ರಗಳು ಬಂದ ಮೇಲೆ ವಡ್ಡರ ಜನಾಂಗದ ಉದ್ಯೋಗಕ್ಕೆ ಹೊಡೆತ ಬಿದ್ದು ಬೀದಿಪಾಲಾಗುವಂತೆ ಮಾಡಿದೆ. ಇಂಥ ಪರಿಸ್ಥಿತಿಯಲ್ಲಿ ಸಮಾಜ ಬಾಂಧವರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಪರ್ಯಾಯ ಉದ್ಯೋಗದಲ್ಲಿ ತೊಡಗಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಹೇಳಿದರು.
ಮುಖಂಡ ಶಿವಪುತ್ರಪ್ಪ ಮಾಳಗೆ, ತಾಪಂ ಸದಸ್ಯ ದತ್ತಾತ್ರೇಯ ದುರ್ಗದ, ಮುಖಂಡ ಅಮೃತ ಬಿಬ್ರಾಣಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣಾ ಬನ್ನಪಟ್ಟಿ, ಗ್ರಾಪಂ ಸದಸ್ಯರಾದ ಬರ್ಮಣಾ ಕಾರಬಾರಿ, ಶಾಂತಾಬಾಯಿ, ಲಕ್ಷ್ಮಣ ಧಂಗಾಪುರ, ಯಶವಂತ ವಡಿಯರ ಹಾಗೂ ಭೀಮಾಶಂಕರ ಬಂಡಿ, ಸಿದ್ದಣ್ಣಾ ಕಲಕುಟಗಿ, ಸೋಮಣ್ಣಾ ಜವಳಿ, ಎಎಸ್‌ಐ ಶಂಕರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.