ಕೋಲಿ ಸಮಾಜ ಧಾರ್ಮಿಕ ನೆಲೆಗಟ್ಟಿನಲ್ಲಿ ಒಂದಾಗಲಿ
Team Udayavani, Aug 30, 2022, 1:28 PM IST
ಕಲಬುರಗಿ: ಕೋಲಿ ಸಮಾಜ ಸಮುದಾಯಿಕವಾಗಿ ಧಾರ್ಮಿಕ ನೆಲೆಗಟ್ಟಿನಲ್ಲಿ ಒಂದಾದಾಗ ಮಾತ್ರವೇ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳೆವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂದು ಹಾವೇರಿಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಗಂಗಾನಗರದಲ್ಲಿ ಸೋಮವಾರ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಂಘ ಹಾಗೂ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದಲ್ಲಿ ಹಮ್ಮಿಕೊಂಡಿದ್ದ ಒಂದು ತಿಂಗಳ ಕಡಕೋಳ ಮಡಿವಾಳೇಶ್ವರ ಪುರಾಣ ಸಮಾರೋಪ ಸಮಾರಂಭವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮಲ್ಲೂ ಸಾಕಷ್ಟು ಜನರು ಓದಿಕೊಂಡಿದ್ದಾರೆ. ಜಾಗೃತಿ ಇದೆ ಆದರೆ, ಅದು ಸಮಾಜದ ಒಳಿತಿಗಾಗಿ ಬಳಕೆ ಆಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದ ಅವರು, ಧಾರ್ಮಿಕವಾಗಿ ನಾವೂ ಒಂದಾಗುವ ನಿಟ್ಟಿನಲ್ಲಿ ಇತರೆ ಸಮಾಜಗಳಂತೆ ಮಠಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕಲಬುರಗಿಯ ಚೌಡಾಪುರದ ಬಳಿಯಲ್ಲಿ ಬೃಹತ್ ಮಟ್ಟದಲ್ಲಿ ಗುರುಪೀಠವನ್ನು ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಕೋಲಿ ಸಮಾಜ ಎಂದರೆ ಗಂಗಾನಗರ ಎನ್ನುವಷ್ಟರ ಮಟ್ಟಿಗೆ ನಾವು ಇಲ್ಲಿ ಒಗ್ಗಟ್ಟಿನಿಂದ ಇದ್ದೇವೆ. ದಿ.ವಿಠuಲ್ ಹೇರೂರು ಅವರ ಮೇಲೆ ದಾಳಿ ನಡೆದಾಗ, ಇಲ್ಲಿ ಮಹಿಳೆಯರು ಸೇರಿದಂತೆ ಎಲ್ಲರೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು. ಅದರ ಫಲವಾಗಿ ಅವರನ್ನು ರಾಜಕೀಯವಾಗಿ ಗುರುತಿಸುವ ಕೆಲಸವೂ ಆಯಿತು ಎಂದ ಅವರು, ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ವ್ರತ ಆಚರಣೆ ಮಾಡುತ್ತಾ, ಹಾವೇರಿಗೆ ಹೋಗಿ ಅದನ್ನು ಸಂಪೂರ್ಣ ಮಾಡುವ ಸಂಕಲ್ಪ ಮಾಡಿರುವ ಯುವಕರಿಗೆ ಇನ್ನಷ್ಟು ಪ್ರೋತ್ಸಾಹಿಸಿ ಇದು ಪ್ರತಿ ವರ್ಷ ನಡೆಯಲಿ ಎಂದು ಆಶಿಸಿದರು.
ಗುರುಪೀಠದ ಮಾಜಿ ಅಧ್ಯಕ್ಷ ಬಸವರಾಜ ಸಪ್ಪನಗೋಳ್, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿದರು. ಗುರುದೇವ ಶಿವಯೋಗಿ, ಅಮೃತ ಹೆಚ್. ಡಿಗ್ಗಿ, ವಿಜಯಕುಮಾರ ಹದಗಲ, ಶಾಂತಪ್ಪಾ ಕೂಡಿ, ರಾಯಪ್ಪ ಹೊನ್ನಗುಂಟಿ, ಅಶೋಕ ಬಿದನೂರ, ಶ್ರೀಕಾಂತ ಆಲೂರ, ಶಿವಶರಣ ಕೌಲಗಿ, ಮಲ್ಲಿಕಾರ್ಜುನ ಕೂಡಿ, ಸಂತೋಷ ಹುಳಿಗೇರಿ ಸೇರಿದಂತೆ ಭಕ್ತಾ ಧಿಗಳು ಇದ್ದರು.
ಕೋಲಿ ಸಮಾಜದಲ್ಲಿ ಅತ್ಯಂತ ಶ್ರದ್ಧೆ ಮತ್ತು ಕಾಳಜಿ ಇದೆ. ಆದರೆ, ರಾಜಕೀಯವಾಗಿ ಗುರುತಿಸಿಕೊಂಡು ದೊಡ್ಡ ಮಟ್ಟದಲ್ಲಿ ಸಮಾಜಕ್ಕೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಲು ಇನ್ನೂ ಶಕ್ತಿ ಬಂದಿಲ್ಲ. ಇದರಿಂದಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ನಮ್ಮನ್ನು ಗುರುತಿಸಲು ಇನ್ನೂ ಸಾಧ್ಯವಾಗಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹಿರಿಯರಾದ ಕಮಕನೂರು, ಸಪ್ಪನಗೋಳ್, ತಳವಾರ್ ಸೇರಿದಂತೆ ಅನೇಕರು ಇದ್ದಾರೆ. –ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು
ಚೌಡಾಪುರದಲ್ಲಿ ಹಾವೇರಿ ಗುರುಪೀಠದಂತೆ ದೊಡ್ಡದಾದ ಗುರುಪೀಠ ನಿರ್ಮಾಣ ಮಾಡಲಾಗುತ್ತಿದೆ. ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಅದರ ನೇತೃತ್ವವಹಿಸಿದ್ದಾರೆ. ಅವರಿಗೆ ಈ ಭಾಗದ ಎಲ್ಲ ಕೋಲಿ ಸಮಾಜದ ಹಿರಿಯರು, ಯುವಕರು ಮತ್ತು ಉದ್ಯಮಿಗಳು ಸಹಾಯ ಮಾಡಬೇಕು. ಅದರಿಂದ ನಮ್ಮ ಜನಾಂಗದ ಶೈಕ್ಷಣಿಕ, ಸಮಾಜಿಕ ಕಲ್ಯಾಣ ಆಗಲಿದೆ. –ತಿಪ್ಪಣ್ಣಪ್ಪ ಕಮಕನೂರು ಮಾಜಿ ಎಂಎಲ್ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.