ರೈತರ ಏಳ್ಗೆಗೆ ವರ್ತಕರು ಕೈ ಜೋಡಿಸಲಿ
Team Udayavani, Sep 29, 2018, 3:21 PM IST
ಕಲಬುರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರ್ತಕರ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲದೇ ರೈತರ ಏಳ್ಗೆಗೆ ಸರ್ಕಾರದೊಂದಿಗೆ ವರ್ತಕರು ಕೈಜೋಡಿಸಬೇಕೆಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್. ಪ್ರಕಾಶ ಕಮ್ಮರಡಿ ಹೇಳಿದರು.
ನಗರದ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ ಮತ್ತು ಗುಲಬರ್ಗಾ ದಾಲ್ ಮಿಲ್ಲರ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ಎಪಿಎಂಸಿ ವರ್ತಕರ ಹಾಗೂ ರೈತರ “ಭಾವಾಂತರ ಯೋಜನೆ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಅವರು
ಮಾತನಾಡಿದರು.
ರೈತರೊಂದಿಗೆ ಸದಾ ಇರುವಂತದ್ದು ವರ್ತಕರ ವರ್ಗ. ಈ ನಿಟ್ಟಿನಲ್ಲಿ ವರ್ತಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತೂಂದು ಸುತ್ತಿನ ಸಭೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ರೈತರು ಅನೇಕ ಸಮಸ್ಯೆಗಳಿಂದ ದಿನದಿಂದ ದಿನಕ್ಕೆ ತತ್ತರಿಸುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆಯಲ್ಲಿ ರೈತ ಬೆಳೆದಂತಹ ಬೆಳೆಗಳನ್ನು ಖರೀದಿಸುತ್ತದೆ. ಸರ್ಕಾರ ನಿಗದಿ ಮಾಡುವ ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲಿ ವರ್ತಕರು ರೈತರ ಬೆಳೆಗಳನ್ನು ಖರೀದಿಸುವುದು ಮಾರುಕಟ್ಟೆಯ ಧರ್ಮವಾಗಿದೆ. ಮಾರುಕಟ್ಟೆಗೆ ಬಂದ ಅನ್ನದಾತನ ಉತ್ಪನ್ನ ಖರೀದಿಸುವ ಮೂಲಕ ರೈತರ ರಕ್ಷಣೆಗೆ ಸರ್ಕಾರದ ಜೊತೆಗೆ ವರ್ತಕರು ಕೈಜೋಡಿಸುವುದು ಅತ್ಯಗತ್ಯವಾಗಿದೆ ಎಂದರು.
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸರ್ಕಾರ 257 ಲಕ್ಷ ಕ್ವಿಂಟಲ್ ದ್ವಿದಳ ಧಾನ್ಯಗಳನ್ನು ಖರೀದಿಸಲಾಗಿದ್ದು, ಇದರಲ್ಲಿ 6 ಸಾವಿರ ರೂ. ಬೆಂಬಲ ಬೆಲೆಯಲ್ಲಿ 1.20 ಲಕ್ಷ ರೈತರಿಂದ 32 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ರಾಜ್ಯದ ಇತಿಹಾಸದಲ್ಲೇ ಇದೊಂದು ದಾಖಲೆಯಾಗಿದೆ ಎಂದರು.
ಭಾವಾಂತರ ಯೋಜನೆ ಶೀಘ್ರ ಜಾರಿ: ಬೆಂಬಲ ಬೆಲೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟವಾಗುವ ನಡುವಿನ ವ್ಯತ್ಯಾಸದ ಹಣ ರೈತರ ಬ್ಯಾಂಕ್ ಖಾತೆಗೆ ತುಂಬುವ ಕೇಂದ್ರ ಸರ್ಕಾರದ ಭಾವಾಂತರ ಯೋಜನೆ ರಾಜ್ಯದಲ್ಲಿ ಶೀಘ್ರದಲ್ಲೇ ಅನುಷ್ಠಾನಕ್ಕೆ
ತರಲಾಗುವುದು ಎಂದರು.
ಕೇಂದ್ರದಿಂದ ಹೊಸ ಫಾರ್ಮುಲಾ: ಕೇಂದ್ರ ಸರ್ಕಾರ ಎಲ್ಲ ಯೋಜನೆಗಳ ಹೊರತಾಗಿ ಕೃಷಿ ಉತ್ಪನ್ನಗಳ ಖರೀದಿಗೆ ಹೊಸ ಫಾರ್ಮುಲಾ ತಂದಿದ್ದು, ಉತ್ಪನ್ನಗಳನ್ನು ಸರ್ಕಾರ 40ರಷ್ಟು ಖರೀದಿಸಿದರೆ, ವರ್ತಕರು ಶೇ.60ರಷ್ಟು ಉತ್ಪನ್ನಗಳನ್ನು ಖರೀದಿಸಬೇಕೆಂಬುವುದಾಗಿದೆ. ಇದರ ಪ್ರಕಾರ ವರ್ತಕರು ಖರೀದಿಸುವ ಉತ್ಪನ್ನಗಳಿಗೆ ಶೇ.15ರಷ್ಟು ಕಮಿಷನ್ ಸರ್ಕಾರದಿಂದಲೇ ಸಿಗುತ್ತದೆ. ಇದಕ್ಕೆ ಯಾವುದೇ ಷರತ್ತುಗಳು ಇರುವುದಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿ, ನೇರ ಮಾರುಕಟ್ಟೆಯಿಂದ ರೈತರು ಮತ್ತು ವರ್ತಕರಿಗೂ ಅನ್ಯಾಯವಾಗುತ್ತಿದೆ. ರೈತರ ಎಲ್ಲ ಉತ್ಪನ್ನಗಳು ಮಾರುಕಟ್ಟೆಗೆ ನೇರ ಸರಬರಾಜು ಆಗಬೇಕಿದ್ದು,
ಯಾವುದೇ ಉತ್ಪನ್ನ ಮಾರುಕಟ್ಟೆ ಮೂಲಕವೇ ಮಾರಾಟವಾಗಬೇಕು. ಆಗ ಮಾತ್ರ ರೈತರ ಉತ್ಪನ್ನದ ಬಗ್ಗೆ ಸರಿಯಾದ ಲೆಕ್ಕ ಸಿಗುತ್ತದೆ ಎಂದರು.
ಆಮದಿಗೆ ಕಡಿವಾಣ ಹಾಕಬೇಕು: ವಿದೇಶಗಳಿಂದ ಬೇಳೆ ಕಾಳು ಆಮದು ಮಾಡಿಕೊಳ್ಳುತ್ತಿರುವುದು ರೈತರ ಸಮಸ್ಯೆಯ ಮೂಲ ಎಂದು ರೈತ ಮುಖಂಡ ಮಾರುತಿ ಮಾನ್ಪಡೆ ಹೇಳಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಗೌರವ ಅಧ್ಯಕ್ಷ ಬಸವರಾಜ ಜವಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ್, ಎಪಿಎಂಸಿ ಕಾರ್ಯದರ್ಶಿ ಎಂ.ಎಸ್.ರಾಜಶ್ರೀ, ಶರಣ ಬಸಪ್ಪ ಪಪ್ಪಾ, ಬಸವರಾಜ ಇಂಗಿನ್, ಸೋಮನಾಥ ಜೈನ್, ಚಿದಂಬರ ಪಾಟೀಲ್, ಶಿವಕುಮಾರ ಘಂಟಿ, ಸಿದ್ದರಾಮಪ್ಪ ಪಾಟೀಲ್, ಬಿ.ಬಿ. ಶೆಟಗಾರ, ಎಸ್.ಎಸ್. ಪಾಟೀಲ ಹಾಗೂ ಕಲಬುರಗಿ, ರಾಯಚೂರು, ಗದಗ, ಬೀದರ್, ಯಾದಗಿರಿ, ಕೊಪ್ಪಳ ಜಿಲ್ಲೆಗಳ ರೈತರು ಹಾಗೂ ವರ್ತಕರು ಪಾಲ್ಗೊಂಡಿದ್ದರು.
ದೂರದ ಬೆಟ್ಟ ಕಣ್ಣಿಗೆ ಚೆಂದ ಭಾವಾಂತರ ಯೋಜನೆ ಎನ್ನುವುದು ದೂರದ ಬೆಟ್ಟವಿದ್ದಂತೆ. ಅದು ಕಣ್ಣಿಗೆ ಚೆಂದ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಹೇಳಿದರು. ಭಾವಾಂತರ ಯೋಜನೆ ಜಾರಿಗೆ ತರಬೇಕೆಂದೇ ಒತ್ತಾಯಿಸಲು ನಡೆದ ಸಮಾವೇಶದಲ್ಲಿ ಭಾವಾಂತರ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಅವರು, ಮಧ್ಯಪ್ರದೇಶದಲ್ಲಿ ಶೇ.25ರಷ್ಟು ರೈತರಿಂದ ಮಾತ್ರ ಉತ್ಪನ್ನ
ಖರೀದಿಸಲಾಗಿದೆ. ಬೆಂಬಲ ಬೆಂಬಲ ಯೋಜನೆ ಮತ್ತು ಭಾವಾಂತರ ಯೋಜನೆಗೆ ಹೋಲಿಕೆ ಆಗೋದಿಲ್ಲ. ಈ ಯೋಜನೆ ಬಗ್ಗೆ ಸೂಕ್ತ ಅಧ್ಯಯನ ಮಾಡಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.