ಅಂಬೇಡ್ಕರ್ ಕನಸಿನ ಭಾರತ ನಿರ್ಮಿಸೋಣ: ಪೆರ್ಲ
Team Udayavani, Oct 16, 2021, 9:44 AM IST
ಕಲಬುರಗಿ: ಜಾತಿ ರಹಿತ ವರ್ಗರಹಿತ ಸಮಾಜ ಕಟ್ಟುವ ಮೂಲಕ ಸಂವಿಧಾನ ಶಿಲ್ಪಿ ಡಾ| ಬಾಬಾಸಾಹೇಬ ಅಂಬೇಡ್ಕರ್ ಕಟ್ಟ ಬಯಸಿದ ಕನಸಿನ ಪ್ರಬುದ್ಧ ಭಾರತ ನಿರ್ಮಾಣವಾಗಬೇಕು ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಡಾ| ಸದಾನಂದ ಪೆರ್ಲ ಹೇಳಿದರು.
ನಗರದ ನಾಗಮಾಣಿಕ್ಯ ಎಂ.ಎಸ್. ಡಬ್ಲ್ಯು ಕಾಲೇಜಿನಲ್ಲಿ ದೇವಿಂದ್ರಪ್ಪ ಜಿಸಿ ಸಂಗೀತ, ಸಾಹಿತ್ಯ ಕಲಾ ಸಂಸ್ಥೆ 65ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸತ್ಯವನ್ನು ಬಯಸಿ ಹುಡುಕಾಟದಲ್ಲಿ ತೊಡಗಿದ ಬುದ್ಧನ ಆದರ್ಶ ಅಳವಡಿಸಿಕೊಂಡು ಭೌದ್ಧ ಧರ್ಮ ಸ್ವೀಕರಿಸಿದ ಡಾ| ಅಂಬೇಡ್ಕರ್ ಸಂವಿಧಾನದಡಿ ಎಲ್ಲರಿಗೂ ಸಮಾನತೆಯ ಬದುಕು ಕಟ್ಟಿ ಕೊಟ್ಟಿದ್ದಾರೆ. ಆದ್ದರಿಂದ ಅಂಬೇಡ್ಕರ್ ಇಲ್ಲದ ಭಾರತ ಶೂನ್ಯ. ಸಶಕ್ತ ಸಮಾಜ ನಿರ್ಮಿಸಲು ಬುದ್ಧ, ಬಸವ, ಡಾ| ನಾರಾಯಣ ಗುರುಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ. ಈ ಮೂಲಕ ಸಮ ಸಮಾಜ ನಿರ್ಮಿಸಲು ಸಾಹಿತ್ಯ ಪರಿವರ್ತನೆ ತರಲಿ ಎಂದರು.
ಕವಿಗೋಷ್ಠಿ ಉದ್ಘಾಟಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ| ರಮೇಶ ಲಂಡನಕರ್ ಮಾತನಾಡಿ, ವೈಜ್ಞಾನಿಕ ಮತ್ತು ಮಾನವೀಯ ನೆಲೆಯಲ್ಲಿ ರೂಪಿತವಾದ ಭೌದ್ಧ ಧರ್ಮವನ್ನು ಡಾ| ಅಂಬೇಡ್ಕರ್ ಸ್ವೀಕರಿಸುವ ಮೂಲಕ ಈ ಧರ್ಮ ಮತ್ತೆ ಭಾರತದಲ್ಲಿ ನೆಲೆಯೂರಲು ಕಾರಣವಾಗಿದೆ ಎಂದು ಹೇಳಿದರು.
ಸಾಹಿತಿ ಧರ್ಮಣ್ಣ ಎಚ್ ಧನ್ನಿ, ನಿವೃತ್ತ ಪ್ರಾಚಾರ್ಯ ಈಶ್ವರ ಇಂಗಿನ, ಪ್ರಾಂಶುಪಾಲ ಮಹೇಶಕುಮಾರ ಮಾಡಗಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿದ್ಧಲಿಂಗ ಮಾಹೂರ ಹಾಗೂ ತಂಡದವರಿಂದ ಪ್ರಾರ್ಥನಾಗೀತೆ ನಡೆಯಿತು. ವಿ.ಆರ್. ಚಾಂಬಾಳ, ರೇಣುಕಾ ಶ್ರೀಕಾಂತ, ಎಂ.ಎನ್. ಸುಗಂಧಿ, ಎಂ.ಪಿ ಪ್ರಕಾಶ ಸರಸಂಬಿ, ಎಂ.ಬಿ ನಿಂಗಪ್ಪ, ಶರಣರೆಡ್ಡಿ ಎಸ್. ಕೋಡ್ಲಾ, ಡಾ| ರಾಜಶೇಖರ ಮಾಂಗ, ಕವಿತಾ ರಾಠೊಡ, ಸಿದ್ಧರಾಮ ಸರಸಂಬಿ, ಸಂಗಮ್ಮ ಧಮ್ಮೂರಕರ, ಕಾಶೀನಾಥ ಮುಖರ್ಜಿ, ಸಾವಿತ್ರಿ ಉದಯಕರ್, ವಿಜಯಲಕ್ಷ್ಮೀ ಗುತ್ತೇದಾರ, ಶಿವಶಂಕರ ಬಿಳಾಲಕರ ಹಾಗೂ ಒಟ್ಟು 16 ಕವಿಗಳು ಭಾಗವಹಿಸಿ ಸ್ವರಚಿತ ಕವನಗಳನ್ನು ವಾಚನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.