ಸಾಹಿತ್ಯ ಹೋರಾಟದ ಧ್ವನಿಯಾಗಲಿ
Team Udayavani, Dec 1, 2017, 10:36 AM IST
ವಾಡಿ: ಹೂ, ಹಣ್ಣು , ಪ್ರಕೃತಿ ಸೌಂದರ್ಯದ ಅಂದ-ಚೆಂದ ಕುರಿತು ಬರೆಯುವುದು ಸಾಹಿತ್ಯವೇ. ಅದು ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ನಮಗೆ ಬೇಕಿರುವುದು ಹೋರಾಟಕ್ಕೆ ಧ್ವನಿಯಾಗಬಲ್ಲ ಗಟ್ಟಿ ಸಾಹಿತ್ಯ ಎಂದು ಯುವ ಸಾಹಿತಿ ರೇಣುಕಾ ಹೆಳವರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕದ ವತಿಯಿಂದ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಕವಿ-ಕಾವ್ಯಧಾರೆ ವಿಶೇಷ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತ್ಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು. ಶ್ರಮಿಕರ ಹಸಿವು ಮತ್ತು ಶೋಷಿತ ಹೆಣ್ಣಿನ ನೋವುಗಳನ್ನು ಅನಾವರಣಗೊಳಿಸಬಲ್ಲ ಆಕ್ರೋಶದ ಕವನಗಳು ಕಿವಿಗಪ್ಪಳಿಸಬೇಕಿದೆ. ಆ ಮೂಲಕ ಜಿಡ್ಡುಗಟ್ಟಿದ ಸಮಾಜವನ್ನು ಬಡಿದೆಚ್ಚರಿಸಬೇಕಿದೆ ಎಂದರು.
ಹಿಂಸೆಯೇ ಪ್ರಧಾನವಾಗಿರುವ ಈ ವ್ಯವಸ್ಥೆಯಲ್ಲಿ ಸತ್ಯ ಸಾರುವ ಕಾರ್ಯದಲ್ಲಿ ನಿರತರಾಗಿದ್ದ ಎಂ.ಎಂ.ಕಲಬುರಗಿ,
ಲಿಂಗಣ್ಣ ಸತ್ಯಂಪೇಟೆ, ದಾಬೊಲ್ಕರ್, ಗೌರಿ ಲಂಕೇಶ ಅವರಂತಹ ಪ್ರಗತಿಪರ ಬರಹಗಾರರನ್ನು ಕೊಲ್ಲಲಾಗುತ್ತಿದೆ.
ಹೆದರಿ-ಬೆದರಿ ಬರೆಯಬೇಕಾದ ಪ್ರಸಂಗ ಎದುರಾಗಿದ್ದು, ಎದೆಗುಂದದೆ ಜನರ ಅಂತರಾಳ ತಟ್ಟಬಲ್ಲ ಸಾಹಿತ್ಯ ರಚನೆಗೆ
ನಾವು ಮುಂದಾಗಬೇಕಿದೆ ಎಂದರು.
ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂಬ ಕವಿ ಡಾ| ಸಿದ್ದಲಿಂಗಯ್ಯನವರ ಕಾವ್ಯ ಇಂದಿಗೂ ನಮ್ಮ ಎದೆ ತಟ್ಟುತ್ತಿದೆ. ಸಮಾಜದಲ್ಲಿ ಕ್ರೌರ್ಯ, ಹಿಂಸೆ ಜೀವಂತವಿರುವ ವರೆಗೆ ಈ ಕಾವ್ಯ ಪ್ರತಿಧ್ವನಿಸುತ್ತದೆ. ಯುವ ಕವಿಗಳಿಂದ ಇಂತಹ ಅಮರ ಸಾಹಿತ್ಯ ಹುಟ್ಟಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಕಾಶೀನಾಥ ಗುತ್ತೇದಾರ ಮಾತನಾಡಿ, ತಾಲೂಕಿನ ಬರಹಗಾರರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸವನ್ನು ಕಸಾಪ ಮಾಡುತ್ತಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಚಿತ್ತಾಪುರದಲ್ಲಿ ತಾಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅಕ್ಷರ ಜಾಗೃತಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೊಡ ಉದ್ಘಾಟಿಸಿದರು. ಸದಾಶಿವ ಕಟ್ಟಿಮನಿ ಅತಿಥಿಯಾಗಿದ್ದರು.
ಕಸಾಪ ವಲಯ ಅಧ್ಯಕ್ಷ ಖೇಮಲಿಂಗ ಬೆಳಮಗಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಶಿಕ್ಷಕ ಸಿದ್ದಲಿಂಗ ಬಾಳಿ, ಶಕುಂತಲಾ ಪೋದ್ದಾರ, ವಿಜಯಕುಮಾರ ಸಿಂಗೆ, ಶ್ರವಣಕುಮಾರ ಮೌಸಲಗಿ, ಶರಣು ಹೇರೂರ, ನಾಗೇಂದ್ರ ಜೈಗಂಗಾ, ಶೇಖಪ್ಪ ಹೇರೂರ, ವೀರಣ್ಣ ಯಾರಿ ಪಾಲ್ಗೊಂಡಿದ್ದರು.
ಕವಿಗಳಾದ ಹಣಮಂತ ಘಂಟೇಕರ, ಯಶವಂತ ಧನ್ನೇಕರ, ಬಸವರಾಜ ಹೊಸಮನಿ, ಮಲ್ಲೇಶ ನಾಟೀಕಾರ,
ರಾಜಶೇಖರ ಕಡಗನ, ಶಿವುಕುಮಾರ ಕೊಳ್ಳಿ, ಹಣಮಂತ ಶಹಾಬಾದ, ವಿಕ್ರಮ ನಿಂಬರ್ಗಾ ಮತ್ತಿತರರು ಸ್ವರಚಿತ ಕವನ ವಾಚಿಸಿದರು.
ಮಾತೋಶ್ರೀ ರಮಾಬಾಯಿ ಕನ್ಯಾ ಪ್ರೌಢಶಾಲೆ ವಿದ್ಯಾರ್ಥಿನಿಯರು ಭಾವಗೀತೆ ಹಾಡಿದರು. ಕಸಾಪ ಕೋಶಾಧ್ಯಕ್ಷ ದೇವಿಂದ್ರ ಕರದಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗೌರವ ಕಾರ್ಯದರ್ಶಿ ಚಂದ್ರು ಕರಣಿಕ ಸ್ವಾಗತಿಸಿದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು, ಭೀಮಾಶಂಕರ ಸಿಂಧೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.