ಸಾಹಿತ್ಯ ಚರ್ಚೆ-ಪುಸ್ತಕ ಸಂತೆಗೆ ಆದ್ಯತೆ: ನಿರಗುಡಿ
Team Udayavani, Oct 28, 2021, 11:18 AM IST
ವಾಡಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಚುನಾಯಿತನಾದರೆ ಕನ್ನಡ ಭವನವನ್ನು ಬಟ್ಟೆ ವ್ಯಾಪಾರದಿಂದ ಮುಕ್ತಗೊಳಿಸಿ ಸಾಹಿತ್ಯ ಚರ್ಚೆ ಮತ್ತು ಪುಸ್ತಕ ಸಂತೆ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರೊ| ಬಿ.ಎಚ್.ನಿರುಗುಡಿ ಭರವಸೆ ನೀಡಿದರು.
ಬುಧವಾರ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಕಸಾಪ ಸದಸ್ಯರ ಸಭೆಯಲ್ಲಿ ಮತಯಾಚಿಸಿ ಮಾತನಾಡಿ ಅವರು, ಸಾಹಿತ್ಯ ಪರಿಷತ್‌ಗೆ ಸಾಹಿತಿಯೇ ಅಧ್ಯಕ್ಷನಾಗಬೇಕು ಎನ್ನುವ ಕೂಗು ಈಬಾರಿ ಎಲ್ಲೆಡೆ ಕೇಳಿಬರುತ್ತಿದೆ. ಜಿಲ್ಲೆಯ ಹಿರಿಯ ಕಿರಿಯ ಬರಹಗಾರರನ್ನು ಸಂಘಟಿಸಿ ಕಸಾಪವನ್ನು ಕ್ರಿಯಶೀಲವಾಗಿ ಮಾಡಬೇಕು ಎನ್ನುವ ಮಹದಾಸೆ ಹೊಂದಿದ್ದೇನೆ. ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ ಜಿಲ್ಲಾ ಕನ್ನಡ ಭವನವನ್ನು ಉಚಿತವಾಗಿ ನೀಡಲು ಬದ್ಧನಾಗಿದ್ದೇನೆ. ಪ್ರತಿಯೊಂದು ತಾಲೂಕಿನಲ್ಲೂ ಕನ್ನಡ ಭವನಗಳ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡುತ್ತೇನೆ. ಸಾಹಿತ್ಯಾಸಕ್ತರನ್ನು ಕನ್ನಡ ಭವನದತ್ತ ಸೆಳೆಯಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಅರ್ಥಪೂರ್ಣವಾಗಿ ಸಂಘಟಿಸಲು ಆಸಕ್ತಿ ಹೊಂದಿದ್ದೇನೆ ಎಂದರು.
ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆ ಯಲ್ಲಿ ರಂಗ ಕಲಾವಿದರಿದ್ದಾರೆ. ಇವರ ಕಲೆ ಪ್ರದರ್ಶನಕ್ಕಾಗಿ ವೇದಿಕೆ ಕೊರತೆ ಎದ್ದುಕಾಣುತ್ತಿದೆ. ಬಯಲು ರಂಗಮಂದಿರಗಳ ನಿರ್ಮಾಣಕ್ಕೂ ಸರಕಾರದ ಮೇಲೆ ಒತ್ತಡ ಹೇರಲಾಗುವುದು. ಶಿಕ್ಷಕರ ಮತ್ತು ಮಕ್ಕಳ ಸಮ್ಮೇಳನಗಳ ಜತೆಗೆ ವೈದ್ಯ-ಕೃಷಿ ಸಮ್ಮೇಳನಗಳತ್ತಲೂ ಗಮನ ಹರಿಸಲಾಗುವುದು. ಶಾಲೆ ಕಾಲೇಜುಗಳಲ್ಲಿ ಕನ್ನಡದ ವಾತಾವರಣ ಸೃಷ್ಠಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಹಲವು ವಿಶಿಷ್ಟ ಸಾಹಿತ್ಯ ಚಟುವಟಿಕೆಗಳ ಕನಸು ಹೊತ್ತು ಕಸಾಪ ಚುನಾವಣೆಗೆ ಸ್ಪ ರ್ಧಿಸಿದ್ದೇನೆ. ನನ್ನ ಪರವಾಗಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರಹಗಾರರು ಬದಲಾವಣೆ ಬಯಸುತ್ತಿದ್ದಾರೆ. ಒಮ್ಮೆ ಅಧ್ಯಕ್ಷನಾಗಿ ಆಯ್ಕೆಯಾದರೆ ಮತ್ತೂಮ್ಮೆ ಸ್ಪರ್ಧೆ ಮಾಡುವುದಿಲ್ಲ ಎಂಬುದು ನನ್ನ ದೃಢ ನಿರ್ಧಾರವಾಗಿದೆ. ಕಸಾಪ ಸದಸ್ಯರು ನನಗೆ ಆರ್ಶೀವಾದ ಮಾಡುವ ಮೂಲಕ ಸಾಹಿತ್ಯ ತೇರು ಎಳೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕಸಾಪ ಕಲಬುರಗಿ ತಾಲೂಕು ಉಪಾಧ್ಯಕ್ಷ ಭೀಮಾಶಂಕರ ಎಳ ಮೇಲೆ, ಅಂಬಾರಾಯ ಕೋಣೆ, ಶರಣಗೌಡ ಪಾಟೀಲ ಪಾಳಾ, ಸಂಚಲನ ಸಾಹಿತ್ಯ ವೇದಿಕೆ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ, ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಸಿದ್ಧಯ್ಯಶಾಸ್ತ್ರೀ ನಂದೂರಮಠ, ಕಸಾಪ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಮಲ್ಲೇಶ ನಾಟೇಕರ, ವಿಕ್ರಮ ನಿಂಬರ್ಗಾ, ರವಿ ಕೋಳಕೂರ, ಶ್ರೀಶೈಲ ಪುರಾಣಿಕ, ನೂರೊಂದಯ್ಯಸ್ವಾಮಿ ಮಠಪತಿ, ಯಶ್ವಂತ ಧನ್ನೇಕರ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.