ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರ ಜೋರು
Team Udayavani, Aug 28, 2018, 11:34 AM IST
ಕಲಬುರಗಿ: ಆ. 31ರಂದು ನಡೆಯುವ ಜಿಲ್ಲೆಯ ಆರು ಪುರಸಭೆ ಹಾಗೂ ಒಂದು ನಗರಸಭೆ ಚುನಾವಣೆಗೆ ಕಾವು
ಏರತೊಡಗಿದ್ದು, ಸ್ಪರ್ಧಾ ಅಭ್ಯರ್ಥಿಗಳು ಮತದಾರನ ಒಲವು ಗೆಲ್ಲಲು ಹಲವು ನಿಟ್ಟಿನ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಜೇವರ್ಗಿಯಲ್ಲಿ ಶಾಸಕ ಡಾ| ಅಜಯಸಿಂಗ್ ಜೇವರ್ಗಿ ಪಟ್ಟಣದ ಎಲ್ಲ ವಾರ್ಡುಗಳಲ್ಲಿ ಮನೆ-ಮನೆಗೆ ತೆರಳಿ ಮತಯಾಚಿಸಿದರು. ಜೇವರ್ಗಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತಯಾಚಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಸ್ಪರ್ಧಾ ಅಭ್ಯರ್ಥಿಗಳು ಜತೆಗಿದ್ದರು.
ಅದೇ ರೀತಿ ಜೇವರ್ಗಿಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹಾಗೂ ಇತರರು ಸಹ ಮತಯಾಚಿಸಿದರು. ಜೆಡಿಎಸ್ ಮುಖಂಡ, ರೈತ ನಾಯಕ ಕೇದಾರಲಿಂಗಯ್ಯ ಹಿರೇಮಠ ಹಾಗೂ ಪಕ್ಷದ ಮುಖಂಡರು ಮತಯಾಚಿಸಿದ್ದು, ಒಟ್ಟಾರೆ ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಮೇಲ್ನೋಟಕ್ಕೆ ಕಂಡು
ಬರುತ್ತಿದೆ.
ಜಿಲ್ಲೆಯ ವಿವಿಧೆಡೆಯೂ ಶಾಸಕರು ಮತಯಾಚಿಸಿದರು. ಅಫಜಲಪುರದಲ್ಲಿ ಶಾಸಕ ಎಂ.ವೈ. ಪಾಟೀಲ ಭೀಮಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮತಯಾಚಿಸಿದರು. ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಶಹಾಬಾದ್‌ನಲ್ಲಿ ಚುನಾವಣೆ ಜಿದ್ದಾ ಜಿದ್ದಿನಿಂದ ಏರ್ಪಟ್ಟಿದೆ. ಟಿಕೆಟ್ ಅಸಮಾಧಾನದಿಂದ ಕೆಲವರು ಹಿರಿಯ ಕಾರ್ಯಕರ್ತರು ಬಿಜೆಪಿಗೆ ವಿದಾಯ
ಹೇಳಿದ್ದರಿಂದ ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಸೇಡಂ ಪುರಸಭೆಯಲ್ಲಿ ಬಿಜೆಪಿ ಆಡಳಿತ ಮುಂದುವರೆಸುವ ನಿಟ್ಟಿನಲ್ಲಿ ಪ್ರತಿಷ್ಠೆಯಾಗಿದ್ದರೆ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿನ ಸೋಲು ಈ ಚುನಾವಣೆಯಲ್ಲಿ ಪಕ್ಷವನ್ನು
ಗೆಲ್ಲಿಸುವ ಮೂಲಕ ಹಿಡಿತ ಸಾಧಿಸುವ ಛಲ ಹೊಂದಿದ್ದಾರೆ. ಒಟ್ಟಾರೆ ಹೀಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಜಿದ್ದಾ ಜಿದ್ದಿ ಎನ್ನುವಂತೆ ಕಾವು ಏರುತ್ತಿದೆ.
ಸಂತೆ-ಜಾತ್ರೆ ಮದ್ಯ ಮಾರಾಟ ನಿಷೇಧ
ಕಲಬುರಗಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಆ. 31ರಂದು ಹಾಗೂ ಮತ ಎಣಿಕೆ ಸೆ. 3ರಂದು ಸಂಬಂಧಿಸಿದ ತಾಲೂಕಿನ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಮುಕ್ತ, ಶಾಂತಿಯುತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಂತೆ-ಜಾತ್ರೆ, ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಆದೇಶ ಹೊರಡಿಸಿದ್ದಾರೆ.
ಚುನಾವಣೆ ನಡೆಯಲಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಮತದಾನ ದಿನವಾದ ಆ. 31ರಂದು ಎಲ್ಲ ತರಹದ ಸಂತೆ ಹಾಗೂ ಜಾತ್ರೆ ನಿಷೇಧಿ ಸಲಾಗಿದೆ. ಮತದಾನ ಕೇಂದ್ರ ಸ್ಥಾಪಿಸಿರುವ ಮತಗಟ್ಟೆಗಳಿಗೆ ಆ. 31 ಹಾಗೂ ಮತ ಎಣಿಕೆ ಕೇಂದ್ರಗಳಿಗೆ ಸೆ. 3ರಂದು ರಜೆ ಘೋಷಿಸಲಾಗಿದೆ.
ಮತದಾನ ಕೇಂದ್ರ ಹಾಗೂ ಮತ ಎಣಿಕೆ ಕೇಂದ್ರದ 100 ಮೀಟರ್ ವ್ಯಾಪ್ತಿಯೊಳಗೆ ಸಿಆರ್‌ಪಿಸಿ ಕಾಯ್ದೆಯಂತೆ ಚುನಾವಣೆಗೆ ಸಂಬಂಧಿಸಿದ ಮತದಾರರು ಹಾಗೂ ಸಿಬ್ಬಂದಿ ಹೊರತುಪಡಿಸಿ ಇತರರ ಪ್ರವೇಶ ನಿಷೇಧಿಸಲಾಗಿದೆ.
ಮತದಾನದ ಹಿಂದಿನ ದಿನವಾದ ಆ. 30ರಂದು ಬೆಳಗ್ಗೆ 7:00ರಿಂದ ಆ. 31ರ ಮಧ್ಯರಾತ್ರಿ ವವರೆಗೆ ಹಾಗೂ ಮತ ಎಣಿಕೆ ದಿನವಾದ ಸೆ. 3ರಂದು ಬೆಳಗ್ಗೆ 7:00ರಿಂದ ಸೆ. 4:00ರ ಬೆಳಗ್ಗೆ 7:00ರ ವರೆಗೆ ಚುನಾವಣೆ ನಡೆಯಲಿರುವ ಪ್ರದೇಶಗಳಲ್ಲಿ ಎಲ್ಲ ತರಹದ ಮದ್ಯ ಅಂಗಡಿ, ಮದ್ಯ ತಯಾರಿಕಾ ಘಟಕಗಳನ್ನು ನಗರ ಸ್ಥಳೀಯ ಸಂಸ್ಥೆ ಗಡಿಯಿಂದ 3 ಕಿಮೀ. ವ್ಯಾಪ್ತಿಯೊಳಗೆ ಪಾನ ನಿಷೇಧ ಎಂದು ಘೋಷಿಸಲಾಗಿದೆ.
ಆ. 29ರಂದು ಬೆಳಗ್ಗೆ 7:00ರ ನಂತರ ಚುನಾವಣಾ ನಡೆಯಲಿರುವ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಸಾರ್ವಜನಿಕ ಸಭೆ ಸಮಾರಂಭ ಹಾಗೂ ಬಹಿರಂಗ ಪ್ರಚಾರಕ್ಕೆ ನಿಷೇ ಧಿಸಲಾಗಿದೆ ಎಂದು ಅವರು ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್-ಬಿಜೆಪಿ ಪ್ರಚಾರಕ್ಕೆ ಚಾಲನೆ
ಶಹಾಬಾದ: ನಗರಸಭೆ ಚುನಾವಣೆ ನಿಮಿತ್ತ ನಗರದಲ್ಲಿ ಸೋಮವಾರ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು. ಅಲ್ಲದೇ ಕಾರ್ಯಕರ್ತರ ಸಭೆ ನಡೆಸಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಯಿತು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ ಅವರು ಬಿಜೆಪಿ ಅಭ್ಯರ್ಥಿಗಳಾದ ವಾರ್ಡ್ ನಂ. 4ರ ಅಮರ ಶರಣಪ್ಪ ಹದನೂರ, ವಾರ್ಡ್ ನಂ. 5ರ ದುರ್ಗಪ್ಪ ಪವಾರ, ವಾರ್ಡ್ ನಂ. 6ರ ಶಾಂತಾಬಾಯಿ ದೇವೆಂದ್ರಪ್ಪ ಯಲಗೋಡಕರ್ ಪರವಾಗಿ ಮನೆ ಮನೆಗೆ ತೆರಳಿ ಮತದಾರರಿಗೆ ಕರಪತ್ರ ನೀಡಿ ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಮುಖಂಡ ಶರಣಪ್ಪ ಹದನೂರ, ದುರ್ಗಪ್ಪ ಪವಾರ, ಅಮರ ಶರಣಪ್ಪ ಹದನೂರ, ಶಾಂತಾಬಾಯಿ ದೇವೇಂದ್ರಪ್ಪ ಯಲಗೋಡಕರ್, ಗಿರಿರಾಜ ಪವಾರ, ಸಾಯಿಬಣ್ಣ ಬೆಳಗುಂಪಿ, ದೇವದಾಸ ಜಾಧವ, ಸಂಜಯ ವಿಠಕರ್, ತಿಪ್ಪಣ್ಣ ಕಣಸೂರ, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿಗಳಾದ ವಾರ್ಡ್ ನಂ. 5ರ ರವಿಕುಮಾರ ಈರಣ್ಣ ಮೇಸ್ತ್ರಿ, ವಾರ್ಡ್ ನಂ.6ರ ಚಂಪಾಬಾಯಿ ರಾಜು ಮೇಸ್ತ್ರಿ, ವಾರ್ಡ್ ನಂ. 7ರ ಲಕ್ಷ್ಮೀಬಾಯಿ ವೆಂಕಟೇಶ ಕುಸಾಳೆ, ವಾರ್ಡ್ ನಂ. 9ರ ಲಲಿತಾಬಾಯಿ ಗಿರಿಸ್ವಾಮಿ ವಾರ್ಡ್ ನಂ. 10ರ ಪೀರಮ್ಮ ಬಸಲಿಂಗಪ್ಪ ಪರವಾಗಿ ಮತದಾರರ ಮನೆಗೆ ತೆರಳಿ ಮತಯಾಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ್, ನಿಂಗಣ್ಣ ದೇವಕರ್, ರಾಜು ಮೇಸ್ತ್ರಿ, ಕಿರಣ ಕೋರೆ, ಅನ್ವರ್ ಪಾಶಾ, ಅಜೀಮ್ ಸೇಠ, ಹಾಷಮ್ ಖಾನ್, ಇಕ್ಬಾಲ್ ಸಾಹೇಬ, ಶಂಕರ ಕುಸಾಳೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.