ವಾಡಿಯಲ್ಲಿ ಲಾಕ್‌ಡೌನ್: ವ್ಯಾಪಾರಿಗಳ ಪರದಾಟ
Team Udayavani, Jul 15, 2020, 10:42 AM IST
ವಾಡಿ: ಜಿಲ್ಲಾಡಳಿತ ಘೋಷಿಸಿದ ಲಾಕ್‌ಡೌನ್ ಆದೇಶ ಸಿಮೆಂಟ್ ನಗರಿಯ ಜನರಲ್ಲಿ ಗೊಂದಲ ಉಂಟುಮಾಡಿದ್ದರಿಂದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಪರದಾಡಿದ ಪ್ರಸಂಗ ನಡೆಯಿತು.
ಪತ್ರಿಕೆಗಳಲ್ಲಿ ಜು.14 ಸಂಜೆ 8 ರಿಂದ ಲಾಕ್ ಡೌನ್ ಜಾರಿಯಾಗಲಿದೆ ಎಂದು ಪ್ರಕಟವಾಗಿದ್ದರೆ, ಪೊಲೀಸರು ಮತ್ತು ಪುರಸಭೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯೇ ನಗರದ ಅಂಗಡಿಗಳನ್ನು ಬಂದ್ ಮಾಡಿಸಲು ಮುಂದಾದ ಪ್ರಸಂಗ ನಡೆಯಿತು. ಇದರಿಂದ ಹೋಟೆಲ್, ಖಾನಾವಳಿ, ತರಕಾರಿ, ಕಿರಾಣಿ, ಸಿಮೆಂಟ್ ಅಂಗಡಿಗಳು ಸೇರಿದಂತೆ ಇತರ ವ್ಯಾಪಾರಿಗಳು ಗೊಂದಲಕ್ಕೆ ಇಡಾದರು. ಲಾಕ್‌ಡೌನ್ ಆದೇಶ ಸರಿಯಾಗಿ ಅರ್ಥವಾಗದ ಕಾರಣ ಮಂಗಳವಾರ ಪಟ್ಟಣದಲ್ಲಿ ಸಹವಾಗಿ ವ್ಯಾಪಾರ, ವಹಿವಾಟು ಶುರುವಾಗಿತ್ತು. ಲಾಟಿ ಹಿಡಿದು ಬಂದ ಪೊಲೀಸರು ವ್ಯಾಪಾರಾ ಸ್ಥಗಿತಗೊಳಿಸುವಂತೆ ತಿಳಿಸಿದರು.
ಪೌರಕಾರ್ಮಿಕರು ಧ್ವನಿವರ್ಧಕದ ಮೂಲಕ ಅಂಗಡಿಗಳು ಬಂದ್ ಮಾಡುವಂತೆ ಪ್ರಚಾರ ನಡೆಸಿದರು. ಇದು ವ್ಯಾಪಾರಿಗಳು ಕೆರಳುವಂತೆ ಮಾಡಿತು. ಸೋಮವಾರವೇ ನಮಗೆ ಮಾಹಿತಿ ನೀಡಿದ್ದರೆ ಮಂಗಳವಾರ ಅಂಗಡಿ ತೆರೆಯುತ್ತಿರಲಿಲ್ಲ. ಆಹಾರ ಪದಾರ್ಥಗಳು ಸಿದ್ಧಪಡಿಸಿದ ಬಳಿಕ ಬಂದ್ ಎಂದರೆ ನಷ್ಟ ಭರಿಸುವವರು ಯಾರು ಎಂದು ಪ್ರಶ್ನಿಸಿದರು. ತರಕಾರಿ, ಹಣ್ಣು, ಹಾಲು, ಕಿರಾಣಿ, ಔಷಧ ಅಂಗಡಿ ಹಾಗೂ ಆಸ್ಪತ್ರೆಗಳಿಗೆ ಲಾಕ್‌ಡೌನ್ ನಿಯಮ ಅನ್ವಹಿಸುವುದಿಲ್ಲ. ಹೋಟೆಲ್, ಮಾಂಸ ವ್ಯಾಪಾರ ಸೇರಿದಂತೆ ಇತರ ಎಲ್ಲಾ ವ್ಯಾಪಾರಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ. ಖಾನಾವಳಿಗಳಿಂದ ಪಾರ್ಸಲ್ ವಿತರಣೆಗೆ ಅವಕಾಶವಿದೆ.
ಗುರುವಾರದ ವಾರದ ಸಂತೆ ಇರುವುದಿಲ್ಲ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರಿ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.