ಲಾಕ್ ಸಡಿಲಿಕೆ : ಖರೀದಿಗೆ ಜನಸಾಗರ
Team Udayavani, Jun 1, 2021, 6:53 PM IST
ಕಲಬುರಗಿ: ಕಳೆದ ಗುರುವಾರದಿಂದ ನಾಲ್ಕು ದಿನಗಳ ಕಾಲ ಬಹುತೇಕ ಮನೆಯಲ್ಲೇ ಲಾಕ್ ಆಗಿದ್ದ ಜಿಲ್ಲೆಯ ಜನರು ಸೋಮವಾರದಿಂದ ಬೆಳಗ್ಗೆ ಸಡಿಲಿಕೆ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆ ಪ್ರದೇಶಗಳಿಗೆ ಧಾವಿಸಿ ಬಂದರು. ಕೊರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಗುರುವಾರದಿಂದ ರವಿವಾರದವರೆಗೆ ಸಂಪೂರ್ಣ ಲಾಕ್‌ಡೌನ್ ಹೇರಿತ್ತು.
ರವಿವಾರ ಬೆಳಗ್ಗೆ 6 ಗಂಟೆಗೆ ಕಠಿಣ ನಿರ್ಬಂಧಗಳು ತೆರವಾಗಿದೆ. ತರಕಾರಿ, ದಿನಸಿ ವಸ್ತುಗಳು ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೆ 4 ಗಂಟೆಗಳ ಅವಕಾಶ ದೊರೆತಿದೆ. ಹೀಗಾಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿ ಬೆಳಗ್ಗೆಯೇ ಜನ ಜಂಗುಳಿ ಸೇರಿತ್ತು. ತರಕಾರಿ ಮಾರುಕಟ್ಟೆ, ಕಿರಾಣಾ ಬಜಾರ್ ಸೇರಿ ಸಂಪೂರ್ಣ ಸೂಪರ್ ಮಾರ್ಕೆಟ್ ಜನರಿಂದಲೇ ತುಂಬಿತ್ತು. ದೈಹಿಕ ಅಂತರವೂ ಮರೆತು ಖರೀದಿಯಲ್ಲಿ ತೊಡಗಿದ್ದರು. ಅಲ್ಲದೇ, ಮಾರುಕಟ್ಟೆಯ ರಸ್ತೆಯುದ್ದಕ್ಕೂ ವಾಹನಗಳ ಸಂಚಾರ ಮತ್ತು ಜನರ ಓಡಾಟ ಜೋರಾಗಿಯೇ ಕಂಡು ಬಂತು.
ನಾಲ್ಕು ದಿನಗಳ ನಂತರ ಏಕಾಏಕಿ ಖರೀದಿಗೆ ಬಂದಿದ್ದರಿಂದ ಎಲ್ಲೆ ನೋಡಿದರೂ ಜನ ಸಂದಣಿ ಮತ್ತು ವಾಹನ ದಟ್ಟಣೆ ಹೆಚ್ಚಾಗಿತ್ತು. ಅದನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. 10 ಗಂಟೆ ನಂತರ ಪೊಲೀಸರು ಸಂಚರಿಸಿ ಅಂಗಡಿಗಳನ್ನು ಮುಚ್ಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.