ಮಾನ್ಯತೆ ಪಡೆಯದ ಶಾಲೆಗೆ ಬೀಗ
Team Udayavani, Aug 3, 2018, 10:43 AM IST
ಶಹಾಬಾದ: ಸರ್ಕಾರದ ಮಾನ್ಯತೆ ಪಡೆಯದೆ ಅನಧಿಕೃತವಾಗಿ ನಡೆಸುತ್ತಿರುವ ನಗರದ ಮಡ್ಡಿ ಬಡಾವಣೆಯಲ್ಲಿರುವ ಶಹಾಬಾದ ಶಿಕ್ಷಣ ಸಂಸ್ಥೆ (ಎಸ್‌ಇಎಸ್) ಶಾಲೆಯನ್ನು ಡಿಡಿಪಿಐ ಆದೇಶದ ಮೇರೆಗೆ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಗುರುವಾರ ಶಾಲೆಗೆ ಬೀಗ ಜಡಿದರು.
ನೇಕ ವರ್ಷಗಳಿಂದ ನಗರದ ಮಡ್ಡಿ ಬಡಾವಣೆಯಲ್ಲಿರುವ ಎಸ್‌ಇಎಸ್ ಶಿಕ್ಷಣ ಸಂಸ್ಥೆ ಸರ್ಕಾರದ ಮಾನ್ಯತೆ ಪಡೆಯದೆ
ಶಾಲೆಯನ್ನು ನಡೆಸುತ್ತಿತ್ತು. ಈ ಹಿಂದೆ ಅನೇಕ ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರ್ಕಾರದಿಂದ ಮಾನ್ಯತೆ ತೆಗೆದುಕೊಳ್ಳುವಂತೆ ತಾಕೀತು ಮಾಡಿದ್ದರು.
ಮಾನ್ಯತೆ ತೆಗದುಕೋಳದಿದ್ದಾಗ ನೋಟಿಸ್ ಕೂಡ ನೀಡಲಾಗಿದೆ.ಆದರೂ ಅಲ್ಲಿನ ಆಡಳಿತ ಮಂಡಳಿ ಯಾವುದಕ್ಕೂ ಸ್ಪಂದಿಸದ ಕಾರಣ, ಮಕ್ಕಳ ಹಿತ ದೃಷ್ಟಿಯಿಂದ ಡಿಡಿಪಿಐ ಆದೇಶದ ಮೇರೆಗೆ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಅವರು ಸಿಆರ್‌ಪಿ ಶಿವಪುತ್ರ ಕರಣಿಕ್, ಪಿಎಸ್‌ಐ ಚಂದ್ರಕಾಂತ ಮಕಾಲೆ ಹಾಗೂ ಸಿಬ್ಬಂದಿ ಸತೀಶ
ಸಮ್ಮುಖದಲ್ಲಿ ಎಸ್‌ಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಿಗೆ ಬೇಟಿ ಮಾಡಿ, ಆದೇಶದ ಪ್ರತಿ ನೀಡಿದರು. ನಂತರ ಎಸ್‌ಇಎಸ್ ಶಾಲೆಗೆ ಬೀಗ ಜಡಿದು ಮುಚ್ಚಿದ್ದಾರೆ.
ಈ ಕುರಿತು ಮಾತನಾಡಿದ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ, ಇಲ್ಲಿನ ಶಹಾಬಾದ ಶಿಕ್ಷಣ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಸರ್ಕಾರದಿಂದ ಮಾನ್ಯತೆ ಪಡೆಯದೇ ಅನಧಿಕೃತವಾಗಿ ಶಾಲೆ ನಡೆಸುತ್ತಾ ಬಂದಿತ್ತು. ಡಿಡಿಪಿಐ ಆದೇಶದ ಮೇರೆಗೆ ಅದನ್ನು ಮುಚ್ಚಲಾಗಿದೆ. ಸರ್ಕಾರದಿಂದ ಮಾನ್ಯತೆ ಪಡೆಯದ ಈ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳ ಭವಿಷ್ಯ ತೊಡಕಾಗಬಹುದು.ಆದ್ದರಿಂದ ಪಾಲಕರು ತಮ್ಮ ಮಕ್ಕಳ ಹಿತದೃಷ್ಟಿಯಿಂದ ಯಾವುದೇ ಶಾಲೆಗೆ ದಾಖಲಾತಿ ಪಡೆಯಬಹುದು.ಅದು ಕನ್ನಡ ಮಾಧ್ಯಮ ಅಥವಾ ಆಂಗ್ಲ ಮಾಧ್ಯಮ ಇರಬಹುದು.ಅದಕ್ಕೆ ಇಲಾಖೆಯಿಂದ ಅನುಮತಿ ನೀಡಲಾಗುವುದು. ಈ ಶಾಲೆಗೆ ಸಂಬಧಪಟ್ಟ ಎಲ್ಲಾ ದಾಖಲೆಗಳನ್ನು ಸಮೀಪದ ಅಪ್ಪರ ಮಡ್ಡಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.