![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jul 30, 2024, 8:09 AM IST
ಕಲಬುರಗಿ: ಕಡತಗಳಿಗೆ ಸಿಬ್ಬಂದಿಯಿಂದಲೇ ಹಣ ಪಡೆಯುತ್ತಿದ್ದ ಇಲ್ಲಿನ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ಹಾಗೂ ಓರ್ವ ಮಧ್ಯವರ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಭೂ ದಾಖಲಾತಿಗಳ ಕಡತಗಳಿಗೆ ಸಹಿ ಹಾಕಲು ಜತೆಗೆ ನಗರದ ಬ್ರಹ್ಮಪುರ ಸರ್ವೆ ನಂಬರ್ ವೊಂದರ 25 ಎಕರೆ ಗುಂಟೆ ಜಮೀನಿನ ಪೋಡಿ ಮಾಡಲು 3. 50 ಲಕ್ಷ ರೂ ಬೇಡಿಕೆ ಇಟ್ಟು ಅದರಲ್ಲಿ 1.50 ಲಕ್ಷ ರೂ ಪಡೆಯುತ್ತಿದ್ದ ಜಿಲ್ಲಾ ಭೂ ದಾಖಲೆಗಳ ಮತ್ತು ಸರ್ವೆ ಉಪನಿರ್ದೇಶಕ ಪ್ರವೀಣ ಜಾಧವ್ ಹಾಗೂ ಮಧ್ಯವರ್ತಿ ಶರಣಗೌಡ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಭೂದಾಖಲೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಂದಲೇ ಪ್ರತಿಯೊಂದು ಕಾರ್ಯಕ್ಕೂ ರಾಜಾರೋಷವಾಗಿ ಹಣದ ಬೇಡಿಕೆ ಇಡುತ್ತಿರುವುದು ವ್ಯಾಪಕವಾಗಿ ಕೇಳಿ ಬಂದಿತ್ತು. ಕೊನೆಗೂ ಲೋಕಾಯುಕ್ತ ಪೊಲೀಸ್ ರ ಬಲೆಗೆ ಸಿಕ್ಕಿ ಬಂಧನವಾಗಿದ್ದಾರೆ.
ಇಲಾಖಾ ಸಿಬ್ಬಂದಿಯೇ ದೂರು: ಅಧಿಕಾರಿಗಳ ಭೃಷ್ಟಾಚಾರ ದಿಂದ ಬೇಸತ್ತು ಇಲಾಖಾ ಸಿಬ್ಬಂದಿಯೇ ದೂರು ಸಲ್ಲಿಸಿದ್ದು, ಇಲಾಖೆಯ ಭೂಮಾಪಕ ರೇವಣಸಿದ್ದ ಮೂಲಗೆ ಅವರೇ ರೋಸಿ ಹೋಗಿ ಲೋಕಾಯುಕ್ತ ಪೊಲೀಸ್ ರಿಗೆ ದೂರು ಸಲ್ಲಿಸಿದ್ದಾರೆ.
ಸಿಬ್ಬಂದಿಗಳಿಗೆನೀವು ಏನಾದರೂ ತಪ್ಪು ಮಾಡಿದರೆ ಸಣ್ಣಪುಟ್ಟ ವಿಷಯದಲ್ಲಿ ನಿಮಗೆ ಅಮಾನತು ಮಾಡುತ್ತೇನೆ ಅಂತ ಹೇಳಿ ಮಾನಸಿಕ ಹಿಂಸೆ ನೀಡುತ್ತಿದ್ದ. ಪ್ರತಿಯೊಂದು ಕಡೆತಕ್ಕೆ ಹಣ ಕೊಡಬೇಕೆಂದು ಹೇಳುತ್ತಿದ್ದ ಡಿಡಿಎಲ್ ಆರ್ ಜಾಧವ್ ಕೊನೆಗೂ ಪ್ರಕರಣವೊಂದರಲ್ಲಿ ಮೂರುವರೆ ಲಕ್ಷ ರೂ. ಬೇಡಿಕೆಯಿಟ್ಟು 1.50 ಲಕ್ಷ ರೂ ಪಡೆಯುತ್ತಿದ್ದಾಗ ಖೆಡ್ಡಾ ತೊಡಲಾಗಿದೆ.
ಲೋಕಾಯುಕ್ತ ಎಸ್ ಪಿ ಜಾನ ಆಂಟೋನಿ ಮಾರ್ಗದರ್ಶನ ದಲ್ಲಿ ಡಿಎಸ್ಪಿ ಗೀತಾ ಬೇನಾಳ, ಮಂಜುನಾಥ, ಇನ್ಸಪೆಕ್ಟರ್ ರಾಜಶೇಖರ ಹಳಗೋಧಿ ಸೋಮವಾರ ಮಧ್ಯಾಹ್ನ ದಾಳಿ ನಡೆಸಿ ಮಧ್ಯರಾತ್ರಿವರೆಗೂ ಪಂಚನಾಮೆ ನಡೆಸಿದ್ದು, ತನಿಖಾ ಕಾರ್ಯ ನಡೆಯುತ್ತಿದೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.