ಸಾಂಗ್ಲಿ ಬಳಿ ಲಾರಿ ಪಲ್ಟಿ: ರಾಜ್ಯದ 10 ಕಾರ್ಮಿಕರ ಸಾವು
Team Udayavani, Oct 22, 2017, 6:40 AM IST
ಸಿಂದಗಿ/ಚಿಕ್ಕೋಡಿ: ಮಹಾರಾಷ್ಟ್ರದ ಸಾಂಗ್ಲಿಯ ತಾಸಗಾಂವ ಹತ್ತಿರ ಹಾಸು ಕಲ್ಲಿನ ಲಾರಿ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜ್ಯದ ಸಿಂದಗಿ, ಕಲಬುರ್ಗಿ ಮತ್ತು ಬೀದರ್ ಮೂಲದ 10 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 12 ಮಂದಿಗೆ ಗಂಭೀರ ಗಾಯಗಳಾದ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.
ಮೃತರನ್ನು ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದ ನಿಸಾರಸಾಬ ಅಂಕಲಗಿ (37), ಪತ್ನಿ ಕಮರುಲಬಿ ನಿಸ್ಸಾರಸಾಬ ಅಂಕಲಗಿ (35), ಮಗಳು ಚಾಂದನಿ (12), ಭೀಮರಾಯ ಅಪ್ಪಣ್ಣ ಮಣೂರ (60), ಪತ್ನಿ ಅವ್ವಾಬಾಯಿ ಭೀಮರಾಯ ಮಣೂರ (55), ಮಗ ಅಪ್ಪಣ್ಣ ಭೀಮರಾಯ (36) ಮಂಗಳೂರು ಗ್ರಾಮದ ಸಂಗವ್ವ ಸಿದ್ದಪ್ಪ ಕೊಗನೂರ (70), ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಣಮೇಶ್ವರ ಗ್ರಾಮದ ಶ್ರೀಮಂತಗೌಡ ಗೋಲ್ಲಾಳಪ್ಪಗೌಡ ಬಿರಾದಾರ (55), ಇಂಡಿ ತಾಲೂಕಿನ ಹತ್ತರಕಿ ಗ್ರಾಮದ ಬಕೀರ ರಾಯಪ್ಪ ರಾಠೊಡ (50), ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ರಾಮತೀರ್ಥವಾಡಿ ಗ್ರಾಮದ ಈರವ್ವ ಮಹಾದೇವಿ ದಂಡಗೂಲಿ (45) ಎಂದು ಗುರುತಿಸಲಾಗಿದೆ.
ನಸುಕಿನ ಜಾವ ಮಂಜು ಆವರಿಸಿದ್ದರಿಂದ ಸಾಂಗ್ಲಿ ಜಿಲ್ಲೆಯ ತಾಸಗಾಂವ ಕೌಟೆಮಹಾಕಾಳ ಬಳಿ ಸಿಂದಗಿ ಮೂಲದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಹಾಸು ಕಲ್ಲುಗಳು ಕಾರ್ಮಿಕರ ಮೇಲೆ ಬಿದ್ದಿದೆ. ಲಾರಿಯಲ್ಲಿದ್ದ 22 ಜನರಲ್ಲಿ 12 ಜನರು ಗಾಯಗೊಂಡಿದ್ದು, ಸಾಂಗ್ಲಿ ಮತ್ತು ಮಿರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷಿ ಕಾರ್ಮಿಕರು ಮಹಾರಾಷ್ಟ್ರದ ಸತಾರಾ ಮತ್ತು ಕರಾಡದಲ್ಲಿನ ಶುಂಠಿ ಬೆಳೆ ಕಟಾವು ಮಾಡಲು ಹೊರಟಿದ್ದರು ಎನ್ನಲಾಗಿದೆ.
ಹಬ್ಬ ಮುಗಿಸಿ ಹೊರಟಿದ್ದರು!: ದೀಪಾವಳಿ ನಿಮಿತ್ತ ತಮ್ಮ ಹಳ್ಳಿಗೆ ಆಗಮಿಸಿ ಹಬ್ಬ ಮುಗಿಸಿಕೊಂಡು ಶುಕ್ರವಾರ ರಾತ್ರಿ ಹಾಸು ಕಲ್ಲು ತುಂಬಿದ ಲಾರಿಯಲ್ಲಿ ಕರಾಡಕ್ಕೆ ಮರಳುತ್ತಿದ್ದರು. ಮಹಾರಾಷ್ಟ್ರದಲ್ಲಿ 4 ದಿನಗಳಿಂದ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ನಡೆದಿದ್ದರಿಂದ ಮಹಾರಾಷ್ಟ್ರದ ಬಸ್‌ಗಳು ರಾಜ್ಯಕ್ಕೆ ಸಂಚಾರ ಸ್ಥಗಿತಗೊಳಿಸಿದ್ದವು. ಇದರಿಂದ ಇವರೆಲ್ಲರೂ ಲಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಕುರಿತು ತಾಜಗಾವ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.