ಮಹಾಕಾವ್ಯದಲ್ಲಿ ಮೂರು ಸಂಸ್ಕೃತಿ ಅನಾವರಣ
Team Udayavani, Oct 21, 2021, 10:00 AM IST
ಕಲಬುರಗಿ: ಮಹರ್ಷಿ ವಾಲ್ಮೀಕಿಯ “ರಾಮಾಯಣ’ ಮಹಾಕಾವ್ಯ ಮೂರು ಸಂಸ್ಕೃತಿಗಳ ಅನಾವರಣ ಒಳಗೊಂಡಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ| ರಂಗರಾಜ ವನದುರ್ಗ ಹೇಳಿದರು.
ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಕವಿ ವಾಲ್ಮೀಕಿ ರಚಿಸಿರುವ “ರಾಮಾಯಣ’ ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ನಿಲ್ಲುತ್ತದೆ. ಈ ಮಹಾಕಾವ್ಯದಲ್ಲಿ ಅಯೋಧ್ಯೆ ಮೂಲಕ ನಾಡ ಸಂಸ್ಕೃತಿ, ಕಿಷ್ಕಿಂದೆ ಮೂಲಕ ಕಾಡಿನ ಸಂಸ್ಕೃತಿ ಹಾಗೂ ಲಂಕೆ ಮೂಲಕ ದ್ವೀಪ ಸಂಸ್ಕೃತಿ ತೋರಿಸಿದ್ದಾರೆ ಎಂದರು.
ಕಾಡಿನಿಂದ ನಾಡಿಗೆ ನಡೆದ ಪಯಣವೇ ವಾಲ್ಮೀಕಿ ವಿಶೇಷತೆ. ಇವರ ಬೆನ್ನ ಹಿಂದಿನ ಬದುಕು ಕಾಡಾದರೆ, ಕಣ್ಣಮುಂದಿನ ಬೆಳಕು ನಾಡಾಗಿದೆ. ನಾಡು ಮೆಚ್ಚುವಂತೆ ನುಡಿದ ಮಹಾಕಾವ್ಯ ವಾಲ್ಮೀಕಿ ರಚಿತ ರಾಮಾಯಣವಾಗಿದೆ. ರಾಮನ ಮೂಲಕ ನಾಡನ್ನು, ಹನುಮನ ಮೂಲಕ ಕಾಡನ್ನು, ರಾವಣನ ಮೂಲಕ ಲಂಕೆ ನೋಡಲು ಸಂದೇಶ ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ದಯಾನಂದ ಅಗಸರ ಮಾತನಾಡಿ, ಮಹಾ ಋಷಿ ವಾಲ್ಮೀಕಿ ವಿಶ್ವದ ಅಗ್ರಗಣ್ಯ ದಾರ್ಶನಿಕರು ಹಾಗೂ ಮಹಾಕವಿಗಳಲ್ಲಿ ಒಬ್ಬರಾಗಿದ್ದಾರೆ. ವಾಲ್ಮೀಕಿ ರಚಿಸಿದ “ರಾಮಾಯಣ’ ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ ಎಂದರು.
ಮಹರ್ಷಿ ವಾಲ್ಮೀಕಿ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನಾ ಪೀಠದ ನಿರ್ದೇಶಕ ಡಾ| ನಿಂಗಣ್ಣ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಂಡಿಕೇಟ್ ಸದಸ್ಯ ಡಾ| ಸಂಪತ್‌ಕುಮಾರ ಲೋಯಾ, ವಿದ್ಯಾವಿಷಯಕ ಪರಿಷತ್ ಸದಸ್ಯ ರಾಜೇಂದ್ರ ಕಗ್ಗನಮಡಿ, ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ಮೌಲ್ಯಮಾಪನ ಕುಲಸಚಿವ ಪ್ರೊ| ಸೋನಾರ ನಂದಪ್ಪ, ವಿತ್ತಾ ಧಿಕಾರಿ ಪ್ರೊ| ಬಿ.ವಿಜಯ, ಪ್ರದೇಶ ವಾಲ್ಮೀಕಿ ನಾಯಕರ ಸಂಘದ ಜಿಲ್ಲಾಧ್ಯಕ್ಷ ಶರಣು ಸುಬೇದಾರ, ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಮಹಾನಪ್ಪ ನಾಯಕ ದೊರೆ, ನಂದಕುಮಾರ ಪಾಟೀಲ, ಪ್ರೊ| ಬಸವರಾಜ ಸಣ್ಣಕ್ಕಿ, ಪ್ರೊ| ಕೆ.ಲಿಂಗಪ್ಪ, ಪ್ರೊ| ಎಸ್.ಎಂ.ಮೂಲಗೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Karkala; ಕೋರ್ಟ್‌ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.