ಮಲಬಾರ್ ಗೋಲ್ಡ್ ನಲ್ಲಿ ಲಕ್ಕಿ ಕೂಪನ್ ಡ್ರಾ
Team Udayavani, Mar 19, 2017, 2:46 PM IST
ಕಲಬುರಗಿ: ವಿಶ್ವವಿಖ್ಯಾತ ಚಿನ್ನಾಭರಣ ಸಂಸ್ಥೆಯಾದ ಮಲಬಾರ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಹಮ್ಮಿಕೊಂಡಿರುವ ಮಲಬಾರ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಫೆಸ್ಟಿವಲ್ 7ನೇ ವಾರದ ಲಕ್ಕಿ ಕೂಪನ್ ಡ್ರಾ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಳಿಗೆಯಲ್ಲಿ ನಡೆಯಿತು.
ಜಿ.ಪಂ.ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಲಕ್ಕಿ ಡ್ರಾ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಲಬಾರ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತನ್ನ ಪ್ರಾಮಾಣಿಕ ಸೇವೆ ಪರಿಶುದ್ದ ಚಿನ್ನಾಭರಣ ಗ್ರಾಹಕರ ಸ್ನೇಹಿ ಸಂಸ್ಥೆಯಾಗಿದ್ದು ಒಂಭತ್ತು ರಾಷ್ಟ್ರಗಳಲ್ಲಿ 172 ಶಾಖೆಗಳನ್ನು ಹೊಂದಿದ ಅತ್ಯುನ್ನತ ಸಂಸ್ಥೆಯಾಗಿದೆ.
ವಿಶೇಷ ಆನ್‌ಲಾಯಿನ್ ಮೂಲಕ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಮಾಡುವ ಮೂಲಕ ತನ್ನ ಪಾರದರ್ಶಕ ಸೇವೆಯನ್ನು ತೊರಿಸುತ್ತಿದ್ದು, ಇದನ್ನೇ ಮುಂದುವರಿಸಿ ಇನ್ನಷ್ಟು ಎತ್ತರಕ್ಕೆ ಸಂಸ್ಥೆ ಬೆಳೆಯಲಿ ಎಂದು ಶುಭಕೋರಿದರು. 7ನೇ ವಾರದ ಲಕ್ಕಿ ಡ್ರಾ ವಿಜೇತರಾಗಿ ಹುಬ್ಬಳ್ಳಿಯ ಗ್ರಾಹಕರಾದ ಡಾ.ಪೂಜಾ ಬಿ. ಕೆಲಗಾರ ಆಗಿದ್ದಾರೆ.
ಇವರಿಗೆ ನೂರು ಗ್ರಾಂ ಚಿನ್ನದ ಬಿಸ್ಕೇಟ್ ನೀಡಲಾಗುವುದು (ಕೂಪನ್ ಸಂಖ್ಯೆ:215234) ಮಲಬಾರ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಮಾತನಾಡಿದ ವಿಬಿನ್ ಬಿ ನಡುಮಲಾ, ಈ ಉತ್ಸವವು ಜ.13 ರಿಂದ ಆರಂಭವಾಗಿದ್ದು ಮಾ.10 ರವರೆಗೆ ಗ್ರಾಹಕರಿಗಾಗಿ ತೆರೆದಿತ್ತು.
ಉತ್ಸವದಲ್ಲಿ ಪ್ರತಿ ಖರೀದಿ ಜೊತೆಗೆ ಕಡಿಮೆ ದರದಲ್ಲಿ ಗ್ರಾಹಕರಿಗೆ ಚಿನ್ನಾಭರಣ ದೊರಕುವುದಲ್ಲದೆ ಪ್ರತಿ ಖರೀದಿಯ ಜೊತೆ ಖಚಿತ ಉಡುಗೊರೆಗಳು ಗ್ರಾಹಕರಿಗೆ ಸಿಕ್ಕಿದೆ. ಹಾಗೆಯೇ ಪ್ರತಿ 20 ಸಾವಿರ ರೂ. ಖರೀದಿ ಜೊತೆಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್ ನೀಡಲಾಯಿತು.
ಗ್ರಾಹಕರು ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು. ಪ್ರತಿ ವಾರ ಒಬ್ಬ ಲಕ್ಕಿ ಗ್ರಾಹಕರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ವಿಜೇತ ಗ್ರಾಹಕರಿಗೆ 100 ಗ್ರಾಂ ಚಿನ್ನದ ಬಿಸ್ಕೇಟ್ ನೀಡಲಾಗುವುದು ಎಂದು ಶಾಖೆಯ ಮುಖ್ಯಸ್ಥರಾದ ವಿಬಿನ್ ನಡುಮಲಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.