‘INDIA’ ಒಕ್ಕೂಟದ ಜತೆ ನಿರಂತರ ಸಂಪರ್ಕ, ನಿಗಾ ವಹಿಸಲು ತಂಡ ರಚನೆ: ಖರ್ಗೆ ಹೇಳಿಕೆ
Team Udayavani, Feb 21, 2024, 1:21 PM IST
ಕಲಬುರಗಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವೂ ಸಿದ್ದತೆಗಳನ್ನು ನಡೆಸಿದ್ದು, ದಿನಕ್ಕೊಂದು ರಾಜ್ಯದ ಸಭೆ ನಡೆಸಿ ಪರಾಮರ್ಶಿಸಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ತಮ್ಮನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆ ನಡೆಸುವುದರ ಜತೆಗೆ ಇಂಡಿಯಾ ಒಕ್ಕೂಟದದೊಂದಿಗೆ ನಿರಂತರ ಮಾತುಕತೆ ಹಾಗೂ ಬೆಳವಣಿಗೆ ಮೇಲೆ ನಿಗಾ ವಹಿಸಲು ತಂಡ ರಚಿಸಲಾಗಿದೆ.
ಮುಕುಲ್ ವಾಸ್ನಿಕ್ ನೇತೃತ್ವದಲ್ಲಿ ಆರು ಜನರ ತಂಡವು ಒಕ್ಕೂಟದ ಮುಖಂಡರೊಂದಿಗೆ ಚರ್ಚೆ ಹಾಗೂ ಸಮಾಲೋಚನೆಯಲ್ಲಿ ನಿರತವಾಗಿದೆ ಎಂದು ವಿವರಣೆ ನೀಡಿದರು.
ಮೋದಿ ಸರ್ವಾಧಿಕಾರಣೆ ತೋರುತ್ತಿದ್ದು, ಮುಂದೆ ಮತ್ತೆ ಅಧಿಕಾರಕ್ಕೆ ಬಂದರೆ ಇದರ ಎಲ್ಲೇ ಮೀರುತ್ತದೆ. ಈಗಾಗಲೇ ಸ್ವಾಯತ್ತತೆ ಸಂಸ್ಥೆ ಗಳನ್ನು ದುರುಪಯೋಗ ಪಡೆಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಸಲ ನಾಲ್ಕು ನೂರಕ್ಕಿಂತ ಹೆಚ್ಚಿನ ಸೀಟು ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಬೇರೆಯವರಿಗೆ ಏನು ಸಿಗೋದಿಲ್ಲ. 543 ಸೀಟು ತಾವೇ ಗೆಲ್ಲೋದಾಗಿ ಹೇಳುತ್ತಿದ್ದಾರೆ. ಹೀಗಾದ್ರೆ ದೇಶಕ್ಕೆ ಒಳ್ಳೆಯದಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರ ಜಾಹೀರಾತು ಸರ್ಕಾರವಾಗಿದೆ. ಮಾಧ್ಯಮಗಳಲ್ಲಿ ದಿನಾಲು ಬರುತ್ತಿರುವ ನಿರಂತರ ಜಾಹೀರಾತು ಇದಕ್ಕೆ ಸಾಕ್ಷಿಯಾಗಿವೆ. ಪತ್ರಿಕೆಗಳಲ್ಲಿ ಹಾಗೂ ಟಿವಿಗಳಲ್ಲಿ ದಿನಾಲು ಬೆಳಿಗ್ಗೆಯಾದರೆ ಮೋದಿ ಜಾಹೀರಾತು ಬಂದೇ ಬರುತ್ತದೆ. ಮೋದಿ ಇಲ್ಲದೇ ದೇಶ ನಡೆಯುವುದಿಲ್ಲ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ನಾಯಕರು ಪದೇ- ಪದೇ ಕಲಬುರಗಿಗೆ ಅವರ ಅಭ್ಯರ್ಥಿ ನೋಡಲು ಇಲ್ಲವೇ ತಮ್ಮನ್ನು ಹೇಗೆ ಹಣೆಯಬೇಕೆಂಬ ನಿಟ್ಟಿನಲ್ಲಿ ಆಗಮಿಸುತ್ತಿದ್ದಾರೆ.ಕಳೆದ ಚುನಾವಣೆಯಲ್ಲಂತು ರಾಷ್ಟ್ರೀಯ ನಾಯಕರು ಕಲಬುರಗಿಗೆ ಬಂದು ಠೀಕಾಣಿ ಹೂಡಿದ್ದರು ಎಂದು ಖರ್ಗೆ ಟೀಕಿಸಿದರು.
ಇದನ್ನೂ ಓದಿ: Char Dham Yatra: ಸೈಕಲ್ ಏರಿ ಚಾರ್ಧಾಮ್ ಯಾತ್ರೆ ಹೊರಟ ಬಿಹಾರದ ಯುವಕ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.