ಶ್ರೀ ಸುರೇಂದ್ರ ತೀರ್ಥರ ಬೃಂದಾವನ ಸ್ಥಳಕ್ಕೆ ಮಂತ್ರಾಲಯ ಶ್ರೀ ಭೇಟಿ
Team Udayavani, Oct 15, 2018, 1:00 PM IST
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿಜಯವಿಠ್ಠಲ ದೇವಸ್ಥಾನ ಸಮೀಪದಲ್ಲಿ ಮಂತ್ರಾಲಯ ರಾಯರ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸುರೇಂದ್ರ ತೀರ್ಥರ ಬೃಂದಾವನ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ರವಿವಾರ ಹಂಪಿಗೆ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಪತ್ತೆಯಾದ ಶ್ರೀ ಸುರೇಂದ್ರ ತೀರ್ಥರ ಬೃಂದಾವನ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸುತ್ತಮುತ್ತಲಿನ ಪ್ರದೇಶದ ಮಂಟಪಗಳನ್ನು ವೀಕ್ಷಿಸಿದರು.
ನಂತರ ಶ್ರೀ ಸುರೇಂದ್ರ ತೀರ್ಥರಿಗೆ ವಿಜಯನಗರ ಸಾಮ್ರಾಜ್ಯದ ಅರಸ ರಾಮರಾಯ ನೀಡಿದ ತಾಮ್ರ ಶಾಸನ, ಹಲವು ದಾಖಲೆಗಳನ್ನು ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಯರ ಗುರುಗಳಾದ ಶ್ರೀ ಸುರೇಂದ್ರ ತೀರ್ಥರ ಬೃಂದಾವನ ಹಲವು
ದಶಕಗಳಿಂದ ಪತ್ತೆಯಾಗಿರಲಿಲ್ಲ. ಭಾರತೀಯ ಪುರಾತತ್ವ ಹಾಗೂ ರಾಜ್ಯ ಪುರಾತತ್ವ ಇಲಾಖೆ ಹಂಪಿಯಲ್ಲಿ ಉತನನ ಕೈಗೊಂಡ ಸಂದರ್ಭದಲ್ಲಿ ಹಲವು ಕುರುಹುಗಳು ಪತ್ತೆಯಾಗಿದ್ದು, ಬೃಂದಾವನವೂ ಪತ್ತೆಯಾಗಿರುವುದು ಸಂತಸ ತಂದಿದೆ ಎಂದರು.
ಶ್ರೀಸುರೇಂದ್ರ ತೀರ್ಥರು ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರ ಸಮಕಾಲೀನರಾಗಿದ್ದು, ಶ್ರೀ ಸುರೇಂದ್ರ ತೀರ್ಥರಿಗೆ ವಿಜಯನಗರದ ಅರಸ ರಾಮರಾಯ ನೀಡಿದ ಹಲವು ಭೂಮಿಗಳು ಇಂದಿಗೂ ಶ್ರೀಮಠದ ಅಧೀನದಲ್ಲಿವೆ. ಜತೆಗೆ ಶ್ರೀ ಸುರೇಂದ್ರ ತೀರ್ಥರ ಮಠ, ಬೃಂದಾವನದ ಬಗ್ಗೆ ಡಾ| ಇಂದಿರಾರವರು ಸಂಶೋಧನೆ ನಡೆಸಿ ಮಹಾಪ್ರಬಂಧ ಬರೆದಿದ್ದು ಇದರಲ್ಲೂ ಹಲವು ದಾಖಲೆಗಳ ಉಲ್ಲೇಖವಿದೆ.
ಒಟ್ಟಿನಲ್ಲಿ ಇಲ್ಲಿ ಪತ್ತೆಯಾಗಿರುವುದು ಶ್ರೀಸುರೇಂದ್ರ ತೀರ್ಥರದ್ದೇ ಬೃಂದಾವನ ಎಂದು ಸ್ಪಷ್ಟಪಡಿಸಿದರು. ಪತ್ತೆಯಾಗಿರುವ ಬೃಂದಾವನ ಶ್ರೀಸುರೇಂದ್ರ ತೀರ್ಥರದ್ದೇ ಎನ್ನುವುದಕ್ಕೆ ಹಲವು ಸಾಕ್ಷಿಗಳಿವೆ. ಇದರ ಸಮೀಪದಲ್ಲಿ ಇವರ ಆಶ್ರಮ ಗುರುಗಳಾದ ಶ್ರೀರಘುನಂದನ ತೀರ್ಥರ ಮೂಲ
ಬೃಂದಾವನವಿದೆ. ಜೊತೆಗೆ ಇದೇ ಸ್ಥಳದಲ್ಲಿಯೇ ಶ್ರೀವ್ಯಾಸರಾಜರ ಶಿಷ್ಯರಾಗಿದ್ದ ಶ್ರೀ ವಿಷ್ಣುತೀರ್ಥರನ್ನು ಶ್ರೀ ಸುರೇಂದ್ರ ತೀರ್ಥರಿಗೆ ದತ್ತು ನೀಡಿ ಆಶ್ರಮವಿತ್ತ ಕುರುಹುಗಳಿವೆ ಎಂದು ತಿಳಿಸಿದರು.
ಶ್ರೀ ಸುರೇಂದ್ರ ತೀರ್ಥರ ಮಠದ ಆವರಣದಲ್ಲಿ ಪತ್ತೆಯಾಗಿರುವ ಬೃಂದಾವನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.
ಹಂಪಿ ಅತ್ಯಂತ ಪವಿತ್ರ ಸ್ಥಳ. ಪುರಾತತ್ವ ಇಲಾಖೆ ನೀತಿ ನಿಯಮಗಳನ್ನು ಮೀರಿ ಇಲ್ಲಿ ಶ್ರೀ ಮಠದಿಂದ ಯಾವುದೇ ರೀತಿಯ ಕಾರ್ಯ ಕೈಗೊಳ್ಳುವುದಿಲ್ಲ. ಇಲ್ಲಿನ ನೀತಿ, ನಿಯಮಗಳಂತೆ ನಡೆದುಕೊಂಡು ನಮ್ಮಲ್ಲಿರುವ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿ ನಂತರ ಬೃಂದಾವನ ಪುನರ್ ಪ್ರತಿಷ್ಠಾಪನೆ ಸೇರಿದಂತೆ ಪೂಜಾಕೈಂಕರ್ಯ ನಡೆಸಲಾಗುವುದು. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ದಾಖಲೆಗಳನ್ನು ಕಳುಹಿಸಲಾಗುವುದು ಎಂದರು.
ಶ್ರೀಮಠದ ಮಹಾ ಮುಖ್ಯೋಪಾಧ್ಯಾಯ ರಾಜಾ ಎಸ್. ಗಿರಿ ಆಚಾರ್ಯ, ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ಡಾ| ಎನ್. ವಾದಿರಾಜಾಚಾರ್ಯ, ಶ್ರೀ ಮಠದ ಶಿಷ್ಯರಾದ ಗುರುರಾಜ ದಿಗ್ಗಾವಿ, ಅನಂತ ಪುರಾಣಿಕ್, ನಾಗರಾಜ, ಮಂಜುನಾಥ, ಡಣಾಪುರ ವಿಜಯಕುಮಾರ, ಡಾ| ವಿದ್ಯಾಧರ ಕಿನ್ನಾಳ್, ವಿಷ್ಣುತೀರ್ಥ ಕಲ್ಲೂರಕರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.